Thursday, January 21, 2010

ಹೋರಾಟದ ಹಾದಿ



ವಿಜಯ್ ಯ ಚೆಸ್ಸಿನ ಹುಚ್ಚು ಅವನ ಡಿಗ್ರೀಗೆ ಕುತ್ತು ತಂದಿತ್ತು.ಅಂದು ಡಿಗ್ರೀ ಮುಗಿಸದೆ ವಿಜಯ್ ಮನೆ ಸೇರಿದ್ದ.ವಿಜಯ್ ಮನೆಯಲ್ಲಿ ತೋಟ ನೋಡಿಕೊಂಡು,ಊರಲ್ಲಿ ಮದುವೆ,ಉಪನಯನ ,ಪೂಜೆ ಹೀಗೆ ಎಲ್ಲ ಕಾರ್ಯಕ್ರಮಗಳಿಗೆ ಹೋಗುತ್ತಾ ಇದ್ದ.ಮನೆಯಲ್ಲಿ ಬೇಕಾಷ್ಟು ತೋಟ,ಆಸ್ತಿ ಇತ್ತು.ಆದರೂ ತಂದೆಗೆ ಮಗ ಡಿಗ್ರಿ ಮುಗಿಸದ ಕುರಿತು ಭಾರಿ ಬೇಜಾರು ಇತ್ತು.ಮಗನನ್ನು ನಾನಾ ವಿಧದಲ್ಲಿ ಹೇಳಿ,ಕೇಳಿ,ಹಂಗಿಸಿ ನೋಡಿದರು.ಊಹುಂ ಏನು ಪ್ರಯೋಜನವಾಗಲಿಲ್ಲ.ಹೀಗೆ ೪ ವರುಷಗಳು ಕಳೆದವು.ಆದರೆ ದಿನ ಕಳೆದಂತೆ ವಿಜಯ್ ಗು ಹಠ ಬಂದಿತು,ತಂದೆ ನಿತ್ಯ ಬಂದವರ ಎದುರಲ್ಲಿ ಅವಮಾನ ಮಾಡುವುದು ಕಂಡು,ಕೇಳಿ ರೋಸಿ ಹೋಗಿದ್ದ.ಬೆಂಗಳೂರಲ್ಲಿದ್ದು "ಬಿ ಸಿ ಎ" ಮಾಡಬೇಕೆಂದು ಮನದಲ್ಲೇ ನಿರ್ಧರಿಸಿದ.ತನ್ನ ನಿರ್ಧಾರವನ್ನು ಅಮ್ಮನ ಮೂಲಕ ಅಪ್ಪನಿಗೆ ತಿಳಿಸಿದ.ದುಡ್ಡು ವೇಸ್ಟ್ ಇಲ್ಲೇ ತಿಂದು ಉಂಡು ಆರಾಮವಾಗಿ ಇರಬಹುದಲ್ಲ ಎಂದರು ತಂದೆ.ಕೊನೆಗೆ ಅಮ್ಮನ ಮಧ್ಯಸ್ತಿಕೆಯಲ್ಲಿ ರಾಜಿ ಪಂಚಾಯಿತಿಗೆ ನಡೆದು ವಿಜಯ್ ಗೆ ಬೆಂಗಳೂರಲ್ಲಿ "ಬಿ ಸಿ ಎ "ಮಾಡಲು ಅನುಮತಿ ದೊರೆಯಿತು.

ರಾಯರು ಬ್ಯಾಂಕಿನ ಕೆಲಸ ಎಲ್ಲ ಮುಗಿಸಿ ಬೆಂಗಳೂರಿಗೆ ಬಂದರು.ಪ್ರಸಾದ ನಾಯಕರ ಮೂಲಕ ವಿಜಯ್ ಗೆ ರಾಯರು ಬೆಂಗಳೂರಲ್ಲಿ ಕಲಿಯುವ ವಿಚಾರ ತಿಳಿಯಿತು.ರಾಯರನ್ನು ಭೇಟಿಯಾದನು.ಮಾತುಕತೆ ನಡೆಸಿದರು.ಇಬ್ಬರು ಸೇರಿ ಒಂದು ರೂಂ ಮಾಡಿದರು.ರಾಯರು "ಎಂ ಟೆಕ್",ವಿಜಯ್ ಸೆಕೆಂಡ್ ಇನ್ನಿಂಗ್ಸ್ "ಬಿ ಸಿ ಎ".ಜೊತೆ ಜೊತೆಯಲಿ ಅಡುಗೆ ಊಟ,ಕೈಅಡುಗೆಯಲಿ ವಿಜಯ್ ರಾಯರ ಕೈಕೆಳಗೆ ಪಳಗಿದ."ಎಂ ಟೆಕ್ " ಕ್ಲಾಸ್ ಸುರುವಾದ ಮೇಲಂತೂ ರಾಯರಿಗೆ ಪುರುಸೊತ್ತೇ ಸಿಗಲಿಲ್ಲ.ರಾತ್ರಿ ಮಲಗುವಾಗ ೨ ೪೫,೩ ಆಗುತ್ತಿತು.ಬೆಳಗ್ಗೆ ಮತ್ತೆ ಸ್ಟ್ಯಾಂಡರ್ಡ್ ಟೈಮ್ ೭ ೪೫.ಕಾಲೇಜು ರೂಂ,ಪಾರ್ಕ್ ಆಗಾಗ ಬಿಗ್ ಬಜಾರ್,ಪೋರಂ ಗೆ ಭೇಟಿ ನೀಡುತ್ತಿದ್ದರು.ನೋಡುವುದಕ್ಕೆನು ದುಡ್ಡು ಕೊಡುವುದು ಬೇಡವಲ್ಲ,ಮತ್ತೆ ನೋಡುವುದಕ್ಕೆನು ಎಂಬುದು ರಾಯರ ಅಭಿಪ್ರಾಯ."ಬಿ ಎಂ ಟಿ ಸಿ " ಬಸ್ ಪ್ರಯಾಣ.ವಿಜಯ್ ಮಧ್ಯೆ ಮಧ್ಯೆ ಒಮ್ಮೊಮ್ಮೆ ಥಿಯೇಟರ್ ಗೆ ಹೋಗಿ ಬರುತ್ತಿದ.ರಾಯರು ಮಾತ್ರ ಕಾಲೇಜಲ್ಲಿ ಫ್ರೆಂಡ್ಸ್ ಕೈಯಲ್ಲಿ ಸಿಕ್ಕಿದ ಮೂವಿ ಮಾತ್ರ ಕಂಪ್ಯೂಟರ್ ಲ್ಲಿ ನೋಡುತ್ತಿದ್ದರು.ಥಿಯೇಟರ್ ಗೆ ಹೋಗುವ ಪರಿಪಾಠವೇ ಬೆಳೆಸಿರಲಿಲ್ಲ.


ಅದೇ ಸಮಯಕ್ಕೆ ರಾಯರ ಅಣ್ಣನ ಮಗನಿಗೆ 'ಪಿ ಯು ಸಿ' ಮುಗಿದಿತ್ತು.ಅಲ್ಲೂ ಇದೆ ಚಿಂತೆ,ಮುಂದೇನು? 'ಬಿ ಎಸ್ ಸಿ' ಅಥವಾ 'ಇಂಜಿನೀಯರಿಂಗ್' ಅಥವಾ 'ಟಿ ಸಿ ಎಚ್' ಹೀಗೆ ಅಲ್ಲಂತೂ ಪಟ್ಟಿಗಳು ತುಂಬಾ ಉದ್ದವಾಗಿದ್ದವು.ರಾಯರು ಹೇಳಿದರು ಅಲ್ಲ ಅರ್ಥ ಆಗುವ ಹಾಗೆ ವಿವರಿಸಿದರು,ತಮ್ಮ ಉದಾಹರಣೆಯನ್ನೇ ತೆಗೆದುಕೊಂಡು ಮನದಟ್ಟು ಮಾಡಿದರು.ಎಲ್ಲದರ ಫಲವೇ ಕೊನೆಯ ಆಯ್ಕೆ "ಇಂಜಿನೀಯರಿಂಗ್"."ಸಿ ಇ ಟಿ " ಸೆಲ್ ಗೆ ಹೋಗಲು ತಂದೆ ಮಗ ಇಬ್ಬರು ರಾಯರ ರೂಮಿಗೆ ಬಂದರು.ರಾಯರು ಬೆಳಗ್ಗೆಯೇ ಬಸ್ ಸ್ಟ್ಯಾಂಡ್ಗೆ ಬಂದು ಕರೆದುಕೊಂಡು ಹೋದರು ಯಾಕೆಂದರೆ ಅವರ ಅಣ್ಣ ಮತ್ತು ಮಗ ಇಬ್ಬರು ಬೆಂಗಳೂರನ್ನು ಮೊದಲೇ ನೋಡಿದವರಲ್ಲ.ರಾಯರ ರೈಸ್ ಬಾತ್,ಅದನ್ನು ಮಾಡುವ ವೇಗ,ರಾಯರ ಅಡುಗೆ ಕ್ರಮ,ಇವೆಲ್ಲವೂ ರಾಯರ ಅಣ್ಣನ ಮಗನಲ್ಲಿ ಮುಂದೆ ನಾನೂ ಕೈ ಅಡುಗೆ ಮಾಡಬಹುದೇನೋ ಎಂಬ ಭಾವನೆ ಮೂಡಿಸಿತು.ರಾಯರು "ಸಿ ಇ ಟಿ" ಸೆಲ್ ಗೆ ಕರೆದುಕೊಂಡು ಹೋದರು.ಹೀಗೆ ಕಾಲೇಜು ಆಯ್ಕೆ ಎಲ್ಲ ಆಗಿ ಮರಳಿ ರೂಮಿಗೆ ತಲುಪುವಾಗ ಸಂಜೆ ೬ ಆಗಿತ್ತು.

ರಾಯರು ಎಸೈನ್ಮೆಂಟ್,ಸೆಮಿನಾರ್,ಪ್ರಾಜೆಕ್ಟ್ ಎಂದು ೨ ವರ್ಷ ತುಂಬಾ ಕಷ್ಟ ಪಟ್ಟರು.ಆದರೆ ಪಟ್ಟ ಕಷ್ಟಕ್ಕೆ ಫಲ ಒದಗುವ ಸಮಯ ಸನ್ನಿಹಿತವಾಯಿತು.ಕೊನೆಯ ಸೆಮಿಸ್ಟರ್ ನಲ್ಲಿರಬೇಕಾದರೆ ನಡೆದ ಕ್ಯಾಂಪಸ್ ಇಂಟರ್ವ್ಯೂನಲ್ಲಿ ರಾಯರಿಗೆ ಉದ್ಯೋಗವಾಯಿತು.ಇರುವ ೨೦ ಜನರಲ್ಲಿ ೮ ಜನರನ್ನು ಕಂಪೆನಿ ಅರಿಸಿತ್ತು ಅದರಲ್ಲಿ ನಮ್ಮ ರಾಯರು ಒಬ್ಬರು.ಬ್ರಹ್ಮರಾಯರು ಕಣ್ಣನ್ನು ಎರಡೆರಡು ಸಲ ಉಜ್ಜಿ ನೋಡಿದರು.ಕೊನೆಯ ಆಸೆಯು ಕಮರಿತು.ಇನ್ನು ಮಗನನ್ನು ಹಿಡಿಯಲು ಸಾಧ್ಯವಿಲ್ಲ.


ರಾಯರು ಕೆಲಸಕ್ಕೆ ಸೇರಿದರು,ವಿಜಯ್ ಯ "ಬಿ ಸಿ ಎ "ಯು ಒಂದು ಹಂತಕ್ಕೆ ಬಂದಿತು.ರಾಯರು ವಿಟ್ಲದ ಬ್ಯಾಂಕ್ಗೆ ಬಂದರು.ಅದೇ ಮ್ಯಾನೇಜರ್,ರಾಯರು ನನಗೆ ಕೆಲಸವಾಗಿದೆ ನಾನು ಲೋನ್ ಕಟ್ಟಲು ಪ್ರಾರಂಭಿಸುತ್ತೇನೆ ಎಂದರು.ಮ್ಯಾನೇಜರ್ ಲೆಕ್ಕ ಹಾಕಿದರು,ಕೊನೆಗೆ ಕಟ್ಟುವಾಗ ಹಣ ಅಸಲು ಬಡ್ಡಿ ಎಲ್ಲ ಸೇರಿ ಅಸಲು ಮೊತ್ತದ ಒಂದೂವರೆಯಷ್ಟಾಗಿತ್ತು.ಮೊದಲಿಗೆ ಚಕ್ರ ಬಡ್ಡಿ ಇಲ್ಲ ಎಂದಿದ್ದ ಮ್ಯಾನೇಜರ್ ಈಗ ಲೆಕ್ಕ ಹಾಕುವಾಗ ಅದು ಚಕ್ರ ಬಡ್ಡಿ ಆಗುತ್ತದೆ,ಅವತ್ತು ಹೇಳಲು ಮರೆತೆ ಎಂದರು.

ದಿನ ಕಳೆದಂತೆ ವಿಜಯ್ "ಬಿ ಸಿ ಎ " ಮುಗಿಯಿತು.ಮಗನಲ್ಲಾದ ಪರಿವರ್ತನೆ ವಿಜಯ್ ತಂದೆಗೂ ಆಶ್ಚರ್ಯ ಹುಟ್ಟಿಸಿತ್ತು.ಅವರು ರಾಯರಿಗೆ ಖುದ್ದಾಗಿ ಫೋನ್ ಮಾಡಿ ತಮ್ಮ ಕೃತಜ್ಞತೆಯನ್ನು ತಿಳಿಸಿದರು.ವಿಜಯ್ ಗು ಆತ್ಮವಿಶ್ವಾಸ ತುಂಬಿ,ಅವನನ್ನು ಒಂದು ದಾರಿಗೆ ತರಲು ರಾಯರು ಬಹಳ ಪ್ರಯತ್ನ ಪಟ್ಟಿದ್ದರು ಮತ್ತು ಅದರಲ್ಲಿ ಯಶಸ್ವಿಯಾದರು ಕೂಡ.ವಿಜಯ್ "ಎಂ ಸಿ ಎ "ಗೆ ಸೇರಿದ,ರಾಯರು ಅಲ್ಲೇ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿದ್ದರು.೩ ವರ್ಷದ "ಬಾಂಡ್" ಆಗಿತ್ತು.ರಾಯರು ಮತ್ತು ವಿಜಯ್ ಸೇರಿ ಒಂದು ಡಬಲ್ ಬೆಡ್ ರೂಂ ಇರುವ ಮನೆಗೆ ಶಿಫ್ಟ್ ಆದರು.ರಾಯರು ಬಹಳ ಯೋಚನಾಬದ್ದವಾಗಿ ಸಾಮಾನುಗಳನ್ನು ಜೋಡಿಸತೊಡಗಿದರು.ಸಣ್ಣ ರೂಮಿಂದ ಮನೆಗೆ ಶಿಫ್ಟ್ ಆದ ಹಾಗೆ ಒಂದೊಂದೇ ಸಾಮಾನುಗಳು ಸೇರತೊಡಗಿದವು.ಟಿವಿ,ಫ್ರಿಡ್ಜು ,ವಾಶಿಂಗ್ ಮೆಷಿನ್ ಹೀಗೆ ಎಲ್ಲವು ರಾಯರ ಮನೆ ಸೇರಿದವು.


ರಾಯರ ಅಮ್ಮನಿಗೆ ರಾಯರಿಗೆ ಈಗಾಗಲೇ ವಯಸ್ಸಾಯಿತು ಆದಷ್ಟು ಬೇಗ ಮದುವೆ ಮಾಡಬೇಕು ಎಂಬಾಸೆ.ಬ್ರಹ್ಮರಾಯರೋ ಗಡಿಬಿಡಿ ಇಲ್ಲ ನಿಧಾನಕ್ಕೆ ಆಲೋಚಿಸೋಣ ಎಂಬ ಮನೋಭಾವ ಹೊಂದಿದ್ದರು.ರಾಯರ ಅಮ್ಮನ ಮುಂಚೂಣಿಯಲ್ಲಿ ಕೆಲ ಸಂಬಂಧಗಳು ಬಂದವು.ಹುಡುಗಿ ಹೋಗಿ ನೋಡಿ ಬಂದರು.ಕೆಲವು ಹಿಡಿಸಲಿಲ್ಲ,ಕೆಲವು ಹುಡಿಗಿಯರಿಗೆ ಇಷ್ಟ ಆಗಲಿಲ್ಲ.ಊರಲ್ಲಿ ಎಷ್ಟು ಆಸ್ತಿ ಬದುಕು ಇದೆ ಎಂಬುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಿದ್ದ ಕಾಲವದು.ಕೆಲವರು ಹುಡುಗ ದೂರ ಇರುವುದು,ತಮ್ಮ ಮಗಳನ್ನು ಅಷ್ಟು ದೂರ ಕಳಿಸಲು ಅವರಿಗೆ ಇಷ್ಟ ಇರಲಿಲ್ಲ.ಇನ್ನು ಕೆಲವರು ಆಸ್ತಿ ಬದುಕು ಸಾಲದು ಎಂದರು.ಕೆಲಸವನ್ನು ಯಾರು ಅಷ್ಟು ಸೀರಿಯಸ್ ಆಗಿ ಪರಿಗಣಿಸಲಿಲ್ಲ,ಅವಾಗ ಗೊರ್ಮೆಂಟ್ ಜಾಬ್ ಎಂದರೆ ಎಲ್ಲರಿಗು ಭದ್ರತೆಯ ಭಾವನೆ,ಈ ಪ್ರೈವೇಟ್ ಕಂಪೆನಿ ಮುಂತಾದವು ಅಷ್ಟು ಸಂಪ್ರದಾಯಸ್ತರಿಗೆ ಹಿಡಿಸಲಿಲ್ಲ.

ಅದೇ ಸಮಯಕ್ಕೆ ರಾಯರ ತಾಯಿ ಒಮ್ಮೆ ಜಾತಕ ತೋರಿಸಿದರು.ಜಾತಕ ನೋಡಿದ ಜ್ಯೋಯಿಷರಿಗೆ ಕಣ್ಣೀರು ಬಂತು.ಇಂತಹ ಕಷ್ಟ ಅನುಭವಿಸಿದ ಮತ್ತು ಅದನ್ನು ಎದುರಿಸಿದ ಈ ವ್ಯಕ್ತಿ ಸಾಮಾನ್ಯನಲ್ಲ ಎಂಬ ತೀರ್ಮಾನಕ್ಕೆ ಬಂದರು.ಹುಡುಗನ ಜೀವನ ೩ ಹಂತಗಳು ಬರುವುವು.ಪ್ರತಿಯೊಂದು ಹಂತ ಕಳೆದ ಹಾಗೂ ಹುಡುಗ ಮತ್ತಷ್ಟು ಅಭಿವೃದ್ದಿ ಹೊಂದುವನು.ಈಗ ನಡೀತಾ ಇರುವುದು ಸಂಘರ್ಷದ ಹಾದಿ,ಮುಂದೆ ಬರುವುದು ಹೋರಾಟದ ಬದುಕು.ಕೊನೆಯಲ್ಲಿ ಸಿಗುವುದು ಆಳ್ವಿಕೆಯ ಭಾಗ್ಯ.ಅದ್ಬುತ ಜಾತಕ.ಇವನ ಮದುವೆ ಜಾತಕ ನೋಡದೆ ಮಾಡುವ ಹಾಗಿಲ್ಲ,ಜಾತಕ ನೋಡಲೇಬೇಕು,ಜಾತಕ ಸೇರಿದರೆ ಮಾತ್ರ ಮಾಡಬಹುದು ಎಂದರು.ರಾಮನಾಥ ಬಟ್ಟರು ಅದುವರೆಗೆ ಅಂತಹ ಜಾತಕ ನೋಡಿರಲಿಲ್ಲ.ರಾಯರ ತಾಯಿ ಹೊರಟು ಹೋದ ಮೇಲೆ ಬಟ್ಟರು ತಮ್ಮ ಶಿಷ್ಯನನ್ನು ಕರೆದು ವಿದ್ಯಾಗಿರಿಯಲ್ಲಿ ಮುಂದೊಂದು ದಿನ ಅದ್ಬುತ ಸಂಭವಿಸಲಿದೆ.ಇದನ್ನು ನೋಡುವ ಭಾಗ್ಯ ನಿನಗೆ ಇದೆ ಎಂದರು.

ಅಲ್ಲಿಗೆ ವಿವಾಹಕ್ಕೆ ಮತ್ತೊಂದು ಅಡಚಣೆ.ಈಗ ಎಲ್ಲ ಓಕೆ ಆದರೆ ಜಾತಕ ಸೇರುತ್ತಿರಲಿಲ್ಲ,ಜಾತಕ ಸೇರಿದರೆ ಕೆಲವು ರಾಯರಿಗೆ ಇಷ್ಟವಾದರೆ ಬ್ರಹ್ಮರಾಯರಿಗೆ ಹಿಡಿಸುತ್ತಿರಲಿಲ್ಲ.ಬ್ರಹ್ಮರಾಯರಿಗೆ ಹಿಡಿಸಿದ್ದು ರಾಯರಿಗೆ ಓಕೆ ಆಗುತ್ತಿರಲಿಲ್ಲ.ರಾಯರಿಗೆ ಹಿಡಿಸಿದ್ದು ತಂದೆ ,ತಾಯಿ ಇಬ್ಬರಿಗೂ ಓಕೆ ಆದರೆ ಮಾತ್ರ ರಾಯರು ಆ ಹುಡುಗಿ ನೋಡಲು ಹೋಗುತ್ತಿದ್ದರು.

ಹೀಗೆ ಎಲ್ಲವು ಓಕೆ ಆಗಿ ನೋಡಿ ಬಂದ ಕೆಲವು ಹುಡುಗಿಯವರ ಕಡೆಗೆ ಓಕೆ ಆಗುತ್ತಿರಲಿಲ್ಲ.ಅದು ಅಷ್ಟೇ ಆದರೆ ರಾಯರಿಗೆ ಬೇಜಾರು ಆಗುತ್ತಿರಲಿಲ್ಲ.ಆದರೆ ಎಲ್ಲೆಡೆಯಿಂದ ಬಂದದ್ದು ಒಂದೇ ಅಭಿಪ್ರಾಯ "ಹುಡುಗನ ಗುಣ ನಡತೆ ಬಗ್ಗೆ ೨ ಮಾತಿಲ್ಲ,ಕೆಲಸ ಎಲ್ಲ ಓಕೆ ಆದರೆ ಮನೆಯಲ್ಲಿ ಆಸ್ತಿ ಬದುಕು ಸಾಲದು,ಹಳೆ ಮನೆ,ಮನೆ ಅಂಗಳಕ್ಕೆ ವರೆಗೆ ರೋಡಿನ ವ್ಯವಸ್ತೆ ಇಲ್ಲ."ಹೀಗೆ ಯಾವುದು ಮುಖ್ಯವೋ ಅದನ್ನು ಬಿಟ್ಟು ಎಲ್ಲರು ದುಡ್ಡು,ದುಡ್ಡು ಅಂದಿದ್ದು ರಾಯರಿಗೆ ಬಹಳ ನೋವನ್ನು0ಟುಮಾಡಿತ್ತು.ಸತತವಾಗಿ ೫ ಸಂಭಂಧಗಳು ಇದೆ ಅಭಿಪ್ರಾಯಕ್ಕೆ ಮುರಿದುದು ಒಂದು ಕ್ಷಣ ರಾಯರನ್ನೇ ಅಧೀನರನ್ನಾಗಿಸಿತ್ತು.ರಾಯರು ಒಮ್ಮೆ ಇನ್ನು ಮದುವೆಯೇ ಬೇಡ,ಇನ್ನು ದೊಡ್ಡ ಆಸ್ತಿ,ಮನೆ ಮಾಡಿದ ಮೇಲೆಯೇ ಮದುವೆ ಸಾಕು ಎಂಬ ತೀರ್ಮಾನಕ್ಕೆ ಬಂದಿದ್ದರು.

ಅದೇ ಸಮಯಕ್ಕೆ ರಾಯರ, ಕಡೆಯ ಸೋದರಮಾವ ಒಂದು ಸಂಭಂದ ತಂದರು.ರಾಯರು ಆದರೆ ಆಯಿತು, ಇದೆ ಕೊನೆ,ಇಲ್ಲವಾದರೆ ಇನ್ನು ಸಧ್ಯಕ್ಕಿಲ್ಲ ಎಂದು ಹೇಳಿ ಹುಡುಗಿ ನೋಡಲು ಹೋದರು.ರಾಯರು ತುಂಬಾ ಓಪನ್ ಯಾವುದೇ ಮುಚ್ಚು ಮರೆ ಇಲ್ಲದೆ ತಮ್ಮ ಕೆಲಸ,ಮನೆಯ ಪರಿಸ್ತಿತಿ,ಎಲ್ಲ ಹೇಳಿದರು.ಯಾವುದೇ ಸಂಶಯಗಳಿದ್ದರು ಕೇಳಬಹುದು ಎಂದು ಹೇಳಿ ಬಂದರು. ರಾಯರಿಗೆ ಒಪ್ಪಿಗೆ ಆಯಿತು.ಜಾತಕವು ಸೇರಿತು,ನೋಡಿದ ಪುತ್ತೂರಿನ ರಾಮನಾಥರು ಹೇಳಿ ಮಾಡಿಸಿದ ಜೋಡಿ ಎಂದರು.ಈ ಸಲ ವಿಶೇಷವಾಗಿ ಬ್ರಹ್ಮರಾಯರು ಮನೆಯಲ್ಲಿ ಒಪ್ಪಿಗೆ ಸೂಚಿಸಿದರು.ಬ್ರಹ್ಮರಾಯರು ಅಷ್ಟು ಸುಲಭವಾಗಿ ಯಾವುದಕ್ಕೂ ಅನುಮತಿ ಕೊಡುತ್ತಿರಲಿಲ್ಲ,ಆದರೆ ಈ ಸಲ ಗ್ರೀನ್ ಸಿಗ್ನಲ್ ನೀಡಿದ್ದು ರಾಯರಿಗೆ ಆಶ್ಚರ್ಯವನ್ನುಂಟು ಮಾಡಿತು.ಹುಡುಗಿಯಮನೆಯವರ ಉತ್ತರಕ್ಕಾಗಿ ಕಾದು ಕುಳಿತರು.ಎಲ್ಲರಿಗಿಂತ ಹೆಚ್ಚಿನ ಆತಂಕ ರಾಯರ ತಾಯಿಗೆ,ಎಲ್ಲಿಯಾದರೂ ಇದು ಮತ್ತೆ ಹಿಂದಿನದಂತಾದರೆ ಏನು ಮಾಡುವುದು ಎಂಬುದೇ ಯೋಚನೆಯಾಯಿತು.೫ ದಿನ ಕಳೆಯಿತು,ಸರಿ ರಾಯರು ಆಸೆ ಬಿಟ್ಟರು.೬ನೆಯ ದಿನ ರಾಯರಿಗೆ ಹುಡುಗಿಯ ಮನೆಯಿಂದ ಫೋನ್,ಹುಡುಗಿಯ ತಂದೆ ಕಾಲ್ ಮಾಡಿದ್ದರು.ನಿಮ್ಮ ನಡೆ ನುಡಿ ನಮಗೆ ಇಷ್ಟವಾಗಿದೆ,ಆದರೆ ನಿಮ್ಮ ಮನೆ,ಆಸ್ತಿ...ರಾಯರು ಹಲೋ ಹಲೋ ಎಂದರು,ಫೋನ್ ಕಟ್ ಆಗಿತ್ತು.


ಮುಂದುವರೆಯುವುದು...


1 comment: