Tuesday, January 19, 2010

ಹೋರಾಟದ ಹಾದಿ



ಅಮ್ಮ ಹೊರಡು ಗಾಬರಿ ಏನು ಇಲ್ಲ ಅಪ್ಪ ತಲೆಸುತ್ತಿ ಬಿದ್ದಿದ್ದಾರಂತೆ,ದಿನೇಶ ಪೈಗಳು ಅಸ್ಪತ್ರೆಗೆ ಕರಕೊಂಡು ಹೋಗ್ತಿದ್ದಾರೆ,ನಾವು ಹೋಗುವ ಎಂದರು.ಸರಿ ಎಂದು ರಾಯರ ತಾಯಿ ಹೊರಟರು.ಆಸ್ಪತ್ರೆಗೆ ತಲುಪುವಾಗ ಅಲ್ಲಿ ಹೊರಗಡೆ ಪೈಗಳು ಕಾಯುತ್ತಿದ್ದರು.ರಾಯರನ್ನು ಪಕ್ಕಕ್ಕೆ ಕರೆದು,ಚವರ್ಕಾಡು ತಿರುವಲ್ಲಿ ಇರುವ ಹೊಂಡಕ್ಕೆ ಬಿದ್ದಿದ್ದರು,ತಲೆಗೆ ಬಹಳ ಪೆಟ್ಟಾಗಿದೆ,ಬಿದ್ದ ಕೂಡಲೇ "ಮೂರ್ತಿ" ಎಂದು ಕರೆದಿದ್ದರು,ಅಲ್ಲೇ ಪಕ್ಕದಲ್ಲಿಯೇ ಹೋಗುತ್ತಿದ್ದ ರಾಮಣ್ಣನಿಗೆ ಕೇಳಿಸಿ ಜನ ಸೇರಿ ಎತ್ತುವುದರ ಒಳಗೆ ಬಹಳ ರಕ್ತ ಹೋಗಿದೆ,ನಾವು ನೋಡುವಾಗಲೇ ಪ್ರಜ್ಞೆ ತಪ್ಪಿತ್ತು,ನಾವು ಕೂಡಲೇ ಜೀಪಲ್ಲಿ ಕರೆದುಕೊಂಡು ಬಂದೆವು,ದಾರಿಯಲ್ಲಿಯೇ ನಿಮಗೆ ಫೋನ್ ಮಾಡಿ ತಿಳಿಸಿದ್ದ್ದು ಎಂದರು.ಈಗ "ತುರ್ತು ನಿಘಾ ಘಟಕ"ದಲ್ಲಿ ಇದ್ದಾರೆ,ಹೋಗಿ ನೋಡಿ ಎಂದರು.

ರಾಯರು,ತಾಯಿಯು ಹೊರಗಿಂದಲೇ ನೋಡಿದರು,ಒಳಗಡೆ ಬಿಡುತ್ತಿರಲಿಲ್ಲ,ತಲೆಗೆ ಬ್ಯಾಂಡೇಜು ಮಾಡಿದ್ದರು. ಡಾಕ್ಟರನ್ನು ಕಂಡು ಮಾತಾಡಿದಾಗ,ಈಗಲೇ ಏನು ಹೇಳಲು ಸಾಧ್ಯವಿಲ್ಲ,ರಕ್ತ ತುಂಬಾ ಹೋಗಿದೆ,ನೋಡುವ ಎಂದರು.ಬೇಕಾದ ಮೆಡಿಸಿನ್ ಎಲ್ಲ ತಂದು ಕೊಟ್ಟು ,ಅಮ್ಮನಿಗೆ ಅಲ್ಲಿ ಇರಲು ಎಲ್ಲ ವ್ಯವಸ್ತೆ ಮಾಡಿ,ನಾಳೆ ಬೆಳಗ್ಗೆ ಬರುತ್ತೇನೆ ಎಂದು ಹೇಳಿ ರಾಯರು ಮತ್ತು ಪೈಗಳು ಹೊರಟು ಬಂದರು.

ಮನೆಗೆ ಬಂದಾಗ ಮಕ್ಕಳು ನಿದ್ದೆ ಮಾಡಿದ್ದರು,ಸಂದ್ಯ ಮಾತ್ರ ಕಾದು ಕುಳಿತಿದ್ದಳು.ಅವಳಿಗೆ ವಿಷಯ ಎಲ್ಲ ತಿಳಿಸಿದರು.ಊಟ ಎಂದಾಗ ರಾಯರು ಇವತ್ತೇನೋ ಮನಸ್ಸೇ ಸರಿಯಿಲ್ಲ,ನೀನು ಮಾಡು ಎಂದರು.ಸರಿ ಇಬ್ಬರು ಊಟ ಮಾಡಲಿಲ್ಲ.ರಾಯರು ಗಣೇಶನಿಗೆ ಫೋನ್ ಮಾಡಿದರು,ಕಾರ್ಯಕ್ರಮಕ್ಕೆ ಬೇಕಾದ ವ್ಯವಸ್ತೆ ಕಡೆಗೆ ನೀನೆ ಗಮನ ಕೊಡಬೇಕು ನಾಳೆ ನಾನು ಸಿಗುವುದು ಕಷ್ಟ ಆದರೆ ಸಂಜೆ ಬರುತ್ತೇನೆ ಎಂದು ವಿಷಯ ಎಲ್ಲ ತಿಳಿಸಿದರು.ಪ್ರಸನ್ನನಿಗೆ ಫೋನ್ ಮಾಡಿ ಈ ಸಲದ ಪ್ರವಾಸದ ಸಂಪೂರ್ಣ ಜವಾಬ್ದಾರಿ ನಿನಗೆ ಕೊಡುತ್ತಿದೇನೆ ನಾನು ಬರಲು ಆಗುವುದಿಲ್ಲ ಎಂದರು.ಅಮೇಲೆ ಒಂದೆರಡು ಕಾಲ್ ಮಾಡಿ ಮಲಗಿದರು.

ಬೆಳಗ್ಗೆ ೪ ಗಂಟೆಗೆ ಎದ್ದು ಸ್ನಾನ "ಸಂಧ್ಯಾವಂದನೆ", "ನಿತ್ಯ ಪೂಜೆ" ಎಲ್ಲ ಮುಗಿಸಿ,ತಮ್ಮ ಕ್ಲಾಸಿಗೆ ಬೇಕಾದ ತಯಾರಿ ಮಾಡಿದರು.ರಾಯರು ನಿತ್ಯವೂ ಕ್ಲಾಸಿಗೆ ಪೂರ್ಣ ತಯಾರಿ ನಡೆಸಿಯೇ ಹೋಗುತ್ತಿದ್ದರು.ವಿದ್ಯಾರ್ಥಿಗಳಿಗೆ ಯಾವುದೇ ಕೆಲಸ ಹೇಳುವ ಮೊದಲು ತಾವು ಅದನ್ನು ಮಾಡಿ ನೋಡುತ್ತಿದ್ದರು.ಬೇಗ ತಿಂಡಿ ಕಾಫಿ ಮುಗಿಸಿ,೬ ಗಂಟೆಗೆ ಮನೆಯಿಂದ ಹೊರಟರು.ಮಧ್ಯಾನ್ನ ಮೇಲೆ ಮಕ್ಕಳು ಬಂದ ಮೇಲೆ ನಾನು ಆಸ್ಪತ್ರೆಗೆ ಬರ್ತೇನೆ ಎಂದಳು ಸಂಧ್ಯಾ .

ಅಮ್ಮ ಏನಾದರು ಬೆಳವಣಿಗೆ ಆಯ್ತಾ ಎನ್ನಲು,ಏನು ಇಲ್ಲ ರಾತ್ರೆ ಎಲ್ಲ ಒಬ್ಬ ಡಾಕ್ಟರ್ ಮತ್ತು ನರ್ಸ್ ನೋಡ್ತಾ ಇದ್ದರು,ಗಂಟೆ ಗಂಟೆಗೆ ಚೆಕ್ಅಪ್ ಮಾಡ್ತಿದ್ದರು ಎಂದರು.ಸರಿ ನೀನು ಫ್ರೆಶ್ ಆಗಿ ಬಾ, ನಾನು ಇಲ್ಲೇ ಇರ್ತೇನೆ ಎಂದರು ರಾಯರು.ಮನೆಯಿಂದ ತಂದ ತಿಂಡಿ ತಿಂದು, ನಾನು ಹೇಗೂ ಇಲ್ಲಿ ಇರ್ತೇನೆ,ನೀನು ಕಾಲೇಜಿಗೆ ಹೋಗುವುದಾದರೆ ಹೋಗು,ತಲೆಗೆ ಒಳ್ಳೆ ಪೆಟ್ಟಾಗಿದೆ ಅಂತ ಕಾಣಿಸುತ್ತೆ ಪಕ್ಕಕ್ಕೆ ಏನೂ ಗೊತ್ತಾಗುವ ಲಕ್ಷನ ಕಾಣುವುದಿಲ್ಲ ಎಂದರು.ಆ ನಾನು ೮ ೩೦ವರೆಗೂ ಇರ್ತೇನೆ.೯ರಿಂದ ೨ ಗಂಟೆ ಕ್ಲಾಸ್ ಇದೆ ಆಮೇಲೆ ಬರ್ತೇನೆ ಎಂದರು.

ವಾರ್ಡ್ ಡಾಕ್ಟರ್ ಮಾತ್ರ ಇದ್ದರು, ಪಶುಪತಿರಾಯರು ಬರುವಾಗ ೧೦ ಗಂಟೆ ಆಗುತ್ತದೆ ಎಂದರು.ರಾಯರು ೮ ೩೦ಗೆ ಹೊರಟರು.ಕಾಲೇಜಿನ ಪಾಠ ಎಲ್ಲ ಮುಗಿಸಿ,ಆಮೇಲೆ ಅರ್ಧ ಗಂಟೆ ಸ್ಟಾಫು ರೂಮಲ್ಲಿ ಇದ್ದು,ಸೀದಾ ಆಸ್ಪತ್ರೆಗೆ ಬಂದರು. ಡಾಕ್ಟರ್ ಪ್ರಜ್ಞೆ ಬಾರದೆ ಏನೂ ಹೇಳುವಂತಿಲ್ಲ ಒಂದ ೨, ೩ ದಿನ ಆದರು ಆದೀತು ಎಂದರು.ಗಣೇಶ , ಪ್ರಸನ್ನ ಇಬ್ಬರು ಬಂದರು.ವಿಷಯ ತಿಳಿದು ನೆಂಟರಿಸ್ತರು ಒಬ್ಬೊಬ್ಬರಾಗಿ ಬರತೊಡಗಿದರು.ಸಂಜೆ ಸಂಧ್ಯಾ ,ಮಕ್ಕಳು ಬಂದು ನೋಡಿ ಹೋದರು.

"ವಿದ್ಯಾಗಿರಿ"ಯ "ವೇದವಿಜ್ಞಾನ ಸಂಗಮ"ದಲ್ಲಿ ಕಿಕ್ಕಿರಿದು ಜನ ಸೇರಿತ್ತು.ವೇದಿಕೆಯ ಮೇಲೆ ಪಲ್ಲತಡಕ,ಪರಕ್ಕಜೆ,ಮಿತ್ತೂರು ಹೀಗೆ ವೈದಿಕ ವಿದ್ವಾಂಸರ ದಂಡೇ ನೆರೆದಿತ್ತು.೭ ವರ್ಷಗಳ ಕಾಲ ವೇದ,ಸಂಸ್ಕೃತ ,ಜ್ಯೋತಿಷ್ಯ ಅಧ್ಯಯನ ಮುಗಿಸಿ ಮೊದಲ ಬ್ಯಾಚ್ ಇಂದು ಹೊರ ಬರುತ್ತದೆ.ಆ ಪ್ರಯುಕ್ತ ಏರ್ಪಡಿಸಿದ ಸಮಾರಂಭದ ಘನ ಅದ್ಯಕ್ಷತೆಯನ್ನು ಪರಕ್ಕಜೆ ಬಟ್ಟರು ವಹಿಸಿದ್ದರು.ಮಂತ್ರೋಪದೇಶ,,ಪ್ರತಿಜ್ಞಾ ವಿಧಿಯನ್ನು ಮುಖ್ಯ ಗುರುಗಳಾದ ಗಣೇಶ ಪ್ರಸಾದರು ನೆರವೇರಿಸಿದರು.ಮುಖ್ಯವಾಗಿ ಗಮನ ಸೆಳೆದದ್ದು ವಿಧ್ಯಾರ್ಥಿಗಳೆಲ್ಲರ ಪರವಾಗಿ ಮಾತಾಡಿದ ಅನೂಪ್ ಭಟ್.ತನ್ನ ಸರಳ ಸುಂದರ ಮಾತಲ್ಲಿ ಅವನು "೩೦ನೆಯ ವಯಸಲ್ಲಿ ರುದ್ರ ಕಲಿತ ಮೂರ್ತಿರಾಯರು ತಮ್ಮ ಪರಂಪರೆಯ ಮೇಲಿನ ಗೌರವದಿಂದ ಗುರುಕುಲ ವ್ಯವಸ್ತೆಯ ಈ ವೇದ ಶಿಕ್ಷಣಕ್ಕೆ ಕೈ ಹಾಕಿದ್ದು ಎಲ್ಲ ವ್ಯವಸ್ತೆ,ಸೌಲಭ್ಯ ದೊರೆಯುವಂತೆ ಮಾಡಿದ್ದು,ಒಳ್ಳೆ ತಿರುಗಾಟ ,ವಿದೇಶದಲ್ಲೂ ಬೇಡಿಕೆ ಇರುವಾಗ ನಮ್ಮ ಗುರುಗಳಾದ ಗಣೇಶ ಪ್ರಸಾದರು ಅವನ್ನೆಲ್ಲ ಬದಿಗಿರಿಸಿ ಇಲ್ಲೇ ಗುರುಗಳಾಗಿ ನಿಂತದ್ದು,ಇವರೀರ್ವರ ಅಪೂರ್ವ ಸಂಗಮದಿಂದ ವಿದ್ಯಾಗಿರಿ ನಿಜವಾಗಿಯೂ ವಿದ್ಯೆಯ ಕಲೆಯ ಅಗರವಾದದ್ದು."ಇವರು ಹಾಕಿಕೊಟ್ಟ ಈ ಉತ್ತಮ ವೇದಿಕೆಯ ಬೆಳವಣಿಗೆಯಲ್ಲಿ ನಮ್ಮ ಕೈಲಾದ ಸಹಾಯ ಮಾಡುತ್ತೇವೆ ಎಂದು ಭಾವಾವೇಶದಿಂದ ಮಾತಾಡಿದ ಅನೂಪ್.ಇದನ್ನು ಹುಟ್ಟುಹಾಕಿ,ಮೊದಲ ಬ್ಯಾಚ್ ಹೊರಬರುವಾಗ ರಾಯರಿಗೂ ಗಣೇಶರಿಗೂ ಆದ ಸಂತೋಷ ಅಷ್ತಿಸ್ತಲ್ಲ.ಏನೋ ಒಂದು ಸಾಧಿಸಿದ ಸಮಾಧಾನ ಮನದಲ್ಲಿತ್ತು,ಅದೇ ಮುಖದ ಮೇಲೆ ಪ್ರಕಟವಾಗಿತ್ತು.

"ವಿದ್ಯಾಗಿರಿ"ಯಿಂದ ಹೋರಾಟ ೧೦ನೆ ಪ್ರವಾಸವದು ಮತ್ತು ರಾಯರ ಅನುಪಸ್ತಿತಿಯಲ್ಲಿ ಮೊದಲನೆಯದು.ಈ ಹಿಂದೆ ನಡೆದ ಎಲ್ಲ ಪ್ರವಾಸಗಳಲ್ಲೂ ರಾಯರೇ ಮುಂದೆ ನಿಂತು ಎಲ್ಲ ವ್ಯವಸ್ತೆ ಮಾಡಿದ್ದರು.ರಾಯರಿಗೆ ಹೆಗಲಿಗೆ ಹೆಗಲು ಕೊಟ್ಟು ಸಹಾಯ ಮಾಡುತ್ತಿದ್ದ "ಪ್ರಸನ್ನ"ರೇ ಈ ಸಲದ ಪ್ರವಾಸದ ಸಂಪೂರ್ಣ ಉಸ್ತುವಾರಿ ಹೊತ್ತರು.ಇಡೀ ಉತ್ತರ ಭಾರತ ಪ್ರವಾಸವದು,ಮತ್ತು ಈವರೆಗೂ ಹಮ್ಮಿಕೊಂಡ ಪ್ರವಾಸಗಳಲ್ಲೇ ಅತ್ಯಂತ ದೊಡ್ಡ ಪ್ರವಾಸವದು.

ಹೀಗೆ ಬೇರೆ ಬೇರೆ ಕಾರ್ಯಗಳನ್ನು ಸರಿಯಾಗಿ ವಿಭಾಗಿಸಿ,ಅದಕ್ಕೆ ಬೇಕಾದ ಎಲ್ಲ ವ್ಯವಸ್ತೆಗಳನ್ನೂ ಒದಗಿಸಿ,ಮತ್ತೆ ಕಾಲೇಜಿನ ಪಾಠವನ್ನು ಮುಗಿಸಿ ಆಸ್ಪತ್ರೆ ಅಲ್ಲಿಂದ ಮನೆ ಹೀಗೆ ೧೦ ದಿನಗಳೇ ಕಳೆದವು."ಬ್ರಹ್ಮರಾಯರ" ಆರೋಗ್ಯದಲ್ಲಿ ಏನೂ ಪ್ರಗತಿ ಕಾಣಿಸಲಿಲ್ಲ.

ಮುಂದೆ ಕೆಲವೇ ದಿನಗಳಲಿ ನಡೆಯಬೇಕಾಗಿದ್ದ ಕೃಷಿ ಸಮ್ಮೇಳನದ ಬಗ್ಗೆ "ಅಚ್ಯುತ ಭಟ್ಟ್"ರಲ್ಲಿ ಮಾತಾಡಿ, ಅದಕ್ಕೆ ಬೇಕಾದ ವ್ಯವಸ್ತೆಗೆ ಜನರನ್ನು ನೇಮಿಸಿ,ಸ್ವಯಂಸೇವಕರಿಗೆ ಕೆಲಸ ಹಂಚಿ,ರಾಯರು ಸಂಜೆ ಮತ್ತೊಮ್ಮೆ ಆಸ್ಪತ್ರೆಗೆ ಹೋಗಿ ಬಂದರು.ದಿನವಿಡೀ ಓಡಾಡಿ ಬಂದ ರಾಯರಿಗೆ ಸ್ನಾನ ಊಟ ಮುಗಿಸುವಾಗ ಸಾಕಸ್ಟು ಸುಸ್ತು ಆಗಿತ್ತು.ಅಲ್ಲಿಯೇ ನಿದ್ದೆಗೆ ಜಾರಿದರು.ಮನಸ್ಸು ಬೇಡ ಬೇಡ ಎಂದರೂ ತಮ್ಮ ಹಳೆಯ ಜೀವನ ಮೆಲುಕು ಹಾಕುತ್ತಿತ್ತು.

*******

ಅಂದು ಮಧ್ಯಾನ್ನ ಬಂದ ಬ್ರಹ್ಮರಾಯರು ಮತ್ತೆ "ಬಿ ಎಡ್" ಬಗ್ಗೆ ಹೇಳಲು ಶುರು ಮಾಡಿದರು.ಆದರೆ ಈ ಸಲ ಎಚ್ಚರ ತಪ್ಪಿದರೆ ಇದು ನನ್ನ ಭವಿಷ್ಯದ ಪ್ರಶ್ನೆ ,ನನ್ನ ಕನಸು ಶಾಶ್ವತವಾಗಿ ಕನಸಾಗಿಯೇ ಉಳಿಯಬೇಕಾದೀತು ಎಂದು ರಾಯರು ಬಹಳ ಜಾಗ್ರತರಾಗಿದ್ದರು.ರಾಯರು ಮನಸ್ಸನ್ನು ಗಟ್ಟಿ ಮಾಡಿ ಕುಳಿತಿದ್ದರು,ಏನೇ ಆಗಲಿ ನಾ "ಎಂ ಎಸ್ ಸಿ" ಮಾಡುವುದೆಂದು ನಿರ್ಧರಿಸಿದ್ದರು.ಹೀಗಾಗಿ ಈ ಸಲ ಬ್ರಹ್ಮರಾಯರ ಆಟ ನಡೆಯಲಿಲ್ಲ,ಅದರೂ ಬ್ರಹ್ಮರಾಯರು ಶತಪ್ರಯತ್ನ ಮಾಡಿದರು.ಕೊನೆಗೂ ಬ್ರಹ್ಮರಾಯರು ಸೋತರು,ಅದರೂ ಮನದಲ್ಲಿ ಹೊಸತೊಂದು ಲೆಕ್ಕಾಚಾರ ಹಾಕಿ "ಎಂ ಎಸ್ ಸಿ"ಗೆ ಒಪ್ಪಿದರು.ಆದರೆ ಇವೆಲ್ಲ ನಡೆಯುವಷ್ಟರಲ್ಲಿ ಎದ್ಮಿಷನ್ ಟೈಮ್ ಕಳೆದಿತ್ತು.ಹೀಗಾಗಿ ಬ್ರಹ್ಮರಾಯರು ಡೊನೇಶನ್ ಕೊಡಬೇಕಾಗಿ ಬಂತು.

ರಾಯರು ಕೊಣಾಜೆಯಲ್ಲಿ "ಎಂ ಎಸ್ ಸಿ"ಗೆ ಸೇರಿದರು.ಇತ್ತ ವಿಜಯ್ ಮನೆ ಸೇರಿದ.ಕಾರ್ತಿಕ್ ಮೈಸೂರ್ ವಿಶ್ವವಿದ್ಯಾಲಯದಲ್ಲಿ "ಎಂ ಎಸ್ ಸಿ " ಸೇರಿದ. ಪ್ರಸಾದ್ ಬೆಂಗಳೂರ್ ಗೆ ಹೋದ,ಅಲ್ಲೇ "ಎಂ ಎಸ್ ಸಿ "ಗೆ ಸೇರಿದ.ಹೀಗೆ ಬಾಳ ದಾರಿಯಲ್ಲಿ ಗೆಳೆಯರು ಬಿನ್ನ ಬಿನ್ನ ದಿಕ್ಕಲ್ಲಿ ಸಾಗಿದರು.

ರಾಯರು ಒಂದು ರೂಂ ಮಾಡಿ,ತಾವೇ ಸ್ವತಹ: ಅಡುಗೆ ಮಾಡುತ್ತಿದ್ದರು.ಒಂದೊಂದೇ ಹೊಸ ಹೊಸ ಪಾಕ ಮಾಡಿ ಎಂ ಎಸ್ ಸಿ ಮುಗಿಯುವಸ್ಟರಲ್ಲಿ ಪಾಕಶಾಸ್ತ್ರ ಪ್ರವೀಣರು ಆಗಿದ್ದರು.ದಿನ ಸಂಜೆ ೫, ೫ ೩೦ ಸುಮಾರಿಗೆ ರಾಯರು ಲ್ಯಾಬ್ಗೆ ಹೋಗುತ್ತಿದ್ದರು.ರಾಯರು ಹೋಗುವಾಗ "ಬಿಸ್ಕತ್ತು,ರಸ್ಕು " ಮುಂತಾದ ತಿಂಡಿ ತೆಗೆದುಕೊಂಡು ಹೋಗುತ್ತಿದ್ದರು.ರಾಯರ ಕೆಲವು ಮಿತ್ರರು ತಿಂಡಿಗಾಗಿಯೇ ಸಂಜೆ ಲ್ಯಾಬ್ಗೆ ಬರುತ್ತಿದ್ದರು ಎಂದರೂ ತಪ್ಪಾಗಲಾರದು ಅನ್ನಿಸುತ್ತೆ.ರಾಯರು ಯಾರು ಬಂದರೂ, ತಾವು ತಿನ್ನುವುದನ್ನು ,ಆಗ ಜೊತೆಯಲ್ಲಿದ್ದವರಿಗೆ ಕೊಡುವುದನ್ನ ಬಿಡಲಿಲ್ಲ.

ಎಷ್ಟೋ ವರುಷದ ಹಿಂದೆ ಬೇರೆಯಾಗಿದ್ದ ಗೆಳೆಯ ರಾಯರಿಗೆ ಇಲ್ಲಿ ಮತ್ತೆ ಸಿಕ್ಕಿದ.ಹಿಂದೆ ರಾಯರ ಜೊತೆಯಲ್ಲಿಯೇ ೫ ನೆ ವರೆಗೂ ಓದಿದ್ದ.ಆಮೇಲೆ "ನವೋದಯ","ಉಜಿರೆ"ಯಲ್ಲಿ ಶಿಕ್ಷಣ ಪಡೆದು ಮತ್ತೆ "ಎಂ ಎಸ್ ಸಿ"ಗೆ ಕೊಣಾಜೆಗೆ ಬಂದಿದ್ದ.ಅವನೇ "ಪ್ರಸನ್ನ" .ರಾಯರಂತೆಯೇ ಹಾವ ಭಾವ.ಟೂರಿಸಂ ಸಾಹಿತ್ಯ ಆಸಕ್ತಿಯ ಕ್ಷೇತ್ರ.ಇವರೀರ್ವರು ಸೇರಿ ಕಾಲೇಜು ಜೀವನವನ್ನು "ಹ್ಯಾಪಿ ಡೇಸ್"ಆಗಿ ಮಾಡಿದರು.ಯಾವುದೇ ಟೂರ್ ಇದ್ದರೂ ಇವರೇ ಮುಂದೆ ನಿಂತು ಎಲ್ಲ ವ್ಯವಸ್ತೆ ಮಾಡುತ್ತಿದ್ದರು.ಕಾಲೇಜಲ್ಲಿ ಎಲ್ಲರು ಇವರನ್ನು "ಪ್ರಸನ್ನ ಮೂರ್ತಿ"ಎನ್ನುತ್ತಿದ್ದರು.

ರಾಯರು ತಮ್ಮ ಮಾತುಗಳನ್ನು "ಬ್ಲಾಗಿಸಲು" ಶುರು ಮಾಡಿದರು.ರಾಯರ "ಸುಂದರ ಜೀವನ "ಕಲ್ಪನೆ ಪ್ರಾರಂಭವಾದದ್ದೇ ಇಲ್ಲಿಂದ.ಹೀಗೆ ರಾಯರು ಇಂಟರ್ನೆಟ್ ಲ್ಲಿ ಬ್ಲಾಗ್ ಶುರು ಮಾಡಿದರು. ತಮ್ಮ ಕಥೆ ,ಕವನ,ಪ್ರವಾಸ ಕಥನ ಎಲ್ಲವನ್ನು ಬ್ಲಾಗ್ ಲ್ಲಿ ಪ್ರಕಟಿಸಿದರು.

ಕಾಲೇಜಿನ ಕೊನೆಯ ೬ ತಿಂಗಳು ಪ್ರಾಜೆಕ್ಟ್ ನ್ನು ರಾಯರು ಬೆಂಗಳೂರಲ್ಲಿ ಮಾಡಿದರು.ಇತ್ತ ಮೈಸೂರಲ್ಲಿದ್ದ ಕಾರ್ತಿಕ್ ನಿಗೆ ಕೆಲಸವಾಯಿತು.ಪ್ರಸಾದ್ ಕಲಿಯುವಿಕೆ ಮುಗಿಸಿ ತಂದೆಯ ಬಿಸಿನೆಸ್ಸ್ ಲ್ಲಿ ಸಹಾಯ ಮಾಡುತ್ತ ಬೆಂಗಳೂರಲ್ಲಿ ಇದ್ದ.ಅದರೆ ರಾಯರಿಗೆ ಮತ್ತೆ ಅದೃಷ್ಟ ಕೈಕೊಟ್ಟಿತು.

ಮುಂದುವರೆಯುವುದು...

2 comments:

  1. Welcome back. Hope your exams were good.

    ReplyDelete
  2. Ya.I got 9.1 grade point in 5th sem.25th our result was announced.

    ReplyDelete