Saturday, November 7, 2009

ಹೋರಾಟದ ಹಾದಿ

--

ನಮ್ಮ ರಾಯರು ಇಂದು ತುಸು ಬೇಗನೆ ಮನೆಗೆ ಬಂದರು.ವರಾಂಡದಲ್ಲಿರುವ ಕುರ್ಚಿಯಲ್ಲಿ ಕುಳಿತು ಆಗಸದತ್ತ ನೋಡಿ ಏನೋ ಯೋಚಿಸುತ್ತಿದ್ದ ರಾಯರಿಗೆ "ಚಾ " ಎಂದು ಶ್ರೀಮತಿ ಕರೆದಾಗ ಪಕ್ಕನೆ ಎಚ್ಚರವಾಯಿತು. ಚಾ ಹೀರುತ್ತಾ ಅಂಗಳದತ್ತ ನೋಡಿದರೆ ಅಲ್ಲಿ "ಅರ್ಜುನ್ "ಕ್ರಿಕೆಟ್ ಆಡುತ್ತಿದ್ದ .ಒಳಗಡೆ ರೂಮಲ್ಲಿ "ಪ್ರೀತಿ" ಏನೋ ಕಂಠಪಾಟ ಮಾಡುವುದು ಕೇಳಿಸುತ್ತಿತ್ತು. ಶ್ರೀಮತಿಯವರು ಆಡಿದ್ದು ಸಾಕು ಪುಸ್ತಕ ಬಿಡಿಸದೆ ತಿಂಗಳುಗಳೇ ಕಳೆದವು ನೋಡು ಅಕ್ಕನನ್ನು ನೋಡಿ ಸ್ವಲ್ಪ ಕಲಿ,ಎಂದು ಮಗನನ್ನು ಗದರಿಸುತ್ತಿದ್ದರು ಆದರೆ ಮಗ ನನಗೆ ಹೇಳಿದ್ದೆ ಅಲ್ಲ ಎಂಬಂತೆ ತನ್ನ ಪಾಡಿಗೆ ತಾನು ಆಡುತ್ತಿದ್ದ.ಇದೆಲ್ಲ ರಾಯರಿಗೆ ಹೊಸದೇನು ಅಲ್ಲ,ಎಲ್ಲ ಮಾಮೂಲಿ.ಕುರ್ಚಿಗೆ ಒರಗಿ ಕೂತ ರಾಯರು ಅಲ್ಲೇ ತೂಕಡಿಸುತ್ತಿದ್ದರು,"ಗುಡ್ ಕೀಪಿಂಗ್ " ಅರ್ಜುನ್ "ವೆಲ್ ಡನ್" ಎಂದೆಲ್ಲ ಅರ್ಜುನ್ ಫ್ರೆಂಡ್ಸ್ ಕೂಗುತ್ತಿದ್ದರು.ಅರೆ ಮಂಪರಿನಲ್ಲಿದ್ದ ರಾಯರಿಗೆ ತಮ್ಮ ಕಾಲದ ನೆನಪಾಯಿತು.

"ಗುಡ್ ಕ್ಯಾಚ್" ಮೂರ್ತಿ ,"ವೆಲ್ ಡನ್" "ಕೀಪ್ ಇಟ್ ಅಪ್" ಎಂದು ನಮ್ಮ ರಾಯರನ್ನು ಎಂಟನೆಯ ವಯಸ್ಸಿನಲ್ಲಿಯೇ "ಕಲ್ಲಪದವಿನಲ್ಲಿ" ಹುರಿದುಂಬಿಸುತ್ತಿದ್ದರು.ರಾಯರು ಕಲ್ಲಪದವಿನ ಅತ್ಯಂತ ಕಿರಿಯ "ವಿಕೆಟ್ ಕೀಪರು",ಆ ಸಾಧನೆಯನ್ನ ಪ್ರಾಯಶ: ಇಂದಿಗೂ ಯಾರೂ ಮುರಿದಿಲ್ಲ.ರಾಯರು ಜನಿಸಿದುದು ತುಂಬು ಕುಟುಂಬದಲ್ಲಿ,ರಾಯರ ತಂದೆ ಟಿ ಸಿ ಹೆಚ್ ಕಾಲೇಜಿನ ಪ್ರಾಧ್ಯಾಪಕರು, ಅವರು ಮಾಸ್ಟ್ರ ಮಾಸ್ಟ್ರು ಅದ್ದರಿಂದ ಅವರು ಊರಲ್ಲೆಲ್ಲ "ಬ್ರಹ್ಮರಾಯರೆಂದೆ" ಪ್ರಸಿದ್ದಿ. ಪುತ್ತೂರಿಂದ ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ "ವಿದ್ಯಾಗಿರಿ" ರಾಯರ ಹುಟ್ಟೂರು.ಬ್ರಹ್ಮರಾಯರದು ಮದ್ಯಮ ವರ್ಗದ ಕುಟುಂಬ,ಕರಾವಳಿ ತೀರ,ಅಡಿಕೆ, ತೆಂಗು ಪ್ರಧಾನ ಬೆಳೆ,ಅಲ್ಲಲ್ಲಿ ಹೂ ಮುಡಿಸಿದಂತೆ ಬಾಳೆಯ ಗಿಡ ,ಹೆಚ್ಚೇನು ಉತ್ಪತ್ತಿ ಇಲ್ಲ,ಗೊರ್ಮೆಂಟ್ ಕೆಲಸ ಇದ್ದಿದ್ದರಿಂದ ಪರವಾಗಿಲ್ಲ ಎಂಬ ಪರಿಸ್ತಿತಿ.ನಮ್ಮ ರಾಯರ ನಾಮಧೇಯ "ಕೇಶವ ಮೂರ್ತಿ " ಎಂದು,ಅವರ ಅಮ್ಮನೇ ಮನೆಗೆಲಸ, ಕೃಷಿ ಕಾರ್ಯ ನೋಡಿದ್ದರಿಂದ ಬ್ರಹ್ಮರಾಯರು ತಮ್ಮ ಹೆಚ್ಚಿನ ಸಮಯವನ್ನು ಕಾಲೇಜಿಗೆ ಮುಡಿಪಾಗಿಟ್ಟಿದ್ದರು.ಹಾಗಾಗಿ ನಮ್ಮ ರಾಯರಿಗೆ ಅಪ್ಪನಿಗಿಂತಲೂ ಅಮ್ಮನೇ ಸ್ವಲ್ಪ ಹತ್ತಿರ.ರಾಯರು ತುಂಬ ಚೂಟಿ,ಆಟ ಪಾಠಗಳಲಿ ಎಲ್ಲದರಲ್ಲೂ ಮುಂದು.ಮನೆಯಲ್ಲಿರುವ ಅಣ್ಣ,ಅಕ್ಕಂದಿರು ದೊಡ್ಡಪ್ಪ ದೊಡ್ದಮ್ಮಂದಿರು ಎಲ್ಲರ ಮುದ್ದಿನ ಕಣ್ಮಣಿ.ಅಕ್ಕ ಮಾಡಿ ಕೊಡುವ ಗೋಧಿ ದೋಸೆ ಎಂದರಂತೂ ರಾಯರಿಗೆ ಪಂಚಪ್ರಾಣ. ರಾಯರು ಏನೇ ಅದರೂ ಚಾಚು ತಪ್ಪದೆ ಎಲ್ಲವನ್ನು ಅಮ್ಮನಿಗೆ ಬಂದು ಹೇಳುವ ಅಭ್ಯಾಸ ಬೆಳೆಸಿದ್ದರು.ಹಾಗಾಗಿ ಅಮ್ಮನಿಗೆ ಶಾಲೆಯಲ್ಲಿ ಏನೇನು ನಡೆಯುತ್ತವೆ,ರಾಯರ ಪ್ರಗತಿ ಎಲ್ಲ ವಿಚಾರಗಳು ಗೊತ್ತಾಗುತ್ತಿದ್ದವು. ರಾಯರು ತಮ್ಮ ಎಂಟನೆಯ ವಯಸ್ಸಿನಿಂದಲೇ ಮನೆಯ ಪಕ್ಕದಲ್ಲಿಯೇ ಇರುವ "ಕಲ್ಲಪದವಿನಲ್ಲಿ" ಕ್ರಿಕೆಟ್ ಆಡಲು ಶುರು ಮಾಡಿದರು. ಶೀಘ್ರದಲ್ಲಿಯೇ ವಿಕೆಟ್ ಕೀಪಿಂಗ್ ನಲ್ಲಿ ಪರಿಣತಿ ಹೊಂದಿದರು. ರಾಯರು ಒಂದೋ ಕ್ರಿಕೆಟ್ ಆಡಲು ಕಲ್ಲಪದವಿಗೆ ಹೋಗುತ್ತಿದ್ದರು ಇಲ್ಲವೇ ದೊಡ್ಡಪ್ಪನ ಮನೆಯಲ್ಲಿ ಟಿವಿ ನೋಡುತ್ತಿದ್ದರು.

ರಾಯರು ಐದನೇ ತರಗತಿಯಲ್ಲಿರುವಾಗ ಒಂದು ನಡೆಯಬಾರದ ಘಟನೆ ನಡೆದೇ ಹೋಯ್ತು. ರಾಯರ ತಾಯಿಗೆ, ಈ ರಾಯರು ದಿನಾ ಹೋಗಿ ಯಾರ್ಯಾರೋ ಜೊತೆ ಸೇರಿ ಕ್ರಿಕೆಟ್ ಆಡುವುದು ಅಸ್ಟು ಇಷ್ಟವಿರಲಿಲ್ಲ.ಅದೊಂದು ಭಾನುವಾರ ರಾಯರು ಬೆಳಗ್ಗೆ ಎದ್ದು ಕ್ರಿಕೆಟ್ ಆಡಲು ಹೋಗಿದ್ದರು.ಸಂಜೆಯಾದರೂ ರಾಯರ ಪತ್ತೆಯೇ ಇಲ್ಲ,ತಾಯಿಯ ಕೋಪ ನೆತ್ತಿಗೇರಿತ್ತು.ಇಂದು ತಕ್ಕ ಶಾಸ್ತಿ ಮಾಡಲೇ ಬೇಕೆಂದು ಬಯಸಿದ್ದರು.ಕೊನೆಗೆ ರಾತ್ರಿ ಏಳುವರೆಗೆ ರಾಯರು ಮನೆಗೆ ಬಂದರು,ಕೈಯಲ್ಲೊಂದು ಕಪ್,ಮತ್ತೊಂದು ಗಾಜಿನ ಲೋಟ ಇತ್ತು ,ರಾಯರ ಮುಖ ಮಂದಹಾಸದಿಂದ ಅರಳುತ್ತಿತ್ತು.ಏನೋ ಸಾಧಿಸಿದ ತೃಪ್ತಿ ಮುಖದಲ್ಲಿ ಪ್ರಕಟಗೊಂಡಿತ್ತು.ಮಗನ ಮುಖ ನೋಡಿದ ಕೂಡಲೇ ಅಮ್ಮನ ಕೋಪವೆಲ್ಲ ಕರಗಿತು.ಆದರೆ ಕೈಯಲ್ಲಿ ಇದ್ದ ಲೋಟ ನೋಡಿದ ಕೂಡಲೇ ಏನೋ ಮನದಲ್ಲಿಯೇ ಹೇಸಿಗೆಯಾಯಿತು.ಹಿಂದೆಮುಂದೆ ನೋಡದೆ ಮಗನ ಕೈಯಲ್ಲಿದ್ದ ಲೋಟವನ್ನು ಎತ್ತಿ ಎಸೆದೇ ಬಿಟ್ಟರು.


ಮುಂದುವರೆಯುವುದು ..........

6 comments:

  1. kaadamabari aavtho ...alla kathe aavuttho?????

    ReplyDelete
  2. super...... all the best............

    ReplyDelete
  3. nice starting .... continue.. good luck..

    ReplyDelete
  4. hey chanda unta...bega continue madu...!!!!

    ReplyDelete
  5. Super...
    Who is this? I know Kollapadavu !!!
    Thanks to Murali for the link.

    ReplyDelete