Sunday, March 14, 2010

ಹೋರಾಟದ ಹಾದಿ

೧೧
ರಾಯರು ನೇರವಾಗಿ ಆಸ್ಪತ್ರೆಗೆ ಬಂದರು.ಬ್ರಹ್ಮರಾಯರಿಗೆ ಮಧ್ಯ ರಾತ್ರಿಯೇ ಪ್ರಜ್ಞೆ ಬಂದಿತ್ತು,ನರ್ಸ್ ಡಾಕ್ಟರ್ ಗೆ ಹೇಳಿ ಡಾಕ್ಟರ್ ಒಮ್ಮೆ ಬಂದು ನೋಡಿ ಹೋಗಿದ್ದಾರೆ.ಇವತ್ತು ಮತ್ತೆ ೧೦ ಘಂಟೆಗೆ ಬರ್ತಾರಂತೆ ಎಂದರು ರಾಯರ ತಾಯಿ.ರಾಯರು ಅಲ್ಲಿಯೇ ಕುಳಿತರು.ಕಿಶೋರ್ ಇವತ್ತು ಊರಿಗೆ ಬರ್ತಾನೆ ಒಂದು ವಾರದ ಹಿಂದೆ ಹೇಳಿದ್ದ,ಒಂದ ನೇರ ಆಸ್ಪತ್ರೆಗೆ ಬಂದರೂ ಬಂದಾನು ಅವನನ್ನು ನಂಬ್ಲಿಕೆ ಸಾಧ್ಯವಿಲ್ಲ ಎಂದರು.ಎಂತ ಈಗ ಊರಿಗೆ?ಎಂದರು ರಾಯರ ತಾಯಿ,ಇಲ್ಲ ಅವನು ಕೆಲಸ ಬಿಟ್ಟ,ಬಹುಶ: ಇನ್ನು ಇಲ್ಲೇ ಇರ್ತಾನೆ ನನ್ನ ತರ ಅನ್ಸುತ್ತೆ ಎಂದರು.

ಸ್ವಲ್ಪ ಹೊತ್ತಿನಲ್ಲೇ ಕಿಶೋರ್,ಗಣೇಶ ಪ್ರಸಾದರು ಇಬ್ಬರು ಬಂದರು.ಅಜ್ಜಿ ಲಾಸ್ಟ್ ಮದುವೆಯಲ್ಲಿ ನೋಡಿದ ಮೇಲೆ ನಾವು ಕಂಡೆ ಇಲ್ಲ,ಇನ್ನು ಯಾವತ್ತು ಇಲ್ಲೇ,ಹೀಗೆ ಮಾತಾಡ್ತಾ ಇರುವುದು,ಅವರು ಅಜ್ಜಿ ,ಮೊಮ್ಮಗ ಮಾತಾಡಲು ಶುರು ಮಾಡಿದರು.ಮತ್ತೆ ಚಿಕ್ಕಪ್ಪ ಹೇಗೆ ನಡೀತಾ ಇದೆ ಕೆಲಸ ಕಾರ್ಯಗಳು,ಬೆಳಗ್ಗೆ ಸೀದಾ ಬರುವ ಅಂತಿದ್ದೆ,ಆಮೇಲೆ ಈ ಲಗೇಜು,ಅವ ಮಗ ಬೇರೆ ಹಠ ಮಾಡ್ಲಿಕೆ ಶುರು ಮಾಡಿದ ಹಾಗೆ ಅವರನ್ನು ಮನೆಗೆ ಬಿಟ್ಟು ಬಂದೆ ಎಂದರು.ಮತ್ತೆ ಅಜ್ಜ ಹೇಗಿದ್ದಾರೆ ಎಂದು ನೋಡಿದ,ಗುರುತು ಸಿಗ್ತಾ ಇದೆ,ಈಗೇನೂ ತೊಂದರೆ ಇಲ್ಲ,ನಿನ್ನೆ ವರೆಗೂ ನಮಗೆ ಸ್ವಲ್ಪ ಮನಸ್ಸಿಗೆ ಹೆದರಿಕೆ ಇತ್ತು ಎಂದರು ರಾಯರು.

ಹಾಗೆಯೆ ಅದು ಇದು ಮಾತಾಡ್ತಾ ಮುಂದಿನ ಕೆಲಸ ಮಾಡಬೇಕಾದ ಕಾರ್ಯಗಳು ಇದರ ಬಗ್ಗೆ ಅಣ್ಣ,ತಮ್ಮ,ಚಿಕ್ಕಪ್ಪ ಮಾತಾಡ್ತಾ ಕಾಲ ಕಳೆದರು.ಡಾಕ್ಟರ್ ಬಂದು ನೋಡಿ ಹೋದರು.ಇನ್ನೇನೂ ಹೆದರಿಕೆ ಇಲ್ಲ,ತಲೆಗೆ ಪೆಟ್ಟಾದ ಕಾರಣ ಮತ್ತು ಸಿಕ್ಕ ಪಟ್ಟೆ ರಕ್ತ ಹೋದ ಕಾರಣ ಪ್ರಜ್ಞೆ ಬರುವುದು ಸ್ವಲ್ಪ ನಿಧಾನವಾಯಿತು,ಇನ್ನೊಂದು ವಾರ ಇಲ್ಲಿದ್ದು ಆಮೇಲೆ ಮನೆಗೆ ಕರೆದುಕೊಂಡು ಹೋಗಬಹುದು ಎಂದರು.೨ ದಿನ ಕಳೆಯಿತು,ಕಿಶೋರ್ ಒಮ್ಮೆ ಎಲ್ಲರನ್ನು ಭೇಟಿ ಮಾಡಿ ಬಂದ.

ಬ್ರಹ್ಮರಾಯರ ಅರೋಗ್ಯ ದಿನೇ ದಿನೇ ಸುಧಾರಿಸತೊಡಗಿತು.ಮುಂದೆ ೪ ದಿನ ಕಳೆದು ರಾಯರು,ಕಿಶೋರ್ ಡಿಸ್ ಚಾರ್ಜ್ ಮಾಡಿ ಕರಕೊಂಡು ಹೋಗಲು ಬಂದಿದ್ದರು.ಬ್ರಹ್ಮರಾಯರು ಕೈ ಸನ್ನೆ ಮಾಡಿ ರಾಯರನ್ನು ಬಳಿ ಕರೆದರು.ಅದೇ ಸಮಯಕ್ಕೆ ಪುತ್ತೂರಿಗೆ ಯಾವುದೊ ಕೆಲಸದ ಮೇಲೆ ಬಂದಿದ್ದ ಶ್ಯಾಮನ್ನನು ಅಲ್ಲಿಗೆ ಬಂದರು.

ಬ್ರಹ್ಮರಾಯರು, "ನೀನು ಮೊದಲ ಸಲ ೫ನೆಯ ತರಗತಿಯಲ್ಲಿರುವಾಗ ಅಮ್ಮ ನಿನ್ನ ಬಹುಮಾನವನ್ನು ಬಿಸಾಡಿದಾಗ ನೀನು ತೋರಿದ ಸಮಯ ಪ್ರಜ್ಞೆ,ಅಲ್ಲಿಂದ ಮುಂದೆ ನಿನ್ನಲ್ಲಾದ ಬದಲಾವಣೆಗಳು ಎಲ್ಲವನ್ನು ದೂರದಲ್ಲೇ ನಿಂತು ನಾನು ಗಮನಿಸುತ್ತಿದ್ದೆ.ನೀನು ಎಲ್ಲರಂತಲ್ಲ ನಿನ್ನಲ್ಲಿ ಅಸಾಧಾರಣ ಶಕ್ತಿ,ಏನೇ ಕೆಲಸ ಕೊಟ್ಟರು ಅದನ್ನು ಮಾಡುವ,ಮಾಡಬೇಕೆಂಬ ಛಲವನ್ನು ಕಂಡೆ.ನಿನ್ನ ಈ ಶಕ್ತಿ ವ್ಯರ್ಥವಾಗಬಾರದು,ಅದನ್ನು ಸಮಾಜದ ೪ ಜನರ ಉಪಯೋಗಕ್ಕೆ ಬಳಸುವಂತಾಗಬೇಕೆಂದು ನಾನು ಅಂದೇ ನಿರ್ಧರಿಸಿದೆ,ನಿನಗೆ ಹೊಸ ಹೊಸ ಪುಸ್ತಕ ಓದುವ ಹುಚ್ಚು ಆಗಲೇ ಜೋರಿತ್ತು,ಅದಕ್ಕೆ ನೀನು ಕೇಳಿದ ಹಾಗೆ ಅದನ್ನು ಕೊಡಿಸಿದೆ,ಹಣದ ಹೊಂದಾಣಿಕೆಯಲ್ಲಿ ಒಂದೋ ಎರಡು ದಿನ ಹಿಂದೆ ಮುಂದೆ ಆಗಿರಬಹುದು ಅಷ್ಟೇ."ಎಸ್ ಎಸ್ ಎಲ್ ಸಿ"ಯಲ್ಲಿ "ಎಸ್ ಪಿ ಎಲ್" ಆಗಿ,ಊರವರನ್ನು,ಮ್ಯಾನೇಜ್ಮೆಂಟ್ ಅನ್ನು ವಿಸ್ವಾಸಕ್ಕೆ ತೆಗೆದುಕೊಂಡು ,ಯಶಸ್ವಿಯಾಗಿ ರಾತ್ರಿ ವಾರ್ಷಿಕೋತ್ಸವ ನಡೆಸಿಕೊಟ್ಟಾಗ ನನ್ನ ಇಚ್ಚೆ ಮತ್ತಷ್ಟು ಬಲವಾಯಿತು.ನೀನು ನಾಯಕನಾಗಿ ನಮ್ಮ ಕುಟುಂಬ,ಬಂಧುಗಳು ,ಊರನ್ನು ಚೆನ್ನಾಗಿ ಮುನ್ನಡೆಸಬಹುದು,ಒಂದು ಪ್ರೇಮದ ವಾತಾವರಣ ನಿರ್ಮಿಸಬಹುದು,ಆದರೆ ನೀನು ಪಕ್ವವಾಗಿದ್ದು ಮಾತ್ರ ಸಾಲದು,ಅಲ್ಲಿಯವರೆಗೆ ನಿನಗೆ ದೊಡ್ಡ ಸಮಸ್ಯೆಗಳು ಎದುರಾಗಲಿಲ್ಲ,ಹಾಗಾಗಿ ನಾನು ಹೆದರಿದ್ದು,ಎಲ್ಲಿ ನೀನು ಇಂಜಿನಿಯರ್ ಆಗಿ ಎಲ್ಲರಂತೆ ದುಡ್ಡು ಸಂಪಾದಿಸಿ,ತಾನು,ತನ್ನ ಮನೆ,ಎಂದು ನಿನ್ನ ಕಾರ್ಯಕ್ಷೇತ್ರ ಕುಂಠಿತವಾಗುತ್ತದೋ ಎಂದು.ಅದಕ್ಕೆ ನೀನು ಇಂಜನೀಯರಿಂಗ್ ಗೆ ಹೋಗುವದನ್ನು ವಿರೋಧಿಸಿದೆ,ಅದರಲ್ಲಿ ನಾನು ಗೆದ್ದೇ,ಆದರೆ ವಾಸ್ತವವಾಗಿ ನಾನು ಸೋತೆ,ನೀನು ನನ್ನ ನಿರೀಕ್ಷೆಗೂ ಮೀರಿ ಕಷ್ಟಪಡಬೇಕಾಯಿತು,ಆದರೆ ನೀನು ಅದನ್ನೆಲ್ಲ ಎದುರಿಸಿ ಗೆದ್ದೆ.ಜೊತೆಗೆ ನೀನು ಪಟ್ಟ ಕಷ್ಟ,ಇನ್ನೊಬ್ಬರು ಪಡಬಾರದು ಎಂದು ನೀನು ಶ್ರಮಿಸಿದೆ,ನಿನ್ನ ಅಣ್ಣನ್ದಿರಿಗೆಲ್ಲ ಮುಂದೆ ತಮ್ಮ ಮಕ್ಕಳ ಭವಿಷ್ಯ ರೂಪಿಸುವಲ್ಲಿ ನೆರವಾದೆ.ಸಾಮಾನ್ಯವಾಗಿ ನಾನು ನೋಡಿದ ಎಷ್ಟೋ ಒಳ್ಳೆಯ ಮಕ್ಕಳು ಡಾಕ್ಟರ್,ಎಂಜಿನಿಯರ್ ಆಗಿ ದೂರ ಹೊರಟು ಹೋಗಿ,ಸಂಪಾದಿಸಿ ಕೊನೆಗೆ ತಂದೆ,ತಾಯಿಯನ್ನು ಅಲ್ಲಿಗೆ ಕರೆದುಕೊಂಡು ಬಿಡುತ್ತಾರೆ.ಊರಲ್ಲಿ ಇದ್ದ ಅಸ್ತಿ,ಪಾಸ್ತಿ ಮಾರಾಟ ಮಾಡಿ ಬಿಡುತ್ತಾರೆ,ನೆಂಟರು ಬಂಧುಗಳ ಮನೆಗೆ ಹೋಗಲು ಪುರುಸೊತ್ತು ಇರುವುದಿಲ್ಲ,"ದೂರ" ಎಂಬ ಹೆಳೆ ಬೇರೆ.ಹಾಗಾಗಿ ನಿಧಾನವಾಗಿ ಸಂಭಂದಗಳು ಕಡಿಮೆ ಆಗುತ್ತವೆ,ಪರಸ್ಪರ ಕಷ್ಟ ಸುಖಕ್ಕೆ ಸ್ಪಂದಿಸುವ ಮಾತೆ ಇಲ್ಲದಂತಾಗುತ್ತದೆ,ಮತ್ತೆ ಬಂಧುಗಳು ಎಂದು ಹೇಳಿಕೊಂಡು ಏನು ಪ್ರಯೋಜನ? ಆ ನಿಟ್ಟಿನಲ್ಲಿ ನಾನು ಯೋಚಿಸಿದೆ .ಆಮೇಲೆ ನೀನು ದೇವರು,ಪೂಜೆ ಇತ್ಯಾದಿಗಳಿಂದ ಸಮದೂರದಲ್ಲಿ ಇದ್ದೆ.ಹಾಗಾಗಿ ನಾನು ನಮ್ಮ ಸಂಪ್ರದಾಯ,ಆಚರಣೆಗಳು ಎಲ್ಲ ಉಳಿಸಿಕೊಂಡು ಹೋಗಿ ಮನೆ ಬೆಳಗುವಂಥ ಸೊಸೆ ತರಬೇಕೆಂದು ತೀರ್ಮಾನಿಸಿದೆ.ಹಾಗಾಗಿ ನಿನಗೆ ಹುಡುಗಿ ಹುದುಕುವಾಗಲು ನಾನು ಬಹಳ ಆಲೋಚನೆ ಮಾಡಿದೆ,ಎಲ್ಲ ದೇವರ ಕೃಪೆ,ಸ್ವಲ್ಪ ತಡವಾಯಿತು ಆದರು ಅದ್ದದ್ದು ಎಲ್ಲ ಒಳ್ಳೆಯದಾಯಿತು.ಆಮೇಲೆ ನೀನು ಕೃಷಿ ಕೆಲಸದ ಕುರಿತು ಹೇಳುವಾಗಲೆಲ್ಲ ನಿನ್ನನ್ನು ವಿರೋಧಿಸುತ್ತ ಬಂದೆ,ಯಾಕೆಂದರೆ ನೀನು ಸ್ವತಹ: ಬಂದು ಮಾಡಿ ನೋಡಬೇಕು ಎಂಬುದು ನನ್ನ ಅಸೆಯಾಗಿತ್ತು,ಆಗ ನಿನಗೆ ನಮ್ಮ ಕೃಷಿಕರ ಕಷ್ಟ ಗೊತ್ತಾಗುತ್ತೆ,ನೀನು ಮಾಡಿ ನೋಡದ ಹೊರತು ನಾವು ಎಷ್ಟೇ ಹೇಳಿದರು ಪ್ರಯೋಜನವಿಲ್ಲ,ಆಗ ನೀನು ಎಲ್ಲರಿಗು ಉಪಯೋಗವಾಗುವ ಹಾಗೆ ಏನಾದರೊಂದು ಹೊಸ ಪರಿಹಾರ ಕಂಡುಹಿಡಿಯಬಹುದು ಎಂಬ ಆಸೆಯಿಂದ ಹೀಗೆ ಮಾಡಿದೆ.ಆದರೆ ಯಾರೊಬ್ಬರು ನನ್ನನ್ನು ಅರ್ಥ ಮಾಡಿಕೊಳ್ಳಲಿಲ್ಲ,ಎಲ್ಲರು ಮಗನ ಅಭಿವೃದ್ದಿಗೆ ತಂದೆ ಕಲ್ಲು ಹಾಕುತ್ತಿದ್ದಾರೆ ಅಂದರು,ಆಡಿಕೊಂಡರು.ಎಲ್ಲರು ನನ್ನ ಬಗ್ಗೆ ಮಾತಾಡಿದರು, ಆದರೆ ಯಾರೊಬ್ಬರು ನನ್ನನ್ನು ಅರ್ಥ ಮಾಡಿಕೊಳ್ಳಲಿಲ್ಲ"ಬ್ರಹ್ಮರಾಯರು ಕಣ್ಣೀರು ಒರೆಸಿಕೊಂಡರು.

" ಅಭಿವೃದ್ದಿಯ ಕುರಿತು ಮಾತಾಡುವಾಗ ಅರ್ಥಿಕ ಬಲವು ಬೇಕು ಎಂಬುದನ್ನು ನಾನು ಮರೆತಿದ್ದೆ ಮತ್ತು ಎಲ್ಲ ರೀತಿಯಿಂದಲೂ ನಾನು ಬರಿ ನನ್ನ ದೃಷ್ಟಿಕೋನದಿಂದಲೇ ನೋಡಿದೆ,ನಿನ್ನ ಮನಸ್ಸಲ್ಲೇನಿದೆ ಎಂಬುದನ್ನು ನೋಡುವ ಪ್ರಯತ್ನ ಮಾಡಲಿಲ್ಲ.ಆದರೆ ನೀನು ಮಾತ್ರ ಪ್ರತಿ ಹಂತದಲ್ಲಿಯೂ ನನ್ನನ್ನು ಎಲ್ಲ ವಿಧದಲ್ಲಿಯೂ ಗೆದ್ದೆ,ಒಳ್ಳೆಯ ಮನಸ್ಸು ಮತ್ತು ಒಳ್ಳೆಯ ಗುಣದಿಂದ ಎಲ್ಲರ ಮನವ ಗೆದ್ದೆ.ಹೀಗೆ ಎಲ್ಲರು ನಿನ್ನಂತೆಯೇ ಕಲಿತು,ಕೆಲಸ ಮಾಡಿ,ಸಂಪಾದಿಸಿ ಜೀವನವನ್ನು ಆನಂದಿಸಿ,ತನ್ನ ಊರಿಗೆ ಬಂದು,ಮನೆಯವರ,ಬಂಧುಗಳ,ನೆಂಟರಿಷ್ಟರ,ಊರವರ ಸಹಾಯ ಮಾಡಿದರೆ,ಬಂಧವು ಉಳಿಯುತ್ತದೆ ಎಲ್ಲೆಡೆ ಒಂದು ಪ್ರೇಮದ ವಾತಾವರಣ ನಿರ್ಮಾಣವಾಗುತ್ತದೆ .ನಾನು ಕನಸಲ್ಲೂ ಯೋಚನೆ ಮಾಡದಷ್ಟನ್ನು ನೀನು ಮಾಡಿ ತೋರಿಸಿದೆ,ನೀನೊಬ್ಬನೇ ಅಲ್ಲ ಒಂದು ಒಳ್ಳೆಯ ತಂಡವನ್ನೇ ರೂಪಿಸಿದೆ,ಇಂದು ನಾವು ಎಲ್ಲ ಮನೆಯವರು,ಬಂಧುಗಳು ಎಲ್ಲರು ಹಿಂದೆಂದೂ ಇರದಷ್ಟು ಅನ್ಯೋನ್ಯವಾಗಿ ಇದ್ದೇವೆ.ಯುವ ಪೀಳಿಗೆಯ ಮಕ್ಕಳಂತೂ ಒಬ್ಬರನ್ನ್ನು ಬಿಟ್ಟು ಇನ್ನೊಬ್ಬರಿಲ್ಲ ಎಂಬುದನ್ನು ನೋಡಿದಾಗ ಮನಸ್ಸಿಗೆ ಆನಂದವಾಗುತ್ತದೆ .ನೀನು ಆರಂಭ ಮಾಡಿದ್ದು,ಒಳ್ಳೆಯ ಅಡಿಪಾಯ ಹಾಕಿ ಕೊಟ್ಟಿದ್ದೀಯ,ಪಂಚಾಂಗ ಗಟ್ಟಿಯಾಗಿದೆ,ಮುಂದೆ ಮಕ್ಕಳು ಇದನ್ನು ಇನ್ನು ಎತ್ತರಕ್ಕೆ ಕೊಂಡೊಯ್ಯುತ್ತಾರೆ .ಒಬ್ಬ ತಂದೆಯಾಗಿ ನನಗೆ ಇನ್ನೇನು ಬೇಕು ?ನೀನು ನನ್ನ ಮಗ ಅಂತ ಹೇಳಲು ಹೆಮ್ಮೆ ಆಗ್ತಾ ಇದೆ."

ಎಲ್ಲರ ಕಣ್ಣುಗಳು ಒದ್ದೆಯಾಗಿದ್ದವು.ರಾಯರು,ಬ್ರಹ್ಮರಾಯರನ್ನು ತಬ್ಬಿಕೊಂಡರು.ಇಬ್ಬರು ಜೋರಾಗಿ ಅತ್ತರು.ಬ್ರಹ್ಮರಾಯರ ಮನಸ್ಸು ನಿರಾಳವಾಗಿತ್ತು.ಸುಮಾರು ೨೫ ವರ್ಷಗಳಿಗೂ ಮೀರಿ ಯಾರಿಗೂ ಹೇಳದೆ ತನ್ನೊಳಗೆ ಇಟ್ಟು,ತಾನೊಬ್ಬನೇ ಎಲ್ಲ ಸಂಕಟವನ್ನು ಅನುಭವಿಸಿದ್ದರು.ಇಂದು ಎಲ್ಲ ಬಿಡಿಸಿ ಹೇಳಿದ್ದರು,ಮನಸ್ಸು ಹಗುರವಾಯಿತು.ರಾಯರಿಗೂ ಅಪ್ಪ ಯಾಕೆ ಹೀಗೆ ಮಾಡ್ತಾ ಇದ್ದಾರೆ ಎಂದು ಮನದಲ್ಲೇ ಅನಿಸುತ್ತಿತ್ತು,ಇಂದು ಎಲ್ಲ ಬಗೆಹರಿಯಿತು.ಆ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗಿ ರಾಯರ ತಾಯಿ,ಕಿಶೋರ್,ಶ್ಯಾಮಣ್ಣ ನಿಂತಿದ್ದರು.

ಬ್ರಹ್ಮರಾಯರನ್ನು ಮನೆಗೆ ಕರೆದುಕೊಂಡು ಬಂದರು.೧೫ ದಿನ ನೋವಿತ್ತು,ಹೊರಗಡೆ ಎಲ್ಲೂ ಹೋಗಲಿಲ್ಲ.ಮತ್ತೆಂದೂ ಬ್ರಹ್ಮರಾಯರು,ರಾಯರಿಗೆ ಅಡ್ಡಿ ಮಾಡಲಿಲ್ಲ,ಎಲ್ಲವನ್ನು ರಾಯರಿಗೆ ಒಪ್ಪಿಸಿ, ನಿವೃತ್ತಿ ಜೀವನದಲ್ಲಿ ತಮ್ಮ ಉಳಿದ ಪ್ರತಿ ಕ್ಷಣವನ್ನು ಅನಂದಿಸತೊದಗಿದರು.

ರಾಯರು "ಹೋರಾಟದ ಹಾದಿ"ಯಲ್ಲಿ ಹೊಸ ಬದಲಾವಣೆಯನ್ನು ತಂದರು.ಈಗ ಕಿಶೋರ್ ಬಂದುದರಿಂದ ಹೊಣೆ ಸ್ವಲ್ಪ ಕಡಿಮೆಯಾಯಿತು.ಜೀವನ ಚಕ್ರದ ೨ ಹಂತಗಳು ಮುಗಿದು ೩ನೆಯ ಹಂತಕ್ಕೆ ಕಾಲಿಟ್ಟರು."ಆಳ್ವಿಕೆಯ ಯುಗ" ಪ್ರಾರಂಭವಾಯಿತು.ಇಲ್ಲಿ ರಾಯರ ಮಾತನ್ನು ಕೇಳುವ,ಅವರ ಯೋಚನೆಗೆ ಒಂದು ಹೊಸ ರೂಪು ಕೊಡುವ ತಂಡ ನಿರ್ಮಾಣವಾಗಿತ್ತು.ವಿದ್ಯಾಗಿರಿಯಲ್ಲಿ ಎಲ್ಲರ ಮನೆ,ಮನ ಸುಖ,ಸಂತೋಷದಿಂದ ತುಂಬಿ ತುಳುಕುತ್ತಿತ್ತು.

|ಶುಭಂ|

No comments:

Post a Comment