Friday, March 12, 2010

ಹೋರಾಟದ ಹಾದಿ

೧೦
ಕೃಷಿ ಕಾರ್ಯಗಳು ಭರದಿಂದ ಸಾಗಬೇಕೆಂದು ರಾಯರು ಬಯಸಿದ್ದರು.ಯೋಚನೆ,ಯೋಜನೆಯೇನೋ ಸರಿಯಾಗಿಯೇ ಇತ್ತು.ಆದರೆ ಮತ್ತೆ ಬ್ರಹ್ಮರಾಯರು ತಮ್ಮ ಹಳೆಯ ಚಾಳಿ ಮುಂದುವರೆಸಿದರು.ನೀನು ಹಾಗೆ ಆಗಬೇಕು,ಹೀಗೆ ಆಗಬೇಕು ಎಂದರೆ ಆಗುವುದಿಲ್ಲ,ನಿನಗೆ ಬೇಕಾದ ಹಾಗೆ ಆಗಬೇಕಿದ್ದರೆ ಇಲ್ಲಿ ಬಂದು ನಿಂದು ಮಾಡಿಸು,ನನಗೆ ವಯಸ್ಸಾಯಿತು ಈಗ ಇರುವ ತೋಟವನ್ನೇ ನೋಡಲು ಆಗುವುದಿಲ್ಲ,ಇನ್ನು ಜಾಗ ಮಾಡಿದರೆ ನನ್ನಿಂದ ನೋಡಲು ಸಾಧ್ಯವಿಲ್ಲ,ನಿಮಗೆ ಪೇಟೆಯಲ್ಲಿರುವವರಿಗೆ ಕೂತು ಹೇಳುವುದು ಸುಲಭ,ನೀವು ಪುಸ್ತಕದಲ್ಲಿ ಓದಿದ ಹಾಗೆ ಇಲ್ಲಿ ಮಾಡಲು ಆಗುವುದಿಲ್ಲ ಎಂದು ಬ್ರಹ್ಮರಾಯರು ಪ್ರಾರಂಭದಲ್ಲಿಯೇ ಹೇಳಿದ್ದರು.ಹಾಗೆ ಇಂದು ಕೆಲಸ ಕಾರ್ಯದಲ್ಲಿಯೂ ತಮ್ಮ ನಿರಾಸಕ್ತಿಯನ್ನು ವ್ಯಕ್ತಪಡಿಸಿದ್ದರು.ಆದರೆ ರಾಯರು ಇದನ್ನು ಯಾವುದನ್ನೂ ಅಷ್ಟು ಗಂಭೀರವಾಗಿ ಪರಿಗಣಿಸಲಿಲ್ಲ.ಊರಿಗೆ ಬಂದಾಗ "ಸೀನ"ನಲ್ಲಿ ಹಾಗೆ,ಹೀಗೆ ಹೇಳಿ ಹೋಗುತ್ತಿದ್ದರು.ಅವನು ರಾಯರ ಐದಿಯವನ್ನು ಸ್ವಲ್ಪ ಮಟ್ಟಿಗೆ ಗ್ರಹಿಸುತ್ತಿದ್ದ,ಇನ್ನು ಸ್ವಲ್ಪ ಅವನ ಐದಿಯವನ್ನು ಸೇರಿಸಿ ಕೆಲಸ ಮಾಡುತ್ತಿದ್ದ.ಒಟ್ಟಾಗಿ ಮೊದಲ ೧,೨ ವರ್ಷ ಕೆಲಸ ಕಾರ್ಯಗಳು ಬಹಳ ಮಂದ ಗತಿಯಲ್ಲಿಯೇ ಸಾಗಿದವು.

ರಾಯರು ಎಂದರೆ ಅವರ ಎಲ್ಲ ಅಣ್ಣಂದಿರ ಮಕ್ಕಳಿಗೂ ಬಹಳ ಪ್ರೀತಿ,"ಅಪ್ಪಚ್ಚಿ,ಅಪ್ಪಚಿ " ಎಂದು ಅವರ ಹಿಂದೆ ಮುಂದೆ ಸುಳಿದಾಡುವರು.ಕಿಶೋರ್,ಗಣೇಶ ಪ್ರಸಾದ ಇವರಿಗೆ ಮತ್ತಷ್ಟು ಹತ್ತಿರ,ಯಾಕೆಂದರೆ ವಯಸ್ಸಲ್ಲಿ ಬಹಳ ಅಂತರವಿಲ್ಲ ೮,೧೦ ವರ್ಷ ವ್ಯತ್ಯಾಸ ಅಷ್ಟೇ.ರಾಯರ ಯೋಚನೆಗಳು,ಕನಸುಗಳು ಇವರಿಗೆ ಬಹಳ ಬೇಗ ಗೊತ್ತಾಗುತ್ತಿತ್ತು.ಉಳಿದವರೆಲ್ಲ ತುಂಬಾ ಸಣ್ಣ.ಅದೊಂದು ದಿನ ರಾಯರು ನಮ್ಮ ಮನೆ,ಕುಟುಂಬ ಇದರ ಹಿನ್ನಲೆ,ಹಿಂದೆ ಇದ್ದ ಘನತೆ,ಗೌರವ ಇದರ ಕುರಿತು ಕಿಶೋರ್,ಗಣೇಶ ಪ್ರಸಾದರಲ್ಲಿ ಮಾತಾಡುತ್ತಿದ್ದರು.ನಾನು ಇನ್ನು ೧,೨ ವರ್ಷದಲ್ಲಿ ಊರಿಗೆ ಬಂದು ಬಿಡುತ್ತೇನೆ.ಆಮೇಲೆ ನಾವು ಪೂರ್ಣ ಪ್ರಮಾಣದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಸುವುದರ ಜೊತೆಗೆ ೪ ಜನರಿಗೆ ಉಪಯೋಗವಾಗುವ ಹಾಗೆ ಏನಾದರು ಮಾಡಬೇಕು ಎಂದರು."ವೇದಪಾಠಶಾಲೆ " ಶುರು ಮಾಡಿದರೆ ಹೇಗೆ ಹಿಂದಿನಿಂದಲೂ ಒಂದು ಒಳ್ಳೆ ಪರಂಪರೆ ಇದೆ ಎಂದು ಗಣೇಶ ಪ್ರಸಾದರು ಕೇಳಿದರು.ಆಗದೆ ಇಲ್ಲ,ಆದರೆ ಇಲ್ಲಿ ಬರಿ ವೇದ ಕಲಿಸುವ ಬದಲು ವೇದದ ಜೊತೆ ಜೊತೆಗೆ ಸಂಸ್ಕೃತ,ಜ್ಯೋಥಿಶ್ಯವು ಕಲಿಸಿದರೆ ಒಳ್ಳೆಯದು ಎಂದು ಕಿಶೋರ್ ಹೇಳಿದ.ರಾಯರು ಹಾಗೆಯೇ ಯೋಚಿಸುತ್ತಿದ್ದರು.ಕಿಶೋರ್,ಗಣೇಶ ನಿಮ್ಮ ಆಲೋಚನೆ ಚೆನ್ನಾಗಿದೆ, ವೈಧಿಕರಿಗೆ ದೇಶ,ವಿದೇಶದಲ್ಲಿ ಬೇಡಿಕೆಯಿದೆ,ಹಾಗಿರುವಾಗ ನಾವು ಅವರಿಗೆ ಇಂದಿನ ಕಾಲದಲ್ಲಿ ನೀವು ಹೇಳಿದ ವಿಷಯಗಳಷ್ಟನ್ನೇ ಕಲಿಸಿದರೆ ಸಾಕಾಗುವುದಿಲ್ಲ,ಇದರ ಜೊತೆಗೆ ಇಂಗ್ಲಿಷ್ ಭಾಷೆಯ ಜ್ಞಾನ ಬಹಳ ಅಗತ್ಯ,ಕಂಪ್ಯೂಟರ್,ನೆಟ್,ಇವುಗಳ ಬಗ್ಗೆ ಗೊತ್ತಿರುವುದು ತೀರ ಅವಶ್ಯ.ಹಾಗಾಗಿ ನಾವು ಇದೆಲ್ಲವನ್ನು ಒದಗಿಸೋಣ,ಏನಂತೀರಿ ಎಂದರು?ರಾಯರು ಹೇಳಿದ ವಿಷಯಗಳೆಲ್ಲವೂ ಸರಿಯಾಗಿಯೇ ಇದ್ದವು.ಗಣೇಶ,ಕಿಶೋರ್ ಇಬ್ಬರು ಒಪ್ಪಿದರು.

ಕಿಶೋರ್ ಬೆಂಗಳೂರಲ್ಲಿ ಕೆಲಸದಲ್ಲಿದ್ದ.ಗಣೇಶ ಪ್ರಸಾದರಿಗೆ ಊರಲ್ಲಿ ಒಳ್ಳೆಯ ಬೇಡಿಕೆ ಇತ್ತು.ಪೂಜೆ,ಹೋಮ,ಮದುವೆ,ಉಪನಯನ ಹೀಗೆ ೩ ಹೊತ್ತು ಹೋದರು ಸಾಕಾಗುತಿರಲಿಲ್ಲ.ಇವರು ಇಬ್ಬರು ಅಣ್ಣ ತಮ್ಮಂದಿರು ಮತ್ತು ಚಿಕ್ಕಪ್ಪ ರಾಯರದು ಅದೊಂದು ಅಪರೂಪದ ಸಂಭಂದ.ರಾಯರ ಬಾಯಿಂದ ವೇದ ಪಾಠಶಾಲೆ ಮಾಡುವ ಎಂದು ಬಿದ್ದದ್ದೇ ತಡ,ಗಣೇಶ ಪ್ರಸಾದರು ಅದಕ್ಕೆ ಬೇಕಾದ ಸಿದ್ದತೆ,ಯೋಜನೆ ರೂಪಿಸಿದರು.ವೇದವನ್ನು ಸ್ವತಃ ಗಣೇಶ ಪ್ರಸಾದರೆ ಮಾಡುವುದು,ಸಂಸ್ಕೃತವನ್ನು ವಿದ್ವಾಂಸ ರಾಮಜೋಶಿಯವರು,ಮತ್ತು ಜ್ಯೋತಿಷ್ಯಕ್ಕೆ ಸತ್ಯನಾರಾಯಣ ಭಟ್ಟರು ಎಂದು ಗಣೇಶ ಪ್ರಸಾದರು ನಿರ್ಧರಿಸಿದರು.ಇನ್ನು ಉಳಿದ ವಿಷಯಗಳ ರೂಪುರೇಷೆಯನ್ನು ಕಿಶೋರ್ ಮಾಡಿದ.ವಾರದಲ್ಲಿ ೨ ದಿನ ಸಂಜೆ ೧ ಗಂಟೆ ಇಂಗ್ಲಿಷ್ ವಿಧ್ಯಾಭ್ಯಾಸ,ಇನ್ನೆರಡು ದಿನ ಗಣಿತಕ್ಕೆ,ಸಾಮಾನ್ಯ ಜ್ಞಾನಕ್ಕೆ ಸಂಭಂದ ಪಟ್ಟ ವಿಷಯಗಳು,ಉಳಿದ ೨ ದಿನ ಕಂಪ್ಯೂಟರ್ ,ರವಿವಾರ ಫ್ರೀ.ಇಂಗ್ಲಿಷ್ ಮತ್ತು ಗಣಿತವನ್ನು ರಾಯರು ಮತ್ತು ಕಂಪ್ಯೂಟರ್ ಸಂಭಂದಪಟ್ಟ ವಿಷಯಗಳನ್ನೂ ಸಂಧ್ಯಾ ಮಾಡುವುದಾಗಿ ನಿರ್ಧರಿಸಿದರು.ಕಿಶೋರ್,ಗಣೇಶರಿಂದ ನೀಲ ನಕ್ಷೆ ಪಡೆದ ರಾಯರು ನೋಡಿ ಅಲ್ಲಲ್ಲಿ ಸ್ವಲ್ಪ ಬದಲಾವಣೆ ಮಾಡಿ ಅದಕ್ಕೆ ಒಂದು ಅಂತಿಮ ರೂಪು ಕೊಟ್ಟರು.ರಾಯರ ೨ ಎಕರೆ ಗುಡ್ಡ ಕಡಿದು ವಿಶಾಲ ಮೈದಾನ ನಿರ್ಮಾಣವಾಯಿತು.ಅಲ್ಲಿ ಸಕಲ ವ್ಯವಸ್ತೆ ಇರುವ "ವೇದ ವಿಜ್ಞಾನ ಸಂಗಮ" ದ ಕಟ್ಟಡ ತಲೆ ಎತ್ತಿತು.ಇವಿಷ್ಟು ನಡೆಯುವಷ್ಟರಲ್ಲಿ ೨ ವರ್ಷ ಕಳೆಯಿತು.ರಾಯರು ಊರಿಗೆ ಬರುವ ಸಮಯ ಸನ್ನಿಹಿತವಾಯಿತು.

ರಾಯರು ತಾವು ಇರುವ ಹುದ್ದೆಗಳಿಗೆ ರಾಜೀನಾಮೆ ನೀಡಿ ಊರಿನತ್ತ ತಮ್ಮ ಪಯಣ ಬೆಳೆಸಿದರು.ಕಂಪನಿ ಬಹಳ ಒತ್ತಾಯ ಮಾಡಿ ರಾಯರನ್ನು ನೀವು ಕಂಪೆನಿಗೆ ಆಗಾಗ ಮಾರ್ಗದರ್ಶನ ನೀಡಬೇಕೆಂದು ಕೇಳಿಕೊಂಡಿತು.ಹಾಗೆಯೆ ರಾಯರು ಊರಲ್ಲೇ ಇದ್ದು ಕೆಲಸ ಮಾಡುವಂತೆ ಮನವಿ ಮಾಡಿತು.ರಾಯರು ಕೆಲವನ್ನು ಒಪ್ಪಿದರು.ಊರತ್ತ ಮುಖ ಬೆಳೆಸಿದರು.ರಾಯರಿಗೆ ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವುದಕ್ಕೆ ತೊಂದರೆ ಆದದ್ದು ಕಿಶೋರ್ ನ ಗೈರುಹಾಜರಿ.ಕಿಶೋರ್ ಕಂಪೆನಿಯಿಂದ "ಯು ಎಸ್ ಎ" ಗೆ ಹೋಗಿದ್ದ.ಹಾಗಾಗಿ ಈಗ ಎಲ್ಲದರ ಹೊಣೆ ರಾಯರು ಮತ್ತು ಗಣೇಶ ಪ್ರಸಾದರ ಹೆಗಲ ಮೇಲೆ ಬಿತ್ತು.

ರಾಯರು ಮನೆಗೆ ಬಂದ ಕೂಡಲೇ "ಬ್ರಹ್ಮರಾಯರ " ಮುಖ ಅರಳಿತು.ಮತ್ತೆ ಮಗ ಪೇಟೆ ಬಿಟ್ಟು ಮನೆ ಕಡೆಗೆ ಬರುತ್ತಾನೆ ಎಂದು ಬ್ರಹ್ಮರಾಯರು ಕನಸ್ಸಲ್ಲು ಯೋಚಿಸಿರಲಿಲ್ಲ.ಮಗನ ಆಗಮನವಾಗುತ್ತಿದ್ದಂತೆಯೇ ಬ್ರಹ್ಮರಾಯರ ಅಸೌಖ್ಯ,ಆಯಾಸಗಳು ಒಂದೊಂದಾಗಿ ಮಾಯವಾಗತೊದಗಿದವು.ರಾಯರು ಬಂದವರೇ ಸುಮ್ಮನೆ ಕೂರಲಿಲ್ಲ.ಪುತ್ತೂರಿನ ಇಂಜಿನಿಯರಿಂಗ್ ಕಾಲೇಜಿಗೆ ಗೌರವ ಅಧ್ಯಾಪಕರಾಗಿ ಸೇರಿದರು.ವಾರದಲ್ಲಿ ೪ ರಿಂದ ೬ ಗಂಟೆ ಪಾಠಕ್ಕೆ ಹೋಗಬೇಕಾಗಿತ್ತು.

ಮೊದಲಿಗೆ ರಾಯರ ವೇದವಿಜ್ಞಾನದ ಕಲ್ಪನೆ ಯಾರಿಗೂ ಹಿಡಿಸಲಿಲ್ಲ.ಎಲ್ಲರು ವಿರೋಧಿಸಿದರು.ಲೌಕಿಕ ಶಿಕ್ಷಣ ಬೇಕಾದರೆ ಮುಂದೆ ಕಲೀತಾರೆ,ಅದನ್ನು ವೇದ ದ ಜೊತೆಗೆ ಸೇರಿಸಿ ಅದರ ಸೌಂದರ್ಯ ಹಾಳುಮಾಡಬೇಡಿ ಎಂದರು.ರಾಯರ ಎಲ್ಲ ಹಿರಿಯ ಮುಖಂಡರನ್ನು,ವಿದ್ವಾಂಸರನ್ನು ಕರೆದು ಒಂದು ಚರ್ಚೆಯ ಏರ್ಪಾಟು ಮಾಡಿದರು.ಅಲ್ಲಿ ರಾಯರು ಹೇಳಿದ ಮಾತುಗಳು "ನಮ್ಮಲ್ಲಿ ಎಷ್ಟೋ ಜನ ತಂದೆ ತಾಯಂದಿರು ತಮ್ಮ ಮಕ್ಕಳನ್ನು ಸಣ್ಣ ಪ್ರಾಯದಲ್ಲೇ ವೇದ ಕಲಿಕೆಗೆ ಕಳುಹಿಸುತ್ತಾರೆ,ಕಾರಣಗಳು ಹಲವಿರಬಹುದು ಆದರೆ ೭ ನೆಯ ತರಗತಿ ಆಗಿ ವೇಧಾಭ್ಯಾಸಕ್ಕೆ ಹೋದರೆ ಬಹಳ ಸಣ್ಣ ಪ್ರಾಯದಲ್ಲೇ ನಮ್ಮ ಮಾಮೂಲಿ ಶಿಕ್ಷಣದ ಜೊತೆಗಿನ ನಂಟು ಕಳೆದು ಹೋಗುತ್ತದೆ,ಮುಂದೊಂದು ದಿನ ಅವನು ಪ್ರೈವೇಟ್ ಆಗಿ "ಎಸ್ ಎಸ್ ಎಲ್ ಲಿ " ಮಾಡುತ್ತೇನೆ ಎಂದರೂ ಆಗ ಅವನಿಗೆ ಕಷ್ಟವಾಗುತ್ತದೆ ಯಾಕೆಂದರೆ ಪ್ರಾಥಮಿಕ ಕೂಡುವುದು,ಕಳೆಯುವುದು ಬಿಟ್ಟರೆ ಬೇರೇನೂ ಗೊತ್ತಿರುವುದಿಲ್ಲ,ಹಾಗಾಗಿ ವಿಷಯಗಳು ಸರಿಯಾಗಿ ಅರ್ಥವಾಗುವುದಿಲ್ಲ ಮತ್ತೆ ಕೋಚಿಂಗ್ ಮುಂತಾದ ಕಡೆ ಹೋದರು,ಹೇಳಿದ ವಿಷಯಗಳು ಅರ್ಥವಾಗದಾಗ ನಿರಾಸಕ್ತಿ ಬಂದು ಸಾಕು ಇನ್ನು ನಾನು "ಎಸ್ ಎಸ್ ಎಲ್ ಸಿ " ಮಾಡಿ ಏನು ಆಗಬೇಕಾಗಿದೆ ಎಂದು ಬಿಟ್ಟು ಬಿಡುತ್ತಾರೆ.ಇನ್ನು ಜ್ಯೋತಿಷ್ಯ ಶಾಸ್ತ್ರ ದ ಅಧ್ಯಯನಕ್ಕೂ ಗಣಿತ ಬಹಳ ಅಗತ್ಯ,ಆದರೆ ಹಿಂದಿನವರು ಕಲಿತಿಲ್ಲವೇ ಎಂದು ನೀವು ಪ್ರಶ್ನಿಸಬಹುದು ಆದರೆ ಹಿಂದೆ ಆದದ್ದು ಆಗಿ ಹೋಯಿತು,ಅಂದಿನ ಶಿಕ್ಷಣದ ಬಗ್ಗೆ ಇಂದು ನಾವು ಮಾತಾಡುವುದು ಬೇಡ.ಮುಂದೆ ಹೊರಗಡೆ ಹೋದಾಗ ಎಲ್ಲಿಯೂ ನಮ್ಮ ಮಕ್ಕಳು ಹಿಂದೆ ಬೀಳಬಾರದು,ನನಗೆ ಇಂಗ್ಲಿಷ್ ಗೊತ್ತಿಲ್ಲ,ಗಣಿತ ಬರಲ್ಲ,ಅಂದು ಅಪ್ಪ ನನ್ನನ್ನು "ಎಸ್ ಎಸ್ ಎಲ್ ಸಿ"ವರೆಗಾದರೂ ಓದಿಸಿದ್ದರೆ ನಾನು ಏನಾದರು ಮಾಡುತ್ತಿದ್ದೆ ಎಂದು ನಮ್ಮ ಮಕ್ಕಳು ಮುಂದೆ ಅಡಿಕೊಳ್ಳಬಾರದು."ಎಸ್ ಎಸ್ ಎಲ್ ಸಿ " ಆಗಿದ್ದರೆ ಮುಂದೆ ಅವರು ಇಷ್ಟವಿದ್ದರೆ ಸಂಸ್ಕೃತದಲ್ಲಿ ಖಾಸಗಿಯಾಗಿ "ಬಿಎ ","ಎಂ ಎ " ಮಾಡಬಹುದು, ಹಾಗಾಗಿ ಒಂದನೆಯದಾಗಿ ವೇಧ ಅಧ್ಯಯನಕ್ಕೆ "ಎಸ್ ಎಸ್ ಎಲ್ ಸಿ " ಕಡ್ಡಾಯವಾಗಿ ಇರಬೇಕು ಮತ್ತು ನಾನು ಹೇಳಿದ ಹಾಗೆ ವೇಧದ ಜೊತೆ ಜೊತೆಯಲ್ಲಿ ಮಾಮೂಲಿ ಶಿಕ್ಷಣದ ಅಂಶಗಳು ಯಾವುದು ಪ್ರಧಾನವಾಗಿ ಜೀವನದಲ್ಲಿ ಉಪಯೋಗಕ್ಕೆ ಬರುತ್ತದೆ ಅವನ್ನು ಕೊಡಬೇಕು.ಇದೆ ನನ್ನ ಆಶಯ,ಇದಕ್ಕಾಗಿಯೇ ಈ ವೇದವಿಜ್ಞಾನ ಸ್ಥಾಪನೆ ಎಂದರು".ಎಲ್ಲರು ಮುಖ ಮುಖ ನೋಡಿದರು,ವಯಸ್ಸಿನಲ್ಲಿ ಸಣ್ಣವನಾದರೂ ಹೇಳುವ ಮಾತಿನಲ್ಲಿ ಅರ್ಥವಿದೆ ಎನಿಸಿತು.ಪರಸ್ಪರ ಮಾತಾಡಿ ವಿದ್ವಾಂಸರು ಒಂದು ತೀರ್ಮಾನಕ್ಕೆ ಬಂದರು.ನಿಮ್ಮ ಯೋಜನೆಯ ಪೂರ್ಣ ಅರಿವಿರಲಿಲ್ಲ,ನೀವು ಇಷ್ಟು ಹೇಳಿದ ಮೇಲೆ ಗೊತ್ತಾಯಿತು,ಈ ವಿಷಯವನ್ನು ಖಂಡಿತವಾಗಿಯೂ ಮುಂದೆ ಕಮಿಟಿ ಸಭೆಯಲ್ಲಿ ಪ್ರಸ್ತಾಪಿಸುತ್ತೇವೆ,ನಿಮ್ಮ ಕಾರ್ಯಕ್ಕೆ ನಮ್ಮೆಲ್ಲರ ಪೂರ್ಣ ಬೆಂಬಲವಿದೆ,ಏನೇ ಸಹಾಯ ಬೇಕಾದರೂ ಸಂಕೋಚ ಬಿಟ್ಟು ಕೇಳಿ,ಒಳ್ಳೆಯ ಶುಭ ಮುಹೂರ್ತದಲ್ಲಿ ತರಗತಿ ಪ್ರಾರಂಭವಾಗಲಿ ಎಂದು ಶುಭ ಹಾರೈಸಿ ಹೋದರು.

ರಾಯರ ಯೋಜನೆಗಳು ದಿನೇ ದಿನೇ ವಿಸ್ತರಿಸತೊದಗಿದವು.ಶ್ಯಾಮಣ್ಣನ ಜೊತೆ ಸೇರಿ ಇಂಗು ಗುಂಡಿ ಅಭಿಯಾನ ಹಮ್ಮಿಕೊಂಡರು.ನೆಲ ಜಲ ಸಂರಕ್ಷಣೆಯ ಕುರಿತು ಹಳ್ಳಿಯಲ್ಲಿ ಜಾಗೃತಿ ಮೂಡಿಸಿದರು.ಗುರುಗಳಾದ ಅಚ್ಯುತ ಭಟ್ಟರು ಮತ್ತು ಶ್ಯಾಮಣ್ಣರ ಜೊತೆ ಸೇರಿ ಕೃಷಿಯಲ್ಲಿ ಹೊಸತು ಏನೇನು ಅಳವಡಿಸಬಹುದು,ಅದಕ್ಕೆ ಸರಕಾರದ ಸಹಾಯ ಏನೇನು ಸಿಗುತ್ತದೆ,ಈಗ ಎಲ್ಲೆಡೆ ಇರುವ ಪದ್ಧತಿಯ ಲೋಪಧೋಶಗಲೇನು,ಎಂಬುದನ್ನು ಚರ್ಚಿಸಿ ಅದನ್ನು ನಮ್ಮ ಸುತ್ತಲಿನ ಜನಕ್ಕೆ ಪರಿಣಾಮಕಾರಿಯಾಗಿ ತಲುಪಿಸುವ ಕಾರ್ಯ ಮಾಡಿದರು.ಅದಕ್ಕಾಗಿ ಹಳ್ಳಿಯ ಜನರನ್ನೆಲ್ಲ ಒಂದೆಡೆ ಸೇರಿಸಿ ಪರಸ್ಪರರ ಕುಂದು ಕೊರತೆಗಳನ್ನೂ ಚರ್ಚಿಸಿ ಎಲ್ಲರು ಬೆರೆತು,ಕಲೆತು ಒಂದು ಸಮಾಧಾನ,ಪರಿಹಾರ ಕಂಡು ಹಿಡಿಯುವ ಕೆಲಸ ಮಾಡಿದರು.ಕೃಷಿ ಪಂಡಿತರಿಂದ ಸಮ್ಮೇಳನದ ವ್ಯವಸ್ತೆ ಮಾಡಿದರು.

ಅದೇ ಸಮಯಕ್ಕೆ ಪ್ರಸನ್ನರು ಊರಿಗೆ ಬಂದರು.ಮಿತ್ರರಿಬ್ಬರು ಸೇರಿ ನಮ್ಮ ಊರಿಂದ ವರ್ಷಕ್ಕೊಂದು ಪ್ರವಾಸದ ವ್ಯವಸ್ತೆ ಮಾಡುವುದು ಎಂದು ಯೋಜನೆ ಹಾಕಿದರು.ಆದರೆ ಅಲ್ಲಿಯವರೆಗೆ ಈ ತರ ವ್ಯವಸ್ತೆ ಯಾರೂ ಮಾಡದೇ ಇದ್ದುದರಿಂದ ಜನರಿಂದ ಅದ್ಹುತ ಪ್ರತಿಕ್ರಿಯೆ ದೊರೆಯಿತು.

ನಮ್ಮ ಊರಲ್ಲಿ ಎಷ್ಟೋ ಜನ ವಿದ್ಯಾರ್ಥಿಗಳು ಪ್ರತಿಭಾವಂತರು ಇದ್ದಾರೆ,ಆದರೆ ಹಣಕಾಸಿನ ಕೊರತೆ ಎಷ್ಟೋ ಪ್ರತಿಭೆಗಳನ್ನು ಸನ್ನಂದಿನಲ್ಲಿಯೇ ಹೊಸಕಿ ಹಾಕುತ್ತದೆ ಎಂಬುದನ್ನು ಮನಗಂಡ ರಾಯರು ಸೂಕ್ತ ಸ್ಕಾಲರ್ಷಿಪ್ ದೊರೆಯುವ ವ್ಯವಸ್ತೆ ಮಾಡಿದರು.ಹಾಗೆಯೆ ಎಷ್ಟೋ ಗ್ರಾಮೀಣ ಪ್ರತಿಭೆಗಳು ಸೂಕ್ತ ಮಾರ್ಗದರ್ಶನದ ಕೊರತೆಯಿಂದ ಬಳಲುತ್ತಿರುವುದನ್ನು ಕಂಡರು.ಅದಕ್ಕಾಗಿಯೇ ಅಡ್ಯನಡ್ಕ ಶಾಲೆಯಲ್ಲಿ ಆಟೋಟದಲ್ಲಿ ಆಸಕ್ತಿ ಇರುವವರಿಗೆ ಒಂದು ತರಬೇತಿ ಕೊಡುವ ವ್ಯವಸ್ತೆ ಮಾಡಿದರು.

೨೦೦೮ ಬಹಳ ಚಾಲೆಂಜಿಂಗ್ ಇಯರ್.ಒಮ್ಮೆಲೇ ಎಲ್ಲರ ಮನೆಯಲ್ಲೂ ಚಿಕೂನ್ ಗುನ್ಯ ಬಂದು ಎಲ್ಲರು ಮಲಗುವಂತಾದರು.ಎಲ್ಲೆಲ್ಲೂ ಮೈ,ಕೈ ನೋವು,ಗಂಟು ನೋವು.ರಾಯರು ಡಾಕ್ಟರ್ "ಸತ್ಯ ಪ್ರಕಾಶ್" ರನ್ನು ಕರೆಸಿಕೊಂಡರು.ಇವರು ರಾಯರ ಫ್ರೆಂಡ್,ಸುಮಾರು ಒಂದು ೨,೩ ತಿಂಗಳುಗಳ ಕಾಲ ಇಡೀ ಹಳ್ಳಿಯಲ್ಲಿ ಸಂಚರಿಸಿ,ಎಲ್ಲರಿಗೂ ಸಮಾಧಾನ ಹೇಳಿ ಬಂದರು.ಕೆಲವರಿಗೆ ಮಾತ್ರೆಯ ಮೇಲೆ ನಂಬಿಕೆ,ಅಂತವರಿಗೆ ಔಷದ,ಇನ್ನು ಚಿಕೂನ್ ಗುನ್ಯಕ್ಕೆ ಮದ್ದಿಲ್ಲ,ನೋವಿಗೆ ಪೈನ್ ಕಿಲ್ಲರ್ ಕೊಡಬಹುದಷ್ಟೇ,ಹಾಗಾಗಿ ನೀವು ನಿಮ್ಮ ಕಷಾಯ,ಹಳ್ಳಿ ಮದ್ದು ಮಾಡಿದರು ಏನು ಅಪಾಯವಿಲ್ಲ ಎಂದು ಒಬ್ಬರು ಡಾಕ್ಟರ್ ಹೇಳಿದಾಗ ಎಷ್ಟೋ ಜನರಿಗೆ ಸಮಾಧಾನವಾಯಿತು.

ಆ ಸಂದರ್ಭದಲ್ಲೇ ಹಳ್ಳಿಯಲ್ಲಿ ಶ್ರಮಧಾನ ಕಾರ್ಯಕ್ರಮ ಸುರುವಾಯಿತು.ಎಲ್ಲರು ಸೇರಿ ಸಾಮಾನ್ಯವಾಗಿ ಎಲ್ಲರಿಗು ಉಪಯೋಗವಾಗುವಂತಹ ಕೆಲಸ ಮಾಡುತ್ತಿದ್ದರು.ರಸ್ತೆ ರಿಪೇರಿ,ಕುಡಿಯುವ ನೀರಿನ ವ್ಯವಸ್ತೆ ಗ್ರಾಮ ನೈರ್ಮಲ್ಯ ಕಾಪಾಡುವುದು ಇತ್ಯಾದಿ.

ರಾಯರ ಮಾತಿಂದ,ಮಾಡಿದ ಕಾರ್ಯದಿಂದ ಪ್ರೇರಣೆಗೊಂಡು ಅವರ ಅಣ್ಣಂದಿರ ಮಕ್ಕಳೆಲ್ಲ ಒಬ್ಬೊಬ್ಬರಾಗಿ ಬಂದು ಸೇರತೊದಗಿದರು.ಒಬ್ಬ ಅಣ್ಣನ ಮಗ "ಡಾಕ್ಟರ್ ಕೈಲಾಸ್ " ಅಂತೂ ವಾರಕ್ಕೆ ೨ ದಿನ ವಿದ್ಯಾಗಿರಿಯಲ್ಲಿರುತ್ತಿದ್ದ,ಉಳಿದ ದಿನ ಅವನ ಬೆಳೆದ ಊರಲ್ಲಿ ಜನರ ಯೋಗ ಕ್ಷೇಮ ವಿಚಾರಿಸುತ್ತಿದ್ದ,ಅಲ್ಲೂ,ಇಲ್ಲೂ ಎರಡು ಕಡೆ ಒಂದೇ ಮಾತು ಡಾಕ್ಟರ್ ಕೈಗುಣ ಒಮ್ಮೆ ಔಷದ ತೆಗೆದುಕೊಂದರೆ ಸಾಕು ರೋಗ ಎಲ್ಲ ಹೊರಟು ಹೋಗುತ್ತೆ ,ಎಲ್ಲಕ್ಕಿಂತ ಮುಖ್ಯವಾಗಿ ಡಾಕ್ಟರ್ ಮಾತಾಡಿಸುವ ರೀತಿಯೇ ಹಾಗೆ ಬೇರೆ ಕಡೆ ಆದರೆ ಹೇಳಬಹುದಿತ್ತು ಇನ್ನೊಮ್ಮೆ ಬರಬೇಕೂಂತ ಕಾಣಿಸುತ್ತದೆ ಅಂತ."ದಿ ಯಂಗ್ ಅಂಡ್ ಡೈನಮಿಕ್ ಡಿ ಸಿ ಆಫೀಸರ್ " ಗೌತಮ್ ಮಂಗಳೂರಿಗೆ ಬಂದ ಮೇಲೆ ಕಾನೂನು ವ್ಯವಸ್ತೆಗೆ ಹೊಸ ಆಯಾಮ ಬಂತು.ನಿಜವಾಗಿಯೂ ಇದ್ದರೆ ಅವರಂಥ ಆಫೀಸೆರ್ ಇರಬೇಕು ಇಂದು ಯಾವುದೇ ಕೆಲಸಕ್ಕಾದರೂ ಬಹಳ ಕಷ್ಟ ಪಡಬೇಕಾಗುವುದಿಲ್ಲ,ಎಲ್ಲ ಇಲಾಖೆಯನ್ನು ಹದ್ದು ಬಸ್ತಿನಲ್ಲಿ ಇಟ್ಟುಕೊಂಡು ಜನರಿಗೆ ಉಪಯೋಗವಾಗುವ ಹಾಗೆ ವ್ಯವಸ್ತೆ ಮಾಡಿದ್ದಾರೆ.ಗೌತಮ್ ಬೇರಾರು ಅಲ್ಲ,ಸಣ್ಣದಾಗಿರುವಾಗ "ಅಪ್ಪುಚ ಅಪ್ಪುಚ" ಎಂದು ರಾಯರನ್ನು ಕರೆಯುತ್ತಿದ್ದ,ಇನ್ನೊಬ್ಬ ಅಣ್ಣನ ಮಗ.

ಎಲ್ಲರು ಒಂದೆಡೆ ಸೇರಿ ಮುಂದಿನ ಯೋಜನೆಗಳನ್ನು ಚರ್ಚಿಸುತ್ತಿದ್ದರು.ಮಕ್ಕಳೆಲ್ಲ ಪರಸ್ಪರ ಒಂದು ಪ್ರೀತಿಯ ವಾತಾವರಣ ನಿರ್ಮಿಸಿರುವುದನ್ನು ಕಂಡು ಶ್ಯಾಮಣ್ಣನ ಕಣ್ಣು ತುಂಬಿ ಬಂತು.ಯಾವುದಕ್ಕಾಗಿ ನನ್ನ ಜೀವನದುದ್ದಕ್ಕೂ ಪ್ರಯತ್ನ ಪಟ್ಟರೋ ಅದು ಇಂದು ಸಾಕಾರವಾಗಿತ್ತು.ಮಕ್ಕಳೆಲ್ಲ ಒಂದಾಗಿ,ಒಟ್ಟಾಗಿ ಸಮಾಜಕ್ಕೆ ಉಪಯೋಗವಾಗುವಂಥ ಕೆಲಸ ಮಾಡುತ್ತಿರುವುದು ಮನಸ್ಸಿಗೆ ಬಹಳ ಆನಂದ ಉಂಟುಮಾಡಿತ್ತು.ಕಿಶೋರ್ ನಿತ್ಯವೂ ಬೆಳವಣಿಗೆ ಕುರಿತು ಫೋನಲ್ಲಿ ಚರ್ಚಿಸುತ್ತಿದ್ದ.ರಾಯರ ವೆಬ್ ಸೈಟ್ ನಿತ್ಯ ಅಪ್ಡೇಟ್ ಆಗುತ್ತಿತ್ತು.ಆ ಮೂಲಕ ಎಲ್ಲ ವಿಷಯಗಳು ಗೊತ್ತಾಗುತ್ತಿದ್ದವು.ಎಷ್ಟೋ ಅಮೂಲ್ಯ ಸಲಹೆಗಳನ್ನು,ತನ್ನ ಅಭಿಪ್ರಾಯವನ್ನು ಅಲ್ಲಿ ಮಂಡಿಸುತ್ತಿದ್ದ.ರಾಯರು ಫೈನಲ್ ಡಿಸಿಸನ್ ತೆಗೆದುಕೊಳ್ಳುವ ಮುಂಚೆ ಕಿಶೋರ್,ಗಣೇಶ ಪ್ರಸಾದರ ಜೊತೆ ಚರ್ಚಿಸುತ್ತಿದ್ದರು.ಈ ೩ ಜನರ ಕೋರ್ ಕಮಿಟಿಯಲ್ಲಿ ಯಾವುದೇ ವಿಷಯವಾದರೂ ಅಂತಿಮ ತೀರ್ಮಾನ ಪಡೆಯುತ್ತಿತ್ತು.

ಅಂದು ಕೈಲಾಸನ ಮದುವೆ,ಗ್ರಹಪ್ರವೇಶ ಕಾರ್ಯಕ್ರಮ ವಿದ್ಯಾಗಿರಿಯಲ್ಲೇ ನಡೆಯಿತು.ಎಲ್ಲ ಗೌಜಿ,ಸಂಭ್ರಮ.ಮಧ್ಯಾನ್ನ ಎಲ್ಲ ಮುಗಿಸಿ ರಾಯರು ಹಾಗೆಯೇ ಸೋಫಾಕ್ಕೆ ಒರಗಿ ಕುಳಿತಿದ್ದರು.ಬಂದಿದ್ದ ಸಂಭಂದಿಕರು ಒಬ್ಬೊಬ್ಬರಾಗಿ ಹೊರಟಿದ್ದರು.ಈಗ ರಾಯರ ಪಕ್ಕದಲ್ಲಿ ಭರತನು ಇದ್ದಾನೆ.ಅಲ್ಲೇ ಎದುರುಗಡೆ ಸೊಸೆ ಭವ್ಯಳು ಕೂತಿದ್ದಾಳೆ.ಹಾಗೆಯೆ ಹಿಂದಿನ ಘಟನೆಗಳನ್ನೂ ಹರಟೆ ಹೊಡೆಯುತ್ತಿದ್ದಾರೆ.ಎಲ್ಲರ ಮಕ್ಕಳು ಅಲ್ಲೇ ಆಕಡೆ,ಈಕಡೆ ಓಡಿ ಆಟವಾಡುತ್ತಿದ್ದಾರೆ.

ಅವರು ಹಾಗೆಯೆ ರಾಯರೆಡೆಗೆ ಬರುತ್ತಿದ್ದಾರೆ. "ಮೂರ್ತಿ ನಿನ್ನಂಥ ಸಾಧನೆ ಮಾಡಿದ ವ್ಯಕ್ತಿಯನ್ನು ನಾನು ಜೀವನದಲ್ಲೇ ನೋಡಿಲ್ಲಪ್ಪ,ಜೀವನದ್ದುದ್ದಕ್ಕು ನಿನಗೆ ಎದುರಾದದ್ದು ಬರಿಯ ಸಮಸ್ಯೆಗಳೇ,ಆದರೆ ಅದನ್ನೆಲ್ಲ ನೀನು ಎದುರಿಸಿದ ರೀತಿ,ನೀನು ಈಗ ಇಲ್ಲುಂಟು ಮಾಡಿದ ಒಂದು ಪ್ರೇಮದ ವಾತಾವರಣ,ಹಳ್ಳಿಗೆ ಮಾಡಿದ ಉಪಕಾರ,ಇಂದು ಈ ಊರಿನ ಜನ ನಿನ್ನ ಹೆಸರನ್ನು ಕೇಳಿದರೆ ಅಷ್ಟು ದೂರದಿಂದ ಕೈ ಮುಗಿಯುತ್ತಾರೆ,ನಿನ್ನ ಮೇಲೆ ಅದೆಂಥ ಪ್ರೀತಿ,ಗೌರವ,ಇಂದು ನಾನು ನನ್ನ ಮೊಮ್ಮಕ್ಕಳಿಗೆ ನಿನ್ನ ಕಥೆ ಹೇಳ್ತಾ ಇದ್ದೆನಪ್ಪ" ಎಂದರು.ರಾಯರ ಮುಖದಲ್ಲಿ ಅದೇ ಪ್ರಸನ್ನತೆ,ಅದೇ ನಿರ್ಲಿಪ್ತ ಭಾವ."ಎಲ್ಲ ನಿಮ್ಮಂತಹ ಹಿರಿಯರ ಆಶೀರ್ವಾದ"ಎಂದರು.ಎಲ್ಲ ನಡೆದುದು ಕೈಲಾಸನ ಉಪನಯನದಿಂದ ಮದುವೆಯ ನಡುವೆ ಅಂತರ ೧೭ ವರ್ಷ.ಅಂದು "ಎಂ ಟೆಕ್ " ಎಂದಾಗ ಸ್ವಲ್ಪ ಯೋಚಿಸು,ಇಂದು ನನ್ನ ಮೊಮ್ಮಕ್ಕಳಿಗೆ ನಿನ್ನ ಕಥೆ ಹೇಳ್ತಾ ಇದ್ದೇನೆ.ಬೆಳವಣಿಗೆ,ಕಾಲ ಎಷ್ಟು ಸಂಕುಚಿತ,ರಾಯರು ಹಾಗೆಯೇ ಯೋಚಿಸುತ್ತಿದ್ದರು.

***************

ಅಲಾರಂ ಹೊಡೆಯಲು ಸುರುವಾಯಿತು.ರಾಯರು ಧೀರ್ಘ ಕನಸಿಂದ ಎದ್ದರು.ಎದ್ದು ಸ್ನಾನ,ಕಾರ್ಯಕ್ರಮ ಎಲ್ಲ ಮುಗಿಸಿ ಹೊರಡಲು ಸಿದ್ದರಾದರು.ಫೋನ್ ರಿಂಗಾಯಿತು."ಬ್ರಹ್ಮರಾಯರಿಗೆ" ಪ್ರಜ್ಞೆ ಬಂದಿದೆ.ಸರಿ ರಾಯರು ಸಂಧ್ಯಾಳಿಗೆ ವಿಷಯ ತಿಳಿಸಿ ನೇರವಾಗಿ ಆಸ್ಪತ್ರೆಗೆ ಹೋದರು.

ಮುಂದುವರೆಯುವುದು ...........

No comments:

Post a Comment