Saturday, November 12, 2011

ನಾನು ನೋಡಿದ ಕೆಲವು ಸಿನಿಮಾದ ಧನಾತ್ಮಕ ಅಂಶದ ಸುತ್ತ..

ದೂಕುಡು : ನಮ್ಮ ಹೆತ್ತವರನ್ನು ಯಾವ ರೀತಿ ಗೌರವಿಸಬೇಕು..ಎಷ್ಟು ಪ್ರೀತಿಯಿಂದ ನೋಡಿಕೊಳ್ಳಬೇಕು ಎಂಬುದನ್ನು ಈ ಚಿತ್ರ ಚೆನ್ನಾಗಿ ತೋರಿಸಿದೆ..ಮಹೇಶ್ ಬಾಬು ಅಭಿನಯ, ಬ್ರಹ್ಮ್ಮಾನಂದ ಕಾಮಿಡಿ ತುಂಬಾ ಚೆನ್ನಾಗಿದೆ.

ಏಳಮ್ ಅರಿವು : ನಮ್ಮ ಪೂರ್ವಿಕರನ್ನು ನಾವು ಮರೆತಿದ್ದೇವೆ ಆದರೆ ಅವರು ನಮ್ಮ ಸಮಾಜಕ್ಕೆ ನೀಡಿದ ಕೊಡುಗೆ ಅಪಾರ, ಅವರು ನಮಗಿಂತಲೂ ತುಂಬಾ ಮುಂದಿದ್ದರು ಅವರ ಬಗ್ಗೆ ನಾವು ತಿಳಿದುಕೊಳ್ಳಬೇಕಾದ್ದು ಬಹಳ ಇದೆ ಎಂಬುದನ್ನು ಭೋಧಿಧರ್ಮನ ಕೊಡುಗೆಯನ್ನು ನೆನಪಿಸುವುದರ ಮೂಲಕ ಬಹಳ ಚೆನ್ನಾಗಿ ಮಾಡಿದ್ದರೆ. ಸೂರ್ಯ ಅಭಿನಯ ಮನಮುಟ್ಟುವ ಹಾಗಿದೆ.

ರಾ.ಒನ್ : ಯಾವಾಗಲು ಒಳ್ಳೆಯದು ಗೆಲ್ಲುತ್ತೆ ಮತ್ತು ಗೆಲ್ಲಬೇಕು ಎಂಬುದನ್ನು ವೀಡಿಯೊ ಗೇಮ್ ಮೂಲಕ ತೋರಿಸಿದ್ದಾರೆ. ನಂಗೆ ಇಷ್ಟ ಆಯಿತು! ಶಾರುಖ್ ಖಾನ್ ಸೂಪರ್ ಹೀರೋ ಪಾತ್ರದಲ್ಲಿ..




Tuesday, March 15, 2011

"ಯೆ ಪ್ರವೀಣ,ಏನಿಲ್ಲ ನಿನ್ನ ಮುಂದೆ ಆ ರಾವಣ" hai toh trailer hai, picture aabi baki hai mere dosth!!

ಇಂದು ಮಧ್ಯಾನ್ನ ಸುಮಾರು ೧೧ ೩೦ ರ ಹೊತ್ತಿಗೆ ಪ್ರವೀಣ್ ಫೇಸ್ ಬುಕ್ ವಾಲ್ ಲಿ ಮೇಲಿನ ವಾಕ್ಯವನ್ನು ಪೋಸ್ಟ್ ಮಾಡಬೇಕೂಂತ ಮೊದಲು ನಂಗೆ ನೀಡಿದ offer ನಂತರ ನನ್ನಲ್ಲಿ ಮಾಡಿಕೊಂಡ ಕೋರಿಕೆ. ಕೋರಿಕೆ ಮಾಡಿದವರು ನನ್ನ ಮಿತ್ರರೇ, ಪೋಸ್ಟ್ ಮಾಡಬೇಕಾದ್ದು "ಪ್ರವೀಣ"ನ ವಾಲ್ ಲಿ. ಇದು ನನಗೆ ಒಂದು ತರ ಧರ್ಮ ಸಂಕಟ. ಯಾಕೆಂದರೆ ಸ್ನೇಹಿತರು ಎಂದರೆ ಒಂದು ತರ "DEADLOCK" ಇದ್ದ ಹಾಗೆ. ಅಷ್ಟು  ಸುಲಭವಾಗಿ ನಾವು ನಿರ್ಧಾರ ತೆಗೆದುಕೊಳ್ಳುವ ಹಾಗಿಲ್ಲ.ಒಂದೇ ಒಂದು  ಕಂಡಿಶನ್ "CIRCULAR LOOP" ಬ್ರೇಕ್ ಅದ್ರು ಅಪಾಯ ತಪ್ಪಿದ್ದಲ್ಲ!!

ಆದರೆ ಬಹಳ ಸಂತಸದ ಸಂಗತಿ ಎಂದರೆ ಪ್ರವೀಣ್ ಮೇಲೆ ಕವನ ರಚನೆ ಆಗಿದ್ದು. "Trailer" ಮೊದಲ ಸಾಲು ಮಾತ್ರ ನೋಡಿದ ನನಗೆ ಇದು ಬಹಳ ಅರ್ಥಪೂರ್ಣ ಕವನ ಅಂತ ಅನಿಸಿತು. ಕವನ ರಚನೆಕಾರರು ಬಹಳ ಅರ್ಥವನ್ನು ಹುದುಗಿಸಿಟ್ಟಿದ್ದಾರೆ ಈ ಕವನದಲ್ಲಿ. "ಕವನ" ಎಂಬುದು ಇರುವುದೇ ಹೀಗೆ,ಒಂದೊಂದು ಸಾರಿ ಓದಿದಾಗಲು ಹೊಸ ಹೊಸ ಅರ್ಥ ಕೊಡುತ್ತೆ ಮತ್ತು ಬೇರೆ ಬೇರೆಯವರಿಗೆ ಇದು ಬೇರೆ ಬೇರೆ ಅರ್ಥ ನೀಡುತ್ತೆ."Trailer" ಹೀಗೆ ಇದ್ದರೆ ಇನ್ನು "ಪಿಕ್ಚರ್" ಹೇಗೆ ಇರಬೇಡ ಎಂಬ ಯೋಚನೆ ಮೈ ಮನವನ್ನೆಲ್ಲ ರೋಮಾಂಚನಗೊಳಿಸುತ್ತದೆ. ಪೂರ್ತಿ "picture", "picture" ನೋಡಿದ ಮೇಲೆಯೇ ಬಂದೀತು ಅಷ್ಟೇ. ಮೊದಲ ಸಾಲು ಬಹಳ ಇಷ್ಟ ವಾದ್ದರಿಂದ ನನಗೆ ಅರ್ಥ"ವಾದ" ಹಾಗೆ ವಿಮರ್ಶಿಸೋಣ ಅಂತ ಹೊರಟದ್ದು.

"ರಾವಣ" ಲಂಕೆಯನ್ನು ಅಳಿದ "ಮಹಾನ್ ದೊರೆ". "ಶಿವನ ಪರಮ ಭಕ್ತ". "ಪರಮ ಜ್ಞಾನಿ". "ಉತ್ತಮ ಆಡಳಿತಗಾರ".ಪ್ರಸಿದ್ದ "ವೀಣಾವಾದಕ". ಅವನ ಹತ್ತು ತಲೆಗಳು ಎಂಬ ಕಲ್ಪನೆಯು, ಅವನು "೪ ವೇದ ೬ ಉಪನಿಷತ್ತುಗಳನ್ನು ಬಲ್ಲವನು", ೧೦ ಜನ ವಿದ್ವಾಂಸರಿಗೆ ಆತನೊಬ್ಬನೇ ಸರಿಸಾಟಿಯಾಗಿದ್ದ ಎಂದು ಹೇಳುತ್ತದೆ. "ರಾವಣ ಸಂಹಿತ" ಎಂಬ ಪುಸ್ತಕದ ಮೂಲಕ ರಾವಣನು "ಹಿಂದೂ ಜ್ಯೋತಿಷ್ಯಶಾಸ್ತ್ರಕ್ಕೆ" ನೀಡಿದ ಕೊಡುಗೆಯು ಅಪಾರ. ಆತನು "ಆಯುರ್ವೇದ" ಮತ್ತು "ರಾಜ್ಯಶಾಸ್ತ್ರದಲ್ಲಿ" ಅಪಾರ ಪರಿಣಿತಿಯನ್ನು ಹೊಂದಿದ್ದ. ಹೀಗೆ ಬಹುಮುಖ ಪ್ರತಿಭೆಯ ಘನವಿದ್ವಾಂಸ ರಾವಣನು, "ಪ್ರವೀಣ"ನ ಮುಂದೆ ಏನೇನು ಅಲ್ಲ ಎಂಬಲ್ಲಿಂದ ಕವನ ಪ್ರಾರಂಭವಾಗುತ್ತದೆ ಅಂತ ಆದ್ರೆ ನಮ್ಮ ಪ್ರವೀಣ್  ಹಿರಿಮೆ ಏನು ಅಂತ ಗೊತ್ತಾಗುತ್ತದೆ!!!

ಪ್ರವೀಣ ಹೆಸರಿಗೆ ತಕ್ಕ ಹಾಗೆ ಎಲ್ಲ ವಿಷಯಗಳಲ್ಲೂ "ಪ್ರವೀಣ". ಸಜ್ಜನ ಸಾಧು ಒಂದು ತರ "ಸಂತ"ನ ಹಾಗೆ ಅವನ ಜೀವನ.ನಿಜ ಹೇಳುವುದಾದರೆ ಈಗಿನ ಕೆಲವು ಸಂತರಿಗೂ, ಪ್ರವೀಣ್ ಗೆ ಇದ್ದಷ್ಟು ಆಚಾರ,ನಿಷ್ಠೆ ಇರುವುದು ಸಂಶಯ. ಎಲ್ಲವನ್ನು ಒಳಗೆ ಇಟ್ಟು, ಹೊರಗಡೆ ನಗುತ್ತ, ಎಲ್ಲರನ್ನು ನಗಿಸುತ್ತಾ ಎಲ್ಲರೊಳಗೊಂದಾಗಿ ಬೆರೆಯುವುದು ಬಹುಶ: ಅವನಿಗಾದಷ್ಟು ಇನ್ನು ಯಾರಿಗೂ ಸಾಧ್ಯವಿಲ್ಲ. ಸದಾ ಸಹಾಯ ಹಸ್ತ ಚಾಚುತ್ತ ಎಷ್ಟೋ ಸಲ ತನ್ನ ಸ್ವಂತ ಹಿತಾಸಕ್ತಿಯನ್ನು ಕೂಡ ಗಣಿಸದೆ ನಿತ್ಯ ಸವೆಯುತ್ತಿರುವ, ಸವೆಸುತ್ತಿರುವ ಅವನ ತ್ಯಾಗ ಗುಣ ವರ್ಣಿಸಲು ಬಹುಶ: ಪದಗಳೇ ಸಾಲದು ಅಂತ ಎಲ್ಲ ಹೇಳಿದರೆ ಸ್ವಲ್ಪ ಜಾಸ್ತಿ ಆದೀತು!!! ಅಂತ ನಂಗೆ ಆದದ್ದು  hai toh trailer hai, picture aabi baki hai mere dosth!! ಎಂಬ ಸಾಲನ್ನು ನೋಡಿದಾಗ!!!

Friday, March 11, 2011

ಪರೀಕ್ಷೆಯ ಹಿಂದಿನ ಆ ದಿನ...

ಪರೀಕ್ಷೆ  ಯಾವುದೇ ಇರಬಹುದು ಅದು ಇಂಟರ್ನಲ್ ಅಥವಾ ಸೆಮೆಸ್ಟರ್ ಎಂಡ್ ಪರೀಕ್ಷೆ.. ಆದ್ರೆ ಪರೀಕ್ಷೆ ಪರೀಕ್ಷೆಯೇ. ನಾವು ಏನು ಅಂತ ಪರೀಕ್ಷೆ ಮಾಡೋದೇ ಈ ಪರೀಕ್ಷೆ.ನಿಜವಾಗಿ ಹೇಳೋದಾದರೆ ನಾವು ಏನು ಅಂತ ನಿಜವಾಗಿ ಪರೀಕ್ಷೆ ಮಾಡದೇ ಇರೋದು ಈ ಪರೀಕ್ಷೆಯೇ.ಹೀಗೆ ಈ ಪರೀಕ್ಷೆ ಅನ್ನೋದೇ  ಒಂದು ಪರೀಕ್ಷೆಯೇ. 

ಸಾಮಾನ್ಯವಾಗಿ ಎಲ್ಲರು ಪರೀಕ್ಷೆಯ ಹಿಂದಿನ ದಿನ ಓದುತ್ತಾರೆ.ಮತ್ತು ಆ ದಿನ ಮಾತ್ರ ಓದುತ್ತಾರೆ.ಆ ದಿನದ  ಟೆನ್ಶನ್ ನಲ್ಲಿ  ಓದಿದಷ್ಟು  ವೇಗವಾಗಿ  ಉಳಿದ ದಿನ ಓದಲು  ಆಗುವುದಿಲ್ಲ. ಆವತ್ತೇ  ಎಲ್ಲ  ತಲೆಗೆ  ಹತ್ತುವುದು  ಬಹಳ ಬೇಗ.ಅದು ಎಷ್ಟು ಬೇಗ ಓದಿ  ಅರ್ಥ  ಮಾಡಿಕೊಳ್ಳುತ್ತೇವೆ  ಎಂದರೆ  ಕನಸಿನಲ್ಲೂ  ಊಹಿಸಲು  ಸಾಧ್ಯವಾಗದಷ್ಟು. ಕೊನೆಗೆ ಪರೀಕ್ಷೆಗೆ ಹೋಗುವಾಗ ಛೆ ಸ್ವಲ್ಪ ಮೊದಲೇ ಓದಿದ್ದರೆ ಇನ್ನು ಚೆನ್ನಾಗಿ ಮಾಡಬಹುದಿತ್ತು ಅಂತ ಅನಿಸುವುದು ಸರ್ವೇ ಸಾಮಾನ್ಯ.ನಾನು ಇದಕ್ಕೆ ಅಪವಾದವಲ್ಲ.

ಆದರೆ ಇತ್ತೀಚಿಗೆ ನನಗೆ ಒಂದು ವಿಚಿತ್ರ ಮನೋಭಾವ ಸುರುವಾಗಿದೆ. ನನಗೆ ಪರೀಕ್ಷೆಯ ಹಿಂದಿನ ದಿನ ಓದುವುದನ್ನು ಬಿಟ್ಟು ಬೇರೆ ಏನಾದರು ಮಾಡಬೇಕೆಂಬ ತುಡಿತ ಎಷ್ಟು ಬಲವಾಗಿ ಇರುತ್ತದೆಯೆಂದರೆ ನನ್ನನ್ನೇ ನಾನು ನಿಯಂತ್ರಿಸಲು ಆಗದಷ್ಟು.ಅಂದು ನನಗೆ ಲೇಖನ ಬರೆಯುವ,ಇಲ್ಲವೇ ಬೇರೆ ಏನಾದರು ಓದುವ,ಪ್ರೊಗ್ರಾಮ್(ಕಂಪ್ಯೂಟರ್ ಪ್ರೊಗ್ರಾಮ್) ಮಾಡುವ ಎಂದೆಲ್ಲ   ಅನಿಸುವುದು.ಆ ಭಾವನೆ ಬಹಳ ಆಳವಾಗಿರುತ್ತದೆ ಮತ್ತು ಜೋಷ್ ಎಷ್ಟು ಇರುತ್ತದೆ ಎಂದರೆ ಮಾಡಿ ಮುಗಿಸಿಯೇ ಬಿಡುವ ಎಂಬಷ್ಟು.ಆಮೇಲೆ ನಿಧಾನವಾಗಿ ವಾಸ್ತವವನ್ನು ಯೋಚಿಸಿ ಪಾಠವನ್ನು ಬೇಕೋ ಬೇಡವೋ ಎಂಬಂತೆ  ಓದಿ ಮುಗಿಸಿ ಪರೀಕ್ಷೆ ಬರೆದು ಬಂದ ಮೇಲೆ ಸರಿ ವ್ಯತಿರಿಕ್ತ ನನ್ನ ಯೋಚನೆ!!ಹಿಂದಿನ ದಿನ ಇದ್ದ ಲೇಖನ,ಬೇರೆ ಓದುವ,ಪ್ರೊಗ್ರಾಮ್ ಮಾಡುವ ಯಾವುದೇ ಹುಚ್ಚು ಇರುವುದಿಲ್ಲ.ಆ ದಿನ ಕೂತುಕೊಂಡು ಆವತ್ತು ಮುಗಿದ ಪರೀಕ್ಷೆಯದ್ದು ಓದಬೇಕು ಅಂತ ಅನಿಸುತ್ತದೆ.ವಿಚಿತ್ರವಾದರೂ ಸತ್ಯ ಇದೊಂದು ಹುಚ್ಚು ಮನಸ್ತಿತಿ!!

ವಾಸ್ತವ ಏನೆಂದರೆ ನಾನು ಪರೀಕ್ಷೆಯ ಹಿಂದಿನ ದಿನ ಬೇರೆ ಏನು ಮಾಡುವುದಿಲ್ಲ ಹಾಗೆಯೇ ಮುಗಿದ ದಿನ ಆ ಸಬ್ಜೆಕ್ಟ್ ನ್ನು ಓದುವುದಿಲ್ಲ.ಆದರೆ ಇದರ ನಡುವೆ ಮನಸ್ಸಿನಲ್ಲಾಗುವ ತೊಯ್ದಾಟದಲ್ಲಿ ಸುಮಾರು ಹೊತ್ತು  ಕಳೆದು  ಹೋಗುತ್ತದೆ  ಎಂಬುದಂತೂ  ಸತ್ಯ!! 

Saturday, January 15, 2011

Happy Makara Sankranti :)

Wednesday, January 12, 2011

IPL 4

In few days IPL starts.... I prepared a list of 3 teams(imaginary) by selectiing top 33 players....

..................................................................................

I want 2 c match b/w these teams....

..................................................................................

1) Sehwag 1) Sachin 1) Gilchrist

2 Warner 2) Gayle 2) BB McCullum

3) Raina 3) Sangakkara 3) Jayavardane

4) Dilshan 4) Villiers 4) Yuvaraj Singh

5) Robin Uttappa 5) David Hussy 5) Ross Taylor

6) Afridi 6) Pollard 6) Yousuf Patan

7 ) Watson 7) A. Mathews 7) Albi Morkel

8) G. Swann 8) Botha 8) Harabhajan Singh

9) Shane Warne 9) Muralidharan 9) Danial Vettori

10) Zahir Khan 10) Nathan bracken 10) Doug Bollinger

11) Dale Steyn 11) Brett Lee 11) Lasit Malinga

...................................................................................


Team composing of 5 specialist batsman, 1 big hitter ,1 all rounder, 2 spinners and 2 fast bowlers....How was the team??