Saturday, July 31, 2010

ಪಾಸುಪೋರ್ಟ್ ಪುರಾಣಂ

"ಯಾವುದೇ ಕೆಲಸವಾದರೂ ಸರಿಯಾಗಿ ಮಾಡ,ಜವಾಬ್ದಾರಿ ಎಂಬುದೂ ಸ್ವಲ್ಪವೂ ಇಲ್ಲ,ಅವರವರೆ ಕಷ್ಟ ಬಂದರೆ ಗೊತ್ತಾದೀತು," ಮಾತು ನನಗೆ ಏನು ಹೊಸತಲ್ಲ,ನಿತ್ಯವೂ ತಂದೆ ಹೇಳ್ತಾರೆ,ನಾನು ಕೇಳಿಯೂ ಕೇಳಿಸದಂತೆ ಪಾಡಿಗೆ ಇರ್ತೇನೆ.ಆದರೆ ಮಾತಿಗೆ ವಿಶೇಷ ಅರ್ಥ ಬಂದುದು ಅಥವಾ ಅವರು ನಿತ್ಯವೂ ಹೇಳುತ್ತಿದ್ದುದು ನನಗೆ ಅರ್ಥವಾದದ್ದು ನಾನು ಪಾಸುಪೋರ್ಟ್ ಮಾಡಿಸಲು ಎಂದು ಹೊರಟಾಗಲೇ!!

ಮೈಸೂರಿಂದ ಊರಿಗೆ ಬರುವಾಗ ಯಾವುದೇ ಯೋಚನೆ,ಯೋಜನೆ ಇಲ್ಲದೆ ಹಾಗೆ ಸುಮ್ಮನೆ ಬಂದಿದ್ದೆ. ಮನೆಯಲ್ಲಿ ಹಾಗೆ ದಿನ ಕಳೆದ ಮೇಲೆ ಬೇಜಾರು ಬಂತು,ಹಾಗೆ ಒಂದು ಪಾಸುಪೋರ್ಟ್ಗೆ ಅರ್ಜಿ ಹಾಕಿದರೆ ಹೇಗೆ ಎಂಬ ಯೋಚನೆಯು ಬಂತು.ಸರಿ ಯೋಚನೆ ಬಂದದ್ದೆ ತಡ,ಏನೇನು ಬೇಕಾಗಬಹುದು ಎಂದು ನನ್ನ ಅಣ್ಣನಲ್ಲಿ ಕೇಳಿ ,ಮಂಗಳೂರಿಗೆ ಹೊರಟೆ ಬಿಟ್ಟೆ. ಆದರೆ ಯಾವಾಗ ಪಾಸುಪೋರ್ಟ್ ಅಂತ ಹೊರಟೆನೋ ಅಲ್ಲಿಂದ ಮತ್ತೆ ನನ್ನ ಎಲ್ಲ ಬಣ್ಣ ಬಯಲಾಯಿತು. ನಾನು ಜೀವನವನ್ನು ಎಷ್ಟು ಕೇರ್ ಲೆಸ್ ಆಗಿ ತೆಗೆದುಕೊಂಡಿದ್ದೇನೆ ಎಂಬುದು ಜಗಜ್ಜಾಹಿರವಾಯಿತು.ತಂದೆ ಹೇಳುತ್ತಿದ್ದ ಒಂದೊಂದೇ ಮಾತುಗಳು ನಿಜವಾಗತೊಡಗಿತು.

ಅಣ್ಣ ಏನೇನು ಬೇಕು,ಏನೇನು ಕೆಲಸ ಇದೆ ಎಲ್ಲ ವಿವರವನ್ನು ಹೇಳಿದ.ಈಗ ಮೊದಲನೇ ತೊಂದರೆ ಯಾವುದೇ ಒರಿಜಿನಲ್ ಸರ್ಟಿಫಿಕೆಟ್ ನನ್ನಲ್ಲಿ ಇಲ್ಲಿ ಇಲ್ಲ, ಎಲ್ಲ ಮೈಸೂರ್ ಲ್ಲಿ ಇದೆ. ಹಾಗಾಗಿ ಒಂದು ಸಲ ಬರೀ ಸರ್ಟಿಫಿಕೇಟ್ ಗಳಿಗಾಗಿ ಮೈಸೂರಿಗೆ ಹೋಗಬೇಕಾಗುತ್ತದೆ ಎಂದು ಯೋಚಿಸುತ್ತಿದ್ದೆ. "ಹೇಗೂ ಮನೆಯಲ್ಲಿ ಏನು ಓದುವುದಿಲ್ಲ,ಇನ್ನು ತೋಟ,ಮನೆ ಕೆಲಸದ ಕಡೆಗೆ ತಲೆಯೇ ಕೊಡುವುದಿಲ್ಲ,ಅಲ್ಲ ಬರುವಾಗ ಏನೇನು ಬೇಕು ಅಂತ ಸ್ವಲ್ಪ ಯೋಚನೆ ಮಾಡಿ,ತಗೊಂಡು ಬಂದಿದ್ದರೆ ಈಗ ಇದಕ್ಕೆಂತ ಮೈಸೂರಿಗೆ ಓಡುವುದು ತಪ್ಪುತ್ತಿತ್ತು ಅಂತ ತಂದೆ ಮನಸ್ಸಲ್ಲೇ ಅಂದುಕೊಂಡಿರಬಹುದು ಏನು ಹೇಳಲಿಲ್ಲ" ಸರಿ ಆಗಬೇಕಾದರೆ ಮಾಡದೇ ಗೊತ್ತಿಲ್ಲ,ಹೋಗಿ ಅರ್ಜಿ ತಗೊಂಡು ಏನೇನು ಬೇಕು ಅಂತ ಕೇಳಿ,ಇನ್ನು ಮೈಸೂರಿಗೆ ಹೋಗಬೇಕಾದ್ರೆ ಹೋಗಿ ಎಲ್ಲ ಕೆಲಸ ಮುಗಿಸಿ ಬಾ,ಮಂಗಳೂರಲ್ಲಿ ಅತ್ತೆ ಮನೆ ಇದೆ,ಅಲ್ಲೇ ಎಲ್ಲಾದರೂ ಒಂದು ಕಡೆ ನಿಂತರಾಯಿತು ಎಂದರು.
ಜೂನ್ ೨೨ "ಮಂಗಳವಾರ" ಬೆಳಗ್ಗೆ ಮನೆಯಿಂದ ಹೊರಟೆ.ಪಾಸುಪೋರ್ಟ್ಗೆ ಬೇಕಾದ ಎಲ್ಲ ಕೆಲಸ ಮುಗಿಸಿ ಇನ್ನು ಮನೆಗೆ ಬರುವುದು ಎಂದು ಹೇಳಿದೆ.ಹೊರಡುವಾಗ ತಂದೆ ಕೇಳಿದರು,ಬೇಕಾದ ಬಟ್ಟೆ,ರೂಮಿನ ಬೀಗದ ಕೈ ಎಲ್ಲ ತೆಗೆದುಕೊಂಡಿದ್ದಿಯಲ್ಲ.ನಾನೇನು ಇನ್ನು ಸಣ್ಣ ಮಗುವ,ನನಗೇನು ಅಷ್ಟು ಗೊತ್ತಾಗುವುದಿಲ್ಲವ ಎಂದು ಮನದಲ್ಲೇ ಯೋಚಿಸಿಕೊಂಡು, ಹಾ ಎಲ್ಲ ತೆಗೆದುಕೊಂಡಿದ್ದೆನಪ್ಪ ಎಂದೆ.ನಮ್ಮ ಮನೆಯಿಂದ ವಿಟ್ಲಕ್ಕೆ ಸುಮಾರು ಅರ್ಧ ಗಂಟೆ,ಅಲ್ಲಿಂದ ಮಂಗಳೂರಿಗೆ ಸುಮಾರು ಗಂಟೆ ೩೦ ನಿಮಿಷ ಬಸ್ ಪ್ರಯಾಣ.ಅಣ್ಣ ಹೇಳಿದ್ದ ಮಂಗಳೂರಲ್ಲಿ "ಡಿ ಸಿ" ಆಫೀಸ್ ಲ್ಲಿ ಅರ್ಜಿ ಎಲ್ಲ ಸಿಗುತ್ತೆ,ಅಲ್ಲೇ ಫಿಲ್ ಮಾಡಿ ಕೊಟ್ಟರಾಯಿತು ಎಂದು. ನನಗೆ ಮಂಗಳೂರು ಅಷ್ಟೇನೂ ಪರಿಚಯ ಇಲ್ಲ,ನಾನು ಹೋಗಿದ್ದೆ ಕಡಿಮೆ.ಮಂಗಳೂರಿಗೆ ಹೋಗುವುದು ಎಂದರೆ, ಸ್ಟೇಟ್ ಬ್ಯಾಂಕ್ ಲ್ಲಿ ಇಳಿತಿದ್ದೆ ಅಲ್ಲಿಂದ ೧೯ ನಂಬ್ರದ ಬಸ್ ಹತ್ತಿ ಬೊಂದೆಲ್ ನಲ್ಲಿರುವ ಅತ್ತೆ ಮನೆಗೆ ಹೋಗುತ್ತಿದ್ದೆ ಅಷ್ಟೇ!!.


ಸ್ಟೇಟ್ ಬ್ಯಾಂಕ್ ಗೆ ಹತ್ತಿರ ಬರುವಾಗ ಅಲ್ಲಿ ಅರ್ ಟಿ ಆಫೀಸ್ ಗಳೆಲ್ಲ ಕಾಣಸಿಗುತ್ತವೆ ಹಾಗಾಗಿ ನಾನು ನನ್ನಷ್ಟಕ್ಕೆ ಆಲೋಚನೆ ಮಾಡಿಕೊಂಡೆ ಇಲ್ಲೇ ಹಾಗಾದ್ರೆ "ಡಿ ಸಿ " ಆಫೀಸ್ ಇರಬಹುದೇನೋ ಎಂದು. ಹಾಗೆ ಅಲ್ಲೇ ಇಳಿದು ಬಿಟ್ಟೆ. ಇಳಿದ ಮೇಲೆ ಅಲ್ಲೇ ಸಿಕ್ಕಿದ ಒಬ್ಬರ ಹತ್ತಿರ "ಡಿ ಸಿ " ಆಫೀಸ್ ಎಲ್ಲಿ ಬರ್ತದೆ ಎಂದೆ,ಅದು ಸ್ಟೇಟ್ ಬ್ಯಾಂಕ್ ಹತ್ತಿರ, ತುದಿ ಎಂದು ದಾರಿ ಹೇಳಿದರು,ಇಡಿ ನೆಹರು ಮೈದಾನಕ್ಕೆ ಒಂದು ಸುತ್ತು ಬರಬೇಕಾಯಿತು, ನನ್ನಷ್ಟಕ್ಕೆ ಯೋಚಿಸಿದೆ ಇದನ್ನೇ ನಾನು ಬಸ್ ಕಂಡಕ್ಟರ್ ಹತ್ತಿರ ಕೇಳಿದ್ದರೆ ಅಲ್ಲೇ ಇಳಿದು ಬಿಡಬಹುದಿತ್ತು,ನಾನೆ ಅಂದಾಜು ಮಾಡಿ ಇಳಿದು ಈಗ ಸುಮ್ಮನೆ ನಡೆಯುವ ಹಾಗೆ ಆಯಿತು. ಹಾಗೆ ಸುತ್ತಿ,ಸುತ್ತಿ ದಾರಿ ಕೇಳಿ ಡಿ ಸಿ ಆಫೀಸ್ ಗೆ ಬಂದೆ. ಅಲ್ಲಿ ಹೋಗಿ ವಿಚಾರಿಸಿದರೆ ಪಾಸುಪೋರ್ಟ್ಗೆ ಅಂತ ಬೇರೆ ಆಫೀಸ್ ಆಗಿದೆ, ಈಗ ಎಲ್ಲ ಕೆಲಸ ಅಲ್ಲಿ ಆಗುವುದು ಎಂದರು."ಪಿ ವಿ ಎಸ್ " ಸರ್ಕಲ್ ಪಕ್ಕ ಕಚೇರಿ ಇರುವುದು ಎಂದು ಅಲ್ಲಿರುವ ಅಧಿಕಾರಿಗಳಲ್ಲಿ ಕೇಳಿ ತಿಳಿಯಬೇಕಾದರೆ ನನಗೆ ಸಾಕು ಸಾಕಾಯಿತು."೪೩,೪೫ " ನಂಬ್ರದ ಬಸ್ ಲ್ಲಿ ಹೋಗಿ , ಒಂದೋ "ಪಿ ವಿ ಎಸ್" ಸರ್ಕಲ್ ಇಲ್ಲವೇ "ರಾಮಭವನ " ಸ್ಟಾಪ್ ಅಲ್ಲಿ ಇಳಿಯಿರಿ ಅಲ್ಲೇ ಆಫೀಸ್ ಇರುವುದು ಎಂದು ತಿಳಿಯುವಷ್ಟರಲ್ಲಿ ,ಅಲ್ಲಿನ ಅಧಿಕಾರಿಗಳ ಮೇಲೆ ಸ್ವಲ್ಪ ಸಿಟ್ಟು ಬಂತು. ಇಷ್ಟು ದಾರಿ ಹೇಳುವ ಮೊದಲು ಅದೆಷ್ಟೋ ಗೊಣಗಿದರು,"ನಮಗೆ ಇದೇನು ಕರ್ಮವೋ ದಿನ ಬಂದವರಿಗೆ ಬರಿ ದಾರಿ ಹೇಳುವುದೇ ಆಯಿತು,ನಮ್ಮ ಕೆಲಸ ಇಲ್ಲಿ ಯಾರು ಮಾಡ್ತಾರೆ ,"ಅಯ್ಯೋ ಇನ್ನು ಏನೇನೂ ಕೇಳಿಸಿಕೊಂಡೆ. ಆಮೇಲೆ ಹೊರಗೆ ಬಂದ ಮೇಲೆ ಅಯ್ಯೋ ಪಾಪ ಅಂತಲೂ ಅನಿಸಿತು. ಅವರಿಗೆ ನನ್ನ ಹಾಗೆ ಕೇಳಿಕೊಂಡು ಬರುವವರ ಸಂಖ್ಯೆಗೆ ಮಿತಿ ಇಲ್ಲ,ಎಲ್ಲರಿಗೂ ಹೇಳಿ,ಹೇಳಿ ಅವರ ತಾಳ್ಮೆ ತಪ್ಪುವುದು ಸಹಜ.


ಅಲ್ಲಿಂದ ನಡಕೊಂಡು ಸೀದಾ ಸಿಟಿಬಸ್ ಸ್ಟ್ಯಾಂಡ್ ಗೆ ಬಂದೆ,(ಬಸ್ ಸ್ಟ್ಯಾಂಡ್ ಇಲ್ಲ!!! ಬಸ್ ನಿಲ್ಲೋ ಜಾಗ). "ಪಿ ವಿ ಎಸ್ ಸರ್ಕಲ್ " ಇದು ಎಲ್ಲಿ ಬರುತ್ತೆ ಅಂತಲೇ ನಂಗೆ ಗೊತ್ತಿಲ್ಲ,ಇಲ್ಲಿಂದ ಎಷ್ಟು ದೂರ ಇದೆ ಅಂತಲೂ ಗೊತ್ತಿಲ್ಲ ೪೫ ನಂಬ್ರದ ಬಸ್ ನ್ನು ಕಾಯುತ್ತ ನಿಂತೆ.ಆಗ ಒಂದು ಬಸ್ ಬಂತು,ಆದರೆ ನಂಬರ ೪೫ ಅಲ್ಲ,ನಾನು ಮತ್ತೆ ಹಿಂದೆ ಬಂದೆ. ಅಲ್ಲಿ ಒಬ್ಬಾತ ನನ್ನನ್ನೇ ನೋಡುತ್ತಿದ್ದ ಪ್ರತಿ ಬಸ್ ಬಂದಾಗಲು ನಾನು ಮುಂದೆ ಹೋಗಿ ನಂಬರ ನೋಡುವುದು,ಮತ್ತೆ ಹಿಂದೆ ಬರುವುದು,ಅತ ಕೇಳಿದ,ಸ್ವಾಮಿ ನಿಮಗೆ ಎಲ್ಲಿಗೆ ಹೋಗ್ಬೇಕು?ನಾನು ಪಾಸುಪೋರ್ಟ್ ಆಫೀಸ್ ಗೆ ಎಂದೆ.ಆಗ ಅವನು ಒಂದು ಬಸ್ ಅನ್ನು ತೋರಿಸಿದ,ಇದು ಹೋಗುತ್ತೆ,ನಿಮ್ಮನ್ನು ಪಾಸುಪೋರ್ಟ್ ಆಫೀಸ್ ಎದುರುಗಡೆನೆ ಇಳಿಸುತ್ತೆ ಎಂದೆ,ಅವನಿಗೆ ಕೃತಜ್ಞತೆ ಹೇಳಿ ಬಸ್ ಹತ್ತಿದೆ,ಇದೆ ಕೆಲಸವನ್ನು ಸ್ವಲ್ಪ ಮೊದಲೇ ಮಾಡಿದ್ದರೆ ನಾನು ಇಷ್ಟು ಹೊತ್ತಿಗಾಗಲೇ ಆಫೀಸ್ ಮುಟ್ಟುತಿದ್ದೆ ಎಂದು ಯೋಚಿಸುತ್ತಿದ್ದ ನನಗೆ ಪಾಸುಪೋರ್ಟ್ ಆಫೀಸ್ ಇಳಿರಿ,ಇಳಿರಿ ಎಂದದ್ದು ಕೇಳಿಸಿತು. ಇದು ಬಸ್ ಸ್ಟ್ಯಾಂಡ್ನಿಂದ ಬಹಳ ಹತ್ತಿರ ಒಂದು ಕಿಲೋಮೀಟರ್ ಅಗಿರಬಹುದಷ್ಟೇ ಎಂದು ಅನಿಸಿತು.


ನಾನು ಆಫೀಸ್ ತಲಪುವಾಗಲೇ ಗಂಟೆ ೧೨ ಆಗಿತ್ತು.ಸೆಕ್ಯೂರಿಟಿಯವನು ಲೈನಲ್ಲಿ ಒಳಗೆ ಹೋಗಲು ಬಿಡುತ್ತಿದ್ದ ಅವನಲ್ಲಿ ಪಾಸು ಪೋರ್ಟ್ ಗೆ ಅರ್ಜಿ ಎಂದು ಕೇಳಿದೆ, ಕಡೆಯಿಂದ ಹೋಗಿ ಅಲ್ಲಿ ಫಾರಂ ಕೊಡ್ತಾರೆ ಎಂದ. ಅಲ್ಲೂ ಸ್ವಲ್ಪ ರಶ್ ಇತ್ತು.೧೦ ರೂ ಕೊಟ್ಟು ಫಾರಂ ತಗೊಂಡೆ,ಏನೇನು ಬೇಕು ಎಂದು ಅವರಲ್ಲಿ ಕೇಳಿದರೆ,"ಎಲ್ಲ ವಿವರ ಫಾರಂಲ್ಲೇ ಇದೆ,ಒಮ್ಮೆ ನೋಡಿ ಮತ್ತು ಸಂಶಯವಿದ್ದರೆ ಅದರಲ್ಲೇ ಒಂದು ನಂಬರ್ ಇದೆ,ಅದಕ್ಕೆ ಕಾಲ್ ಮಾಡಿ,ಅವರು ಎಲ್ಲ ವಿವರ ಕೊಡ್ತಾರೆ" ಎಂಬ ಉತ್ತರ ಸಿಕ್ಕಿತು.ಫಾರಂ ತಗೊಂಡು ಹೊರಗೆ ಬರಲು ಪುರುಸೊತ್ತಿಲ್ಲ,ಒಬ್ಬ ಬ್ರೋಕರ್ ತನ್ನ ಮೊಬೈಲ್ ನಂಬರ್ ಹೇಳಿದ,ಇದಕ್ಕೆ ಒಂದು ಮಿಸ್ ಕಾಲ್ ಕೊಡಿ ಎಂದ,ನಿಮಗೆ ಈಗ ಪುರುಸೊತ್ತು ಇದ್ದರೆ ಫಾರಂ ತುಂಬಿಸಿ,ಟೋಕನ್ ತೆಗೆದುಕೊಂಡು ಹೋಗಬಹುದು ಎಂದ.ಏನೇನು ಬೇಕು ಎಂದು ಕೇಳಿದೆ,"ಓಟರ್ ಐಡಿ,ರೇಶನ್ ಕಾರ್ಡ್,ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್,ಬರ್ತ್ ಸರ್ಟಿಫಿಕೇಟು" ಎಲ್ಲ ಒರಿಜಿನಲ್ ಮತ್ತು ಒಂದು ಸೆಟ್ ಜೆರಕ್ಸು ಬೇಕು ಎಂದ. ಬರೀ ಜೆರಕ್ಸ ಆದರೆ ನನ್ನ ಹತ್ತಿರ ಇತ್ತು,ಒರಿಜಿನಲ್ ಬೇಕು ಅಂದಾಗ ಹಾಗಾದ್ರೆ ಮೈಸೂರಿಗೆ ಹೋಗದೆ ಹೇಗಾದರು ಕೆಲಸ ಆಗುವುದಿಲ್ಲ ಎಂಬುದು ಖಾತ್ರಿಯಾಯಿತು.ಬ್ರೋಕರ್ ಮತ್ತೆ ಮತ್ತೆ ಹೇಳಿದ,ಫಾರಂ ಫಿಲ್ ಮಾಡಿ,ಟೋಕನ್ ತೆಗೆಸಿಕೊಂಡು ಹೋಗಿ,ನನಗೆ ಅವನು ಏನು ಹೇಳ್ತಾನೆ ಎಂಬುದೇ ಅರ್ಥವಾಗಿಲ್ಲ,ನಾನು ನನ್ನ,ಫಾರಂ ಫಿಲ್ ಮಾಡಿ ಎಲ್ಲ ರೆಕಾರ್ಡ್ಸ್ ಇದ್ದರೆ ಕೂಡಲೇ ಕೆಲಸ ಆಗ್ತದೆ,ಆದರೆ ನನ್ನ ಹತ್ತಿರ ಒರಿಜಿನಲ್ ಯಾವುದು ಇಲ್ಲವಲ್ಲ,ಹಾಗಾಗಿ ನಾನು ಅವನ ಮಾತಿಗೆ ಬೆಲೆಯೇ ಕೊಡಲಿಲ್ಲ.ಇನ್ನು ಬರ್ತ್ ಸರ್ಟಿಫಿಕೇಟ್ ನಾವು ಹಿಂದೆ ತಗೊಂಡಿದ್ದೆವೋ, ಇಲ್ಲ ತಗೊಂಡೆ ಇಲ್ಲವೋ ಎಂಬುದೇ ಗೊತ್ತಿಲ್ಲ,ಆದರೆ ನಮ್ಮತ್ರ ಇಲ್ಲ ಎಂಬುದಂತೂ ಸತ್ಯ.ಮನೆಗೆ ಫೋನ್ ಮಾಡಿ ಹೇಳಿದೆ,ನಾನು ನಾಳೆ ಮೈಸೂರಿಗೆ ಹೋಗಿ ಎಲ್ಲ ರೆಕಾರ್ಡ್ಸ್ ತಗೊಂಡು ಬರ್ತೇನೆ ,ಬರ್ತ್ ಸರ್ಟಿಫಿಕೇಟ್ ಒಂದು ರೆಡಿ ಮಾಡಿ ನಾಡಿದ್ದು ತಗೊಂಡು ಬನ್ನಿ ಎಂದು. ನನ್ನ ಮಾತು ಕೇಳಿ ತಂದೆಗೆ ಸಿಟ್ಟು ಬಂದಿರಬಹುದು,ಆದರು ತಡೆದುಕೊಂಡು ಹೇಳಿದರು,ಸರಿ ನಾನು ಪ್ರಯತ್ನ ಮಾಡುತ್ತೇನೆ,ಸಿಕ್ಕಿದರೆ ನಾಡಿದ್ದೆ ತೆಗೆದುಕೊಂಡು ಬರ್ತೇನೆ,ಇಲ್ಲಾಂದ್ರೆ ಒಂದೆರಡು ದಿನ ಕಾಯಬೇಕಾದೀತು ಎಂದರು.ಯಾಕೆಂದ್ರೆ ತಂದೆಗೆ ನೆಮ್ಮದಿ ಕೇಂದ್ರ,ತಾಲೂಕು ಆಫೀಸ್,ಇಲ್ಲೆಲ್ಲಾ ಹೋಗಿ ಗೊತ್ತಿದೆ,ಅಲ್ಲಿನ ಕಾರ್ಯ ವೈಖರಿಯ ಅರಿವೂ ಇದೆ,ಹಾಗೆ ಹೋದ ಕೂಡಲೇ ಕೆಲಸ ಆಗುವುದಿಲ್ಲ,ಕಾಯಬೇಕು,ಸ್ವಲ್ಪ ಕೈ ಬಿಸಿ ಮಾಡಬೇಕು,ಅದೆಲ್ಲ ನೀನು ಯೋಚನೆ ಮಾಡಿದಷ್ಟು ಸುಲಭ ಅಲ್ಲ,ಹೋದ ಕೂಡಲೇ ಕರೆದು ಕೊಡುವುದಿಲ್ಲ ಎಂದರು.ಅದರೂ ಪ್ರಯತ್ನಿಸಿ ನೋಡ್ತೇನೆ , ಆದರೆ ಆಯಿತು ಎಂದರು.ಸರಿ ಎಂದು ನಾನು ಅಲ್ಲಿಂದ ಹೊರಟೆ.ಆಗಲೇ ಗಂಟೆ ಆಗಿಕೊಂಡು ಬಂದಿತ್ತು,ಹೊಟ್ಟೆಯು ಚುರುಗುಡಲು ಸುರುವಾಗಿತ್ತು.

ಹಾಗೆ ಸ್ವಲ್ಪ ದೂರ ನಡೆದುಕೊಂಡು ಬಂದೆ,ಯಾವ ದಾರಿಯಲ್ಲಿ ನಡೆದುದು ಎಂಬುದು ಗೊತ್ತಿಲ್ಲ,ದೊಡ್ಡ "ಸಿಟಿ ಸೆಂಟರ್" ಕಾಣಿಸಿತು,ಹಾ ಇಲ್ಲಿ ಬಸ್ ನಿಲ್ಲಬಹುದು ಎಂದು ಯೋಚಿಸಿದೆ.ಹಾಗೆ ನಿಂತೇ,ಕಾದೆ ಕಾದೆ ೧೫ ನಿಮಿಷ ಕಳೆಯಿತು,ಬಸ್ ಹೋಗುವುದು ಮಾತ್ರವೇ ಕಾಣಿಸುತ್ತಿತ್ತು,ಯಾವುದೇ ಬಸ್ ಕಡೆಗೆ ಬರುತ್ತಿರಲಿಲ್ಲ,ಮತ್ತು ೧೦ ನಿಮಿಷ ಕಾದು,ಒಬ್ಬರ ಹತ್ತಿರ ಕೇಳಿದೆ, ನನಗೆ ಲಾಲ್ಬಾಗ್ ಗೆ ಹೋಗಬೇಕು,ಇಲ್ಲಿ ಬಸ್ ಬರುವುದಿಲ್ಲವೇ ಎಂದು,ಅವರು ಹೇಳಿದರು ಇದು ಒನ್ ವೆ ,ನೀವು ಅಲ್ಲಿ ಹೋಗಿ ನಿಲ್ಲಿ ಎಂದು ದಾರಿ ಹೇಳಿದರು.ಹಾಗೆ ಅರ್ಧ ಗಂಟೆ ಸುಮ್ಮಗೆ ಕಾದು,ಕೊನೆಗೂ ಬಸ್ ಬರುವ ಜಾಗಕ್ಕೆ ಬಂದೆ.ಒಂದು ಬಸ್ ಕೂಡಲೇ ಸಿಕ್ಕಿತು.ಲಾಲ್ಬಾಗ್ ಲ್ಲಿ ಇಳಿದು ನಮ್ಮ ಹೊಸ ಅತ್ತೆ ಮನೆಗೆ ಹೋದೆ. ಅತ್ತೆ ಮನೆ "ಕೆ ಎಸ್ ಅರ್ ಟಿ ಸಿ " ಬಸ್ ಸ್ಟ್ಯಾಂಡ್ ಪಕ್ಕವೇ.ಅಲ್ಲಿ ನಮ್ಮ ಸಣ್ಣಜ್ಜಿ ಅಂದರೆ ಅತ್ತೆಯ ಅಮ್ಮ ಇದ್ದರು. ಅಲ್ಲಿ ಊಟ,ಎಲ್ಲ ಮಾಡಿ ಅಜ್ಜಿ ಜೊತೆಗೆ ಮಾತಾಡಿಕೊಂಡು ಇದ್ದೆ,ಅತ್ತೆ ಕಾಲೇಜಿಗೆ ಹೋಗಿದ್ದರು,ಮಾವ ಕೆಲಸಕ್ಕೆ ಹೋಗಿದ್ದರು,ಇಬ್ಬರು ಬರುವಾಗ ಸಂಜೆ ಆಗುತ್ತದೆ.ನಾನು ಹೀಗೀಗೆ ಪಾಸುಪೋರ್ಟ್,ನಾಳೆ ಬೆಳಗ್ಗೆ ಫಸ್ಟ್ ಬಸ್ಸಿಗೆ ಮೈಸೂರಿಗೆ ಹೋಗ್ಬೇಕು,ಅಲ್ಲಿಂದ ರೆಕಾರ್ಡ್ಸ್ ತೆಗೆದುಕೊಂಡು ಮತ್ತೆ ರಾತ್ರಿ ಪುನಃ ಬರಬೇಕು ಎಂದೇ.ರಾತ್ರಿ ಮಾವನ ಜೊತೆಗ್ ಬಸ್ ಸ್ಟ್ಯಾಂಡ್ಗೆ ಹೋಗಿ ಮೊದಲ ಬಸ್ ಎಷ್ಟು ಹೊತ್ತಿಗೆ ಎಂದು ಕೇಳಿ ತಿಳ್ಕೊಂಡು ಬಂದೆ.ಸರಿ ಗಂಟೆಗೆ ಬೆಳಗ್ಗೆ ಇದೆ,ನಾನು ಅದಕ್ಕೆ ಹೋಗ್ತೇನೆ,ತಿಂಡಿ ಎಲ್ಲ ಏನು ಬೇಡ,ದಾರಿಯಲ್ಲಿ ಎಲ್ಲಾದರೂ ಮಾಡ್ತೇನೆ ಎಂದೇ. ಅಜ್ಜಿ ಕೇಳಲೇ ಇಲ್ಲ,ಇಲ್ಲ ನಾನೆ ಮಾಡಿ ಕೊಡ್ತೇನೆ ಎಂದರು.ಸರಿ ಎಂದೆ.ರಾತ್ರಿ ಚಿನ್ಮಯ್ ಗೆ ಮೆಸೇಜ್ ಮಾಡಿ ಅವನು ಮೈಸೂರಲ್ಲೇ ಇರುವುದನ್ನು ಖಾತರಿ ಮಾಡಿಕೊಂಡೆ.ನನ್ನ ಬ್ಯಾಗ್ ಲ್ಲಿ ಬಟ್ಟೆಗಳು ಎಲ್ಲ ಇದ್ದವು,ಹಾಗಾಗಿ ಮಾವನ ಬ್ಯಾಗ್ ನ್ನು ಕೇಳಿ ತಗೊಂಡೆ,ನಾಳೆ ಬರುವಾಗ ರೆಕಾರ್ಡ್ಸ್ ಗಳು ಮಾತ್ರ ತರಲು ಇರುವುದು ಅದಕ್ಕೆ ಸುಮ್ಮನೆ ನನ್ನ ದೊಡ್ಡ ಬ್ಯಾಗ್ ನ್ನು ತೆಗೆದುಕೊಂಡು ಹೋಗುವುದು ಬೇಡ ಎಂದು ಅದನ್ನು ಅಲ್ಲೇ ಇಟ್ಟೆ.ನಾನು ನನಗೆ ಗೊತ್ತಿಲ್ಲದೆಯೇ ಮತ್ತೊಂದು ಭಾರಿ ಅಪಾಯದತ್ತ ಹೆಜ್ಜೆ ಹಾಕುತ್ತಿದ್ದೆ.


ಬೆಳಗ್ಗೆ ಗಂಟೆಗೆ ಎದ್ದು ಸ್ನಾನ ಎಲ್ಲ ಮಾಡಿ ಬಂದಾಗ ಅಜ್ಜಿ ತಿಂಡಿ ಎಲ್ಲ ರೆಡಿ ಮಾಡಿ ಇದ್ದರು,ತಿಂಡಿ ತಿಂದು ನಾನು ಹೊರಟೆ. ಸರಿಯಾಗಿ ಗಂಟೆ ೫೦ ನಿಮಿಷಕ್ಕೆ ನಾನು ಬಸ್ ಸ್ಟ್ಯಾಂಡ್ ಲ್ಲಿ ರೆಡಿ.ಒಮ್ಮೆ ವಾಚು ಮತ್ತೊಮ್ಮೆ ಬಸ್ ನ್ನು ನೋಡುತ್ತಾ ಕುಳಿತೆ ,ಗಂಟೆ ಕಳೆಯಿತು, ೧೫ ಆಯಿತು,ಬಸ್ಸಿನ ಪತ್ತೆಯೇ ಇಲ್ಲ. ವಿಚಾರಿಸಿದಾಗ ಗಂಟೆಯ ಬಸ್ ಇಂದಿಲ್ಲ,ಇನ್ನು ೩೦ ಕ್ಕೆ ಎಂದರು.ಛೆ ಸುಮಾರು ಅರ್ಧ ಗಂಟೆ ನಿದ್ದೆ ಹಾಳಾಯ್ತು, ಬಸ್ಸಿನವನಿಗೆ ಮನದಲ್ಲೇ ಬೈಯುತ್ತ ಕುಳಿತೆ.ಕೊನೆಗೆ ೩೦ ಗೆ ಮಂಗಳೂರಿಂದ ನನ್ನ ಯಾತ್ರೆಯು ಸುವರ್ಣ ಕರ್ನಾಟಕ ಸಾರಿಗೆಯಲ್ಲಿ ಹೊರಟಿತು.ಸಣ್ಣಗೆ ಮಳೆಯೂ ಬರುತ್ತಿತ್ತು,ಹಿತವಾದ ತಂಗಾಳಿಗೆ ಹಾಗೆಯೇ ನಿದ್ದೆಯೂ ಹತ್ತಿತು.ಮತ್ತೆ ಎಚ್ಚರವಾದಾಗ ೧೦ ೧೫, ಬಸ್ ಮಡಿಕೇರಿ ಬಸ್ ಸ್ಟ್ಯಾಂಡ್ ನಿಂದ ಆಗ ತಾನೆ ಹೊರಟಿತ್ತು.ಬ್ಯಾಗು ನೋಡಿದೆ,ಏನೋ ನೆನಪಾದಂತಾಯಿತು, ಇದು ಮಾವನ ಬ್ಯಾಗು,ನನ್ನ ಬ್ಯಾಗು ಮಂಗಳೂರಲ್ಲಿದೆ,"ಪರಮಾತ್ಮ ರೂಮಿನ ಕೀ ಬ್ಯಾಗಲ್ಲಿ ಇದೆ".ಸುಮ್ಮನೆ ಅಲ್ಲ ತಂದೆ ದಿನವೂ , ಜೀವನವನ್ನು ಅಷ್ಟು ಲಘುವಾಗಿ ಪರಿಗಣಿಸಬೇಡ, ಸ್ವಲ್ಪ ಜವಾದ್ಬಾರಿಯಿಂದ ವರ್ತಿಸು ಎಂದು ಹೇಳುತ್ತಿದ್ದುದು ಎಂದೆನಿಸಿತು.ನನ್ನ ಬಗ್ಗೆ ನನಗೆ ಬೇಜಾರಾಗಿ ಹಾಗೆಯೇ ಕಣ್ಣಲ್ಲಿ ನೀರು ತುಂಬಿತ್ತು.ಒಂದೆರಡು ಕ್ಷಣ ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ಆಮೇಲೆ ನಿಧಾನವಾಗಿ ಚೇತರಿಸಿಕೊಂಡೆ.

ಚಿನ್ಮಯಿಗೆ ಮೆಸೇಜು ಮಾಡಿ ಎಲ್ಲೂ ಹೊರಗಡೆ ಹೋಗಬೇಡ, ಮಧ್ಯಾನ್ನ ೩೦ ಹೊತ್ತಿಗೆ ನಾನು ರೂಮಿಗೆ ಬರ್ತೇನೆ,ಕೀ ಮರೆತು ಬಂದಿದ್ದೇನೆ ಎಂದೆ. ಸರಿ ಎಂದ.ನನ್ನ ಅದೃಷ್ಟಕ್ಕೆ ಅವನು ಮೈಸೂರಲ್ಲಿ ಇದ್ದ,ಅವನೂ ಊರಿಗೆ ಹೋಗಿದ್ದಾರೆ "ರಾಮ ರಾಮ". ಹಾಗೆಯೇ ಯೋಚಿಸುತ್ತ ಬಸ್ಸಲ್ಲಿ ಬರುತ್ತಿದ್ದೆ,ಆದ ಟೆನ್ಶನ್ ಗೆ ಹಾಗೆಯೇ ತಲೆ ಸೆಳೆಯಲು ಸುರುವಾಗಿತ್ತು. ಅದು ಜಾಸ್ತಿ ಅಗಲೆಂದೇನೋ ನನಗೆ ಒಂದೊಂದೇ ಕೊರತೆಗಳು,ತೊಂದರೆಗಳು ಬಸ್ಸಲ್ಲಿ ಕಾಣಿಸತೊಡಗಿದವು. ಬಸ್ಸಿನ ಕಿಟಿಕಿಯನ್ನು ಎಷ್ಟೇ ಮುಚ್ಚಿದರೂ ಅದು ತೆರೆದುಕೊಳ್ಳುತ್ತಿತ್ತು,ಮಡಿಕೇರಿಯಿಂದ ಮುಂದೆ ಮೈಯಲ್ಲಿ ಚಳಿಯಿಂದ ಮರಗಟ್ಟುತ್ತಿತ್ತು. ಹಿಂದಿನ ಸೀಟಲ್ಲಿ ಕೂತ ಹೆಂಗಸರು,ಮಕ್ಕಳು ಮಾಡುತ್ತಿದ್ದ ಗಲಾಟೆ ನನಗೆ ಸಹಿಸಲು ಅಸಾಧ್ಯವಾಯಿತು.ತಲೆ ಇನ್ನೇನು ಒಡೆದೇ ಹೋಗುತ್ತದೆ ಅನಿಸಿತ್ತು.ಇದೆಲ್ಲ ಸುರುವಾಗಿದ್ದಿದು ಕೀ ಇಲ್ಲ ಎಂದು ನೆನಪಾದ ಮೇಲೆ,ಅಲ್ಲಿಯವರೆಗೆ ಅದೇ ಬಸ್ಸಲ್ಲಿ,ನಾನು ಹಾಯಾಗಿ ನಿದ್ದೆ ಮಾಡಿದ್ದೆ,ಯಾರು ಹೊತ್ತುಕೊಂಡು ಹೋದರು ನನಗೆ ಗೊತ್ತಾಗುತ್ತಿರಲಿಲ್ಲ,ಆದರೆ ಈಗ ಒಮ್ಮೆಲೇ ಏನಾಗುತ್ತಿದೆ ಎಂದು ನನಗೆ ಅರಿಯದಾಯಿತು. ಯೋಚನೆ ಮಾಡುತ್ತ ಇದ್ದೆ,ರೂಮಿನ ಒಳಗೆ ಹೋಗಬಹುದು,ಚಿನ್ಮಯ್ ಇದ್ದಾನೆ.ಸೂಟ್ಕೇಸಿಂದ ರೆಕಾರ್ಡ್ಸ್ ತೆಗೆಯೋದು ಹೇಗೆ? ಒಡೆಯಲು ಬರಬಹುದ?ಛೆ ಒಂದು ಹೊಸ ಸೂಟ್ ಕೇಸು ಹಾಳಾಗುತ್ತದಲ್ಲ,ಏನು ಮಾಡುವುದು? ಹುಣಸೂರಲ್ಲಿ ಊಟಕ್ಕೆ ನಿಲ್ಲಿಸಿದ,ಈಗ ಏನು ಹೊಟ್ಟೆಗೆ ಸೇರುವುದಿಲ್ಲ ಸುಮ್ಮನೆ ಯಾಕೆ ಹೋಗುವುದು ಮೈಸೂರಲ್ಲೇ ಏನಾದ್ರು ತಿಂದರಾಯಿತು ಎಂದು ನಿರ್ಧರಿಸಿದೆ.


ಮಧ್ಯಾನ್ನ ೪೫ ಕ್ಕೆ ರಾಮಸ್ವಾಮಿ ಸರ್ಕಲ್ ಲ್ಲಿ ಬಸ್ಸಿಳಿದೆ,ಸಿಟಿ ಬಸ್ಸಲ್ಲಿ ರೂಂ ತಲಪುವಾಗ ೧೫.ಚಿನ್ಮಯ್ ನಗುತ್ತ ನಿಂತಿದ್ದ.ಏನು ರವಿಶಂಕರ ಚೆನ್ನಾಗಿದ್ದೀರಾ? ಎಂದು ಕೇಳಿದ. ಹಾಗೆಯೇ ಸ್ವಲ್ಪ ಮಾತುಕತೆ ನಡೆಸಿ, ಅವನತ್ರ ಕೀ ತಗೊಂಡು ರೂಮಿಗೆ ಹೋದೆ. ಕಾಲಿಂದ ಸೂಟ್ ಕೇಸಿನ ತಳಬಾಗವನ್ನು ಮೆಟ್ಟಿ ,ಕೈಯಿಂದ ಎಳೆದು ನೋಡಿದೆ,ಕತ್ತರಿಯನ್ನು ಕೀ ಆಗಿ ಉಪಯೋಗಿಸಿ ನೋಡಿದೆ,ಕೈವಾರದಿಂದ ಪ್ರಯತ್ನಿಸಿದೆ,ಉಹೂಂ ಏನೇನು ಪ್ರಯೋಜವಾಗಲಿಲ್ಲ ಸೂಟ್ ಕೇಸು ಭದ್ರವಾಗಿತ್ತು.ಬೇರೆ ಬೇರೆ ಪ್ರಯೋಗ ಮಾಡಿದ್ದರ ಫಲವಾಗಿ ನನ್ನ ಕೈಗಳೆರಡು ಕೆಂಪಾದವು, ಬಿಟ್ಟರೆ ಬೇರೆ ಏನು ಪ್ರಯೋಜನವಾಗಲಿಲ್ಲ.ಅಷ್ಟು ಸುಲಭವಾಗಿ ಸೂಟ್ ಕೇಸ್ ಲೋಕ್ ಓಪನ್ ಆಗುತ್ತಿದ್ದರೆ,ಯಾರು ಅದನ್ನು ಉಪಯೋಗಿಸುತ್ತಿರಲಿಲ್ಲ ಎನಿಸಿತು. ಇಷ್ಟೆಲ್ಲಾ ಮಾಡುವಷ್ಟರಲ್ಲಿ ೧೫ ಆಗಿತ್ತು,ಹಾಗೆಯೇ ಹೊಟ್ಟೆ ತಳ ಹಾಕುತ್ತಿತ್ತು,ಊಟ ಮಾಡಿದರೆ ಏನಾದರು ಹೊಸ ಉಪಾಯ ಹೊಳೆದೀತು ಎಂಬ ಐಡಿಯಾ ನನಗೆ ಹೊಳೆಯಿತು.ಇನ್ನು ತಡ ಮಾಡುವುದು ಬೇಡ ಎಂದು ಶಿವಸಾಗರ್ ಗೆ ಹೋಗಿ ಒಂದು ಊಟ ಮಾಡಿ ಬಂದೆ.

ಊಟ ಮಾಡಿದ್ದೂ ಸ್ವಲ್ಪ ಉಪಕಾರವಾಯಿತು,ಬಹಳ ತಡವಾಗಿ ನನಗೆ ಜ್ಞಾನೋದಯವಾಯಿತು.ಇದನ್ನು ಹೀಗೆ ಒಡೆಯಲು ಪ್ರಯತ್ನಿಸುವ ಬದಲು ಸೂಟ್ ಕೇಸನ್ನೇ ತಗೊಂಡು ಹೋದರೆ ಆಯಿತಲ್ಲ,ಅಲ್ಲಿ ಕೀ ಇದೆ ಆಮೇಲೆ ಬೇಕಾದ ರೆಕಾರ್ಡ್ಸ್ ತಗೊಂಡ್ರೆ ಆಯಿತು ಎಂಬ "ಭಾರಿ ದೊಡ್ಡ" ಯೋಚನೆ ಹೊಳೆಯಿತು.ಅದೇ ದಿನ ನಮ್ಮ ರಿಸಲ್ಟ್ ಬಂತು.ಅಬ್ಬಾ! ಮತ್ತೆ ನಾನು ಪಾಸು.ಚಿನ್ಮಯಿಗೆ ಒಂದರ ಹಿಂದೆ ಒಂದು ಕಾಲ್ ಗಳು ಬರುತ್ತಿದ್ದವು,ನಾನು ಚಿನ್ಮಯ್ ಜೊತೆ ಕೂತು ಎಲ್ಲರ ರಿಸಲ್ಟ್ ನ್ನು ಒಮ್ಮೆ ನೋಡಿ,ಹಾಗೆ ನಾವು "ವಿಶ್ಲೇಷಣೆ" ಮಾಡಿ ಹೊರಡುವಾಗ ೧೫ ಆಗಿತ್ತು.ಆಗ ಮನೆಯಿಂದ ತಂದೆ ಕಾಲ್ ಮಾಡಿದರು."ಬರ್ತ್ ಸರ್ಟಿಫಿಕೇಟ್ " ರೆಡಿ ಆಗಿದೆ .ನಾನು ನಾಳೆ ಬೆಳಗ್ಗೆ ತಗೊಂಡು ಮಂಗಳೂರಿಗೆ ಬರ್ತೇನೆ ಎಂದರು. ಅಷ್ಟೊತ್ತಿಗಾಗಲೇ ನನ್ನ ಮೊಬೈಲ್ ಸಾಯಲು ರೆಡಿ ಆಗಿತ್ತು.ಬ್ಯಾಟರಿ ಖಾಲಿ.ಸಂಕಟಗಳು ಬಂದಾಗ ಒಂದರ ಹಿಂದೆ ಒಂದರಂತೆ ಬರುತ್ತವೆ ಎಂದು ಯಾರೋ ಹೇಳಿದ್ದು ನೆನಪಿಗೆ ಬಂತು.ಮತ್ತೆ ಪಕ್ಕನೆ ಹೊರತು ರೆಡಿ ಆಗಿ ಸಿಟಿ ಬಸ್ ಹತ್ತಿ,ಬಸ್ ಸ್ಟ್ಯಾಂಡ್ ಗೆ ಬಂದೆ.

ರಾತ್ರಿಯ ಊಟ ಯಾಕೋ ಬೇಡ ಎನಿಸಿತು.ಮತ್ತೆ ಸುವರ್ಣ ಕರ್ನಾಟಕ ಸಾರಿಗೆಯಲ್ಲಿ ನನ್ನ ಪ್ರಯಾಣ ಮರಳಿ ಊರ ಕಡೆ ಹೊರಟಿತು.ರಾತ್ರಿ ವಾಹನಗಳು ಕಡಿಮೆಯೋ,ಇಲ್ಲ ಡ್ರೈವರ್ ಬಹಳ ಬೇಗ ಗಾಡಿ ಓಡಿಸಿದನೋ ಬೆಳಗ್ಗೆ ೩೦ ಗೆ ನಾನು ಮಂಗಳೂರು ಬಸ್ ಸ್ಟ್ಯಾಂಡ್ ಲ್ಲಿ ಇಳಿದೆ.ಅಲ್ಲಿಂದ ಸೀದಾ ಅತ್ತೆ ಮನೆಗೆ ಹೋದೆ,ಒಂದು ಕಾಲ್ ಕೊಡುವಷ್ಟು ಉಸಿರು ಮೊಬೈಲಲ್ಲಿ ಇದ್ದುದು ನನ್ನ ಭಾಗ್ಯ,ಇಲ್ಲವಾದರೆ ಬೇಡ ಯೋಚನೆ ಮಾಡಿ ಪ್ರಯೋಜನವಿಲ್ಲ.ಈಗಲೇ ಸುರುವಾಗಿದ್ದು ನೋಡಿ ಒಂದೊಂದೇ ಬಯಲಾಗಲು.

"ಕೈಯಲ್ಲಿ ಒಂದು ದೊಡ್ಡ ಸೂಟ್ ಕೇಸು,ಬೆನ್ನಲ್ಲಿ ಬ್ಯಾಗು.ಬಾಗಿಲು ತೆರೆದ ಅತ್ತೆ ಮಾವನಿಗೆ ಒಮ್ಮೆಗೆ ಶಾಕ್!! ಪಾಸುಪೋರ್ಟ್ ಗೆ ಇಷ್ಟೆಲ್ಲಾ ರೆಕಾರ್ಡ್ಸ್ ಬೇಕಾಗ್ತದ??" ಒಂದು ದೊಡ್ಡ ಕಥೆ ಆಮೇಲೆ ಹೇಳ್ತೇನೆ ಎಂದು ಹೇಳಿ ಸೀದಾ ಮಲಗಿದೆ,ಹಿಂದಿನ ದಿನದ ಬಹುಭಾಗ ಒಟ್ಟು ಸುಮಾರು ೧೫ ಗಂಟೆ ಬರೀ ಬಸ್ಸಲ್ಲೇ ಕಳೆದಿದ್ದ ನನಗೆ ಬಹು ಬೇಗ ನಿದ್ದೆ ಹತ್ತಿತು.ಹಾಗೆಯೇ ಬೆಳಗ್ಗೆ ಗಂಟೆಗೆ ಎದ್ದೆ,ಕೂಡಲೇ ರೆಡಿ ಆದೆ, ಗಂಟೆಗೆ ಪಾಸ್ಪೋರ್ಟ್ ಆಫೀಸ್ ಓಪನ್ ಆಗಬಹುದು ಕೂಡಲೇ ಹೋದರೆ ನನ್ನ ಕೆಲಸ ಆಗಿ ಬಿಡ್ತದೆ,ಎಂದು ಯೋಚಿಸಿದೆ, ಗಡಿಬಿಡಿಯಲ್ಲಿ ಫಾರಂ ತುಂಬಲೆ ಇಲ್ಲ,ಅದನ್ನು ನೋಡಿದರೆ ಮೊದಲೇ ನಿದ್ದೆ ಕಣ್ಣು,ಏನೇನೋ ಕಾಣಿಸಿತು,ಇಲ್ಲಿ ಯಾವುದನ್ನೂ ತುಂಬಬೇಕು,ಯಾವುದನ್ನೂ ಬಿಡಬೇಕು ಎಂದು ಯೋಚಿಸಲು ಸಮಯವೂ ಇರಲಿಲ್ಲ.ಕೂಡಲೇ ಬ್ರೋಕರ್ ನೆನಪಾಯಿತು.ಅವನ ನಂಬ್ರಕ್ಕೆ ಕಾಲ್ ಮಾಡಿದಾಗ ಗಂಟೆಗೆ ಬನ್ನಿ ಎಂದ. ನಡುವೆ ನನ್ನ ಕೀಯಿಲ್ಲದ ಗೊತ್ತುಗುರಿಯಿಲ್ಲದ ಪ್ರಯಾಣವನ್ನು ಅತ್ತೆ,ಮಾವನಿಗೆ ಅಜ್ಜಿಗೆ ಚುಟುಕಾಗಿ ಹೇಳಿದೆ.ಎಲ್ಲರು ಜೋರಾಗಿ ನಕ್ಕರು.ಅಯ್ಯೋ ರವಿಯೇ," ಸರ್ಟಿಫಿಕೇಟ್ ಗೆ ಬೇಕಾಗಿ ಇಡೀ ಸೂಟ್ ಕೇಸ್ ತಗೊಂಡು ಬರಬೇಕಾಯ್ತಲ್ಲ" ಎಂದರು.

ಅಂದು ಗುರುವಾರ ೨೪ ಜೂನ್.ಮಾವ ಕಾರಲ್ಲಿ ಪಾಸ್ಪೋರ್ಟ್ ಆಫೀಸಿಗೆ ಬಿಟ್ಟರು.ಅಯ್ಯೋ ದೇವರೇ ಎಂತ ಜನ ಸುಮಾರು ೧೦೦ ಜನ ಆಗಲೇ ಇದ್ದರು.ನಾನು ಬ್ರೋಕರ್ ಗೆ ಕಾಲ್ ಮಾಡಿದೆ,ಅವನು ಸಿಕ್ಕಿದ.ಫಾರಂ ಎಲ್ಲ ತುಂಬಿದ ಮೇಲೆ ಅತ ಹೇಳಿದ,ನೀವು ಈಗ ಸಾಧ್ಯವಾದರೆ ಕ್ಯು ನಿಂದು ಟೋಕನ್ ತಗೊಂಡು ಹೋಗಿ, ಇಲ್ಲವಾದರೆ ನಾನು ನಿಮಗೆ ಸೋಮವಾರಕ್ಕೆ ಟೋಕನ್ ತೆಗೆಸಿ ಕೊಡ್ತೇನೆ ಎಂದ. ಹಾಗಾದ್ರೆ ಇವತ್ತು,ಈಗಲೇ ನಂಗೆ ಎಲ್ಲ ಕೆಲಸ ಆಗುವುದಿಲ್ಲವ? ಎಂದು ಆತನನ್ನು ಪ್ರಶ್ನಿಸಿದೆ."ಜನ ನೋಡಿದ್ದೀರಲ್ಲ ಇನ್ನು ದಿನಕ್ಕೆ ಆಗುವಷ್ಟು ಬುಕ್ ಆಗತ್ತೆ,ಅದಕ್ಕೆ ನಿಮಗೆ ಮೊನ್ನೆ ಹೇಳಿದ್ದು ಫಾರಂ ತುಂಬಿಸಿ ಟೋಕನ್ ತಗೊಂಡು ಹೋಗಿ "ಎಂದು ಬ್ರೋಕರ್ ಹೇಳಿದ. ನನ್ನ ಉತ್ಸಾಹವೆಲ್ಲ ಒಮ್ಮೆಗೆ ಜಾರಿತು.ನಾನು ಫಾರಂ ತುಂಬಿಸಿ,ರೆಕಾರ್ಡ್ಸ್ ಎಲ್ಲ ಇದ್ದರೆ ಕೂಡಲೇ ಕೆಲಸ ಆಗುತ್ತೆ ಎಂದು ತಿಳಿದಿದ್ದೆ.ಫೀಸ್? ೧೦೦ ರೂ ಕೊಡಿ ಎಂದ.ಅವನ ಫೀ ಕೊಟ್ಟು,ನಾನು ಕ್ಯು ಹತ್ರಕ್ಕೆ ಬರುವಾಗ ತಂದೆಯು ಬಂದಿದ್ದರು.

ನನ್ನ ತಂದೆ ತಾಳ್ಮೆಯ ಪ್ರತಿರೂಪ,ಎಲ್ಲ ಕೆಲಸವೂ ಬಹಳ ಅಚ್ಚುಕಟ್ಟಾಗಿ ಆಗಬೇಕು.ರೆಕಾರ್ಡ್ಸ್ ಎಲ್ಲ ಬಹಳ ಶುದ್ದ ಇರಬೇಕು.ಒಂದು ಕೆಲಸ ಮಾಡುವ ಮೊದಲು ಒಂದು ಹತ್ತಿಪ್ಪತ್ತು ಸಲ ಯೋಚನೆ ಮಾಡ್ತಾರೆ.ಒಂದು ತರ ಚೆಸ್ಸ್ ಆಡಿದ ಹಾಗೆ.ಅದರ ಸಾಧಕ,ಭಾದಕ ಎಲ್ಲ ಯೋಚನೆ ಮಾಡಿ ಆಮೇಲೆ ಕೆಲಸಕ್ಕೆ ಹೊರಡುವುದು.ಹಾಗಾಗಿ ಎಲ್ಲ ಕೆಲಸವೂ ಬಹಳ ನಿಧಾನ!! ಹಾಗಾಗಿಯೇ ನಾನು ಗಡಿಬಿಡಿ ಮಾಡಿದಾಗಲೆಲ್ಲ ನನಗೆ ಬುದ್ದಿ ಹೇಳುತ್ತಿರುವುದು.ನಾನು ಏನು ಹೇಳಿದರು ಕಿವಿಗೆ ಹಾಕೋಲ್ಲ ಎಂಬುದು ಬೇರೆ ವಿಚಾರ!!! ತಂದೆಗೆ ಎಲ್ಲ ವಿಷಯ ಹೇಳಿದೆ,ಅದಕ್ಕೆ ನಾನು ಯಾವಾಗಲು ಹೇಳೋದು,ನೀವು ದೊಡ್ಡ ಆದ ಹಾಗೆ ನಿಮಗೆ ಹೇಳಿದ್ರೆ,ತಂದೆ ದಿನಾಲೂ ಹೇಳ್ತಾರೆ ಅಂತ ಅನಿಸುತ್ತೆ,ಯಾವತ್ತೂ ಜಾಗೃತನಾಗಿ ಇರಬೇಕ್ಕಪ್ಪ, ನಿನ್ನೆ ಚಿನ್ಮಯ್ ಇದ್ದ,ಯಾವತ್ತು ಯಾರಿರ್ತಾರೆ? ನಿನ್ನ ಜಾಗ್ರತೆ ನೀನೆ ಮಾಡ್ಕೊಬೇಕಪ್ಪ ಎಂದರು.

ಬರ್ತ್ ಸರ್ಟಿಫಿಕೇಟ್ ಪಡೆಯಲು ಹತ್ತು ದಿನ ಬೇಕಾಗುತ್ತದೆ,ಒಂದು ದಿನ ಹೋಗಿ ಅರ್ಜಿ ಕೊಟ್ಟು ಬಂದರೆ ಮತ್ತೆ ೧೦ ದಿನ ಕಳೆದು ಸಿಗ್ತದೆ.ದುಡ್ಡು ಕೊಟ್ಟರೆ ಅರ್ಧ ಗಂಟೆಯಲ್ಲೂ ಆಗ್ತದೆ, ದುಡ್ಡಿಲ್ಲದೆ ಎಲ್ಲೂ ವ್ಯವಹಾರವೇ ಇಲ್ಲ ಎಂದರು.ಹೀಗೆ ಮಾತಾಡ್ತಾ ಕ್ಯುವಲ್ಲೇ ನಿಂತಿದ್ದೆ.ಹಾಗೆ ಒಂದೆರಡು ಜನರ ಪರಿಚಯವೂ ಆಯಿತು.೧೯೮೯,ಜನವರಿಯ ನಂತರ ಜನಿಸಿದವರಿಗೆ ಬರ್ತ್ ಸರ್ಟಿಫಿಕೇಟ್ ಕೇಳ್ತಾರೆ ಅಲ್ಲಿನ ಮೊದಲಿನವರಿಗೆ ಬೇಡ ಎಂದರು ಒಬ್ಬರು.ಸುಮಾರು ಒಂದು ಗಂಟೆ ಕಾದ ನಂತರ,ಕೂಡಲೇ ಕೆಲವು ಅಧಿಕಾರಿಗಳು ಬಂದು ಎಲ್ಲರ ಫಾರಂ ಮೇಲೆ ಒಂದು ಡೇಟ್ ಬರೆದು ಕೊಡುತ್ತಿದ್ದರು.ಪಕ್ಕದವರು ಹೇಳಿದರು,ಇವತ್ತು ಒಳಗೆ ಬಿಡುವಷ್ಟು ಜನ ಆಯಿತು,ಮುಂದೆ ಯಾವಾಗ ಬರಬೇಕು ಅಂತ ಡೇಟ್ ಹಾಕಿ ಕೊಡ್ತಾರೆ. ದಿನ ಬಂದಾಗ ಕ್ಯು ನಿಲ್ಲುವುದೇ ಬೇಡ, ದೇಟನ್ನು ತೋರಿಸಿದರೆ ಆಯಿತು,ಸೀದಾ ಡೈರೆಕ್ಟ್ ಎಂಟ್ರಿ ಎಂದರು.ನನಗೆ ೨೯ ತಾರೀಕು ಮಂಗಳವಾರಕ್ಕೆ ಸಿಕ್ಕಿತು.ನನ್ನ ಪಕ್ಕದಲ್ಲಿ ಇದ್ದ ಒಬ್ಬರು ಹೆಂಗಸಿಗೆ ೨೮ ರಂದು ಸಿಕ್ಕಿತ್ತು.ಅವರು ಅಧಿಕಾರಿಯ ಹತ್ತಿರ ಹೇಳುತ್ತಿದ್ದರು ನಂಗೆ ಸೋಮವಾರಕ್ಕೆ ಡೆಲ್ಲಿ ಗೆ ಹೋಗಬೇಕು,ಸಾಧ್ಯವಾದರೆ ನಾಳೆಗೆ ಡೇಟ್ ಹಾಕಿ ಕೊಡಿ ಎಂದು.ಅವರು ಆಗಲ್ಲಮ್ಮ, ಈಗಾಗಲೇ ಸುಮಾರು ಜನರಿಗೆ ಆಗಿದೆ,ಮತ್ತೆ ನೀವು ನಾಳೆ ಬಂದರೆ ಕಾಯಬೇಕಾಗುತ್ತದೆ ಎಂದರು.ಅವಳು ಮತ್ತೆ,ಮತ್ತೆ ಕೇಳಿಕೊಂಡಳು,ಕೊನೆಗೆ ಆತ ಅವತ್ತೇ ಒಳಗೆ ಕಳಿಸಲು ಒಪ್ಪಿದ.

ನಂಗೆ ವಿಷಯ ತುಂಬಾ ನಿಧಾನವಾಗಿಯಾದರೂ ಕೊನೆಗೂ ಗೊತ್ತಾಯಿತು.ಮಂಗಳೂರಲ್ಲಿ ಸಿಕ್ಕಾಪಟ್ಟೆ ರಶ್ ಇದೆ,ದಿನಕ್ಕೆ ೧೦೦ ರಿಂದ ೧೫೦ ಜನರನ್ನು ಮಾತ್ರ ಒಳಗೆ ಬಿಡ್ತಾರೆ.ಇವತ್ತು ಒಳಗಡೆ ಹೋಗುವವರು ದಿನ ಹಿಂದೆ ಬಂದು ಟೋಕನ್ ಮಾಡಿಸಿಕೊಂಡವರು.ಒಮ್ಮೆ ಟೋಕನ್ ಇದ್ದರೆ ಆಮೇಲೆ ಡೈರೆಕ್ಟ್ ಎಂಟ್ರಿ ಬೆಳಗ್ಗೆ ೩೦ ಗೆ ಕಚೇರಿ ಓಪನ್ ಆಗುತ್ತದೆ ಆಮೇಲೆ ನೀವು ಬಂದ ಹಾಗೆ ಸೀದಾ ಒಳಗೆ ಹೋಗಬಹುದು.ಅಲ್ಲ ಇವತ್ತೇ ಬಂದು ಇವತ್ತೇ ಒಳಗಡೆ ಹೋಗಬೇಕಾದರೆ ಬೆಳಗ್ಗೆ ಗಂಟೆಗೆ (ಕೆಲವು ಸಲ ಅದಕ್ಕಿಂತಲೂ ಮೊದಲು ) ಬಂದು ಕ್ಯು ನಿಲ್ಲಬೇಕು. ಕ್ಯುವಿನಲ್ಲಿ ಮೊದಲ ೩೫ ರಿಂದ ೫೦ ರವರೆಗೆ ಇದ್ದವರಿಗೆ ಒಳಗೆ ಹೋಗಲು ಅವಕಾಶ ಸಿಗುತ್ತದೆ.ಉಳಿದ ೧೦೦ ಜನರಷ್ಟು ಹಿಂದೆಯೇ ಟೋಕನ್ ಮಾಡಿಸಿರುತ್ತಾರೆ.ಇದು ಅಲ್ಲದೆ ಇನ್ನೊಂದು ವಿಧಾನವು ಇದೆ,ನೀವು ಆನ್ ಲೈನ್ ಎಂಟ್ರಿ ಮಾಡಿದರೆ ಯಾವುದೇ ಟೋಕನ್ ಬೇಡ,ನಿಮಗೆ ಸೀದಾ ಡೈರೆಕ್ಟ್ ಎಂಟ್ರಿ ಸಿಗುತ್ತದೆ. ಇನ್ನೊಂದು ವಿಧಾನವು ಇದೆ,ನೀವು ಯಾರದ್ರು ಬ್ರೋಕರ್ ನ್ನು ಹಿಡಿದುಕೊಂಡರೆ ಅವರು ನಿಮ್ಮ ಪರವಾಗಿ ಅರ್ಜಿ ತಗೊಂಡು,ಕ್ಯು ನಿಂದು ಟೋಕನ್ ತೆಗೆಸಿ,ಆಮೇಲೆ ನಿಮಗೆ ಕಾಲ್ ಮಾಡಿ ಯಾವಾಗ ಬರಬೇಕು ಎಂದು ಹೇಳ್ತಾರೆ.ನಿಮಗೆ ಏನು ಕೆಲಸ ಇಲ್ಲ ಅವರು ಹೇಳಿದ ದಿನ ಬಂದು ಸೀದಾ ಒಳಗಡೆ ಹೋದರೆ ಆಯಿತು. ನೀವು ಸ್ವತಹ: ಮಂಗಳೂರಿಗೆ ಬಂದು ಪಾಸ್ಪೋರ್ಟ್ ಆಫೀಸ್ ಎದುರುಗಡೆ ಇರುವ ಬ್ರೋಕರ್ ಗಳನ್ನು ಮಾತಾಡಿಸಿದರೆ,ಇಷ್ಟು ಕೆಲಸಕ್ಕೆ ೫೦೦ ರೂ ತಗೊಳ್ಳುತ್ತಾರೆ.ಇಲ್ಲ ನಿಮ್ಮ ನಿಮ್ಮ ಊರಲ್ಲಿ ಇರುವ ಲೋಕಲ್ ಬ್ರೋಕರ್ ಜೊತೆ ಹೇಳಿದರೆ ನಿಮಗೆ ೧೦೦೦ ರೂ ಆಗುತ್ತದೆ.ಅವರಿಗೂ,ಇಲ್ಲಿನವರಿಗೂ ಕನೆಕ್ಷನ್ ಇದೆ,ಅದನ್ನೆಲ್ಲ ಅವರೇ ಮಾತಾಡಿ ಎಲ್ಲ ಕೆಲಸ ಮಾಡಿ ಕೊಡ್ತಾರೆ.

ಸರಿ ನನ್ನ ಮುಂದೆ ಈಗ ದಾರಿಗಳಿದ್ದವು,ಒಂದು ನಾಳೆ ಬೆಳಗ್ಗೆ ಅಂದರೆ ಶುಕ್ರವಾರ ಆದಷ್ಟು ಬೇಗ ಬಂದು ಕ್ಯು ನಿಂದು ಮೊದಲ ೫೦ ಒಳಗೆ ಇದ್ದರೆ ನಾಳೆಯೇ ಒಳಗೆ ಹೋಗಲು ಸಿಗಬಹುದು,ಇಲ್ಲವಾದರೆ ಅವರು ಹಾಕಿ ಕೊಟ್ಟ ದಿವಸ ಅಂದರೆ ಮುಂದಿನ ಮಂಗಳವಾರ ಬಂದರೆ ಸೀದಾ ಒಳಗೆ ಹೋಗಬಹುದು.ನಾನು ಇನ್ನೊಮ್ಮೆ ಪ್ರಯತ್ನಿಸುವುದು ಎಂದು ನಿರ್ಧರಿಸಿದೆ.ಹೊರಗೆ ಬಂದು ಒಬ್ಬ ಬ್ರೋಕರ್ ಹತ್ರ ನಿಜವಾಗಿಯೂ ಗಂಟೆಗೆ ಜನ ಕ್ಯು ವಿಗೆ ಬರ್ತಾರ ಎಂದು ಕೇಳಿದೆ.ಹೌದು ಕೆಲವು ಜನ ೩೦, ಗಂಟೆಗೆ ಬಂದು ಕ್ಯು ನಿಲ್ತಾರೆ, ನಿಮಗೆ ಫಾರಂ ತಗೊಂಡು ಫಿಲ್ ಮಾಡಿ ಎಲ್ಲ ಆಗಿದೆ,ನಾಳೆಗೆ ಎಂಟ್ರಿ ಬೇಕಾದರೆ ಹೇಳಿ ಬೆಳಗ್ಗೆ ನಿಂತು ತೆಗೆಸಿ ಕೊಡ್ತೇನೆ ,ಬರಿ ೨೦೦ ರೂ ಚಾರ್ಜ್ ಆಗತ್ತೆ ಎಂದ.ಸರಿ ಅದೇನು ಬೇಡ ನಂದು ಮನೆ ಇಲ್ಲೇ ಹತ್ರ,ನಾನೆ ಬರ್ತೇನೆ ಎಂದು ಹೇಳಿ ಹೋದೆ.ಸಂಜೆ ತಂದೆ ಹೊರಡುವಾಗ ತಂದೆಯ ಹತ್ರ ನನ್ನ ಸೂಟ್ ಕೇಸನ್ನು ತಗೊಂಡು ಹೋಗಬೇಕು ಎಂದೇ,ನನ್ನ ತಂದೆ ಏನು ಹೇಳಲಿಲ್ಲ,ಬೇರೆ ಯಾರೇ ಆಗಿದ್ರು ಏಟು ಬೀಳೋದು ಗ್ಯಾರೆಂಟಿ.ನಾನು ಮಂಗಳೂರಲ್ಲೇ ಉಳಿದೆ.ಇನ್ನು ಎಲ್ಲ ಕೆಲಸ ಮುಗಿಸಿ ಬರೋದು ಎಂದೇ.

ಶುಕ್ರವಾರ ಬೆಳಗ್ಗೆ ಮತ್ತೆ ಗಂಟೆಗೆ ಮಾವ ಕಾರಲ್ಲಿ ಬಿಟ್ಟರು.ಆಗಲೇ ಒಂದಷ್ಟು ಜನ ಸೇರಿದ್ದರು.ನಾನು ಎಣಿಸಿದೆ, ನಾನು ೧೯ನೆಯವ,ಇವತ್ತು ಒಳಗೆ ಹೋಗಲು ಸಿಗಬಹುದು ಎಂದು ಯೋಚಿಸುತ್ತ ಕಾದು ನಿಂತೆ,ಗಂಟೆ ೩೦ ಆಗುತ್ತಿದ್ದಂತೆ ನನ್ನ ಕಡೆ, ಕಡೆ ನಿಂತವರು ಫೋನಲ್ಲಿ ಮಾತಾಡುವುದು ಜಾಸ್ತಿ ಆಯಿತು.ಜನವು ಸೇರತೊದಗಿತ್ತು.ಅಲ್ಲೇ ಪಕ್ಕದಲ್ಲೇ ಒಂದು ದೊಡ್ಡ ಶೆಡ್ ತರದ ಒಂದು ಕೋಣೆ ಇದೆ ,ಅಲ್ಲಿ ಕೂತುಕೊಳ್ಳಲು ಒಂದು ೫೦ ಕುರ್ಚಿ ಇದೆ. ಗಂಟೆಗೆ ಗಾರ್ಡ್ ಗಳು ಬಂದು ಕೋಣೆಯನ್ನು ಓಪನ್ ಮಾಡಿ,ಒಳಗೆ ಬಿಡ್ತಾರೆ, ಆಮೇಲೆ ಅಲ್ಲಿ ಸಾಲಾಗಿ ಕ್ಯು ನಿಲ್ಲಿಸುತ್ತಾರೆ,ಅಲ್ಲೇ ನಿನ್ನೆ ನಾನು ಕ್ಯು ನಿಂತದ್ದು. ಹೀಗೆ ಒಳಗೆ ಬಿಡುವಾಗ ಒಬ್ಬರ ಜೊತೆ ಒಬ್ಬರು ಸೇರಿಕೊಂಡರು,ನಾನು ೧೯ ರಲ್ಲಿದ್ದವನು ೩೯ ಕ್ಕೆ ಜಾರಿ ಹೋದೆ.ಏನಾಯಿತು ಎಂಬುದು ನಂಗೆ ಗೊತ್ತಾಗಲಿಲ್ಲ,ಕುಳಿತುಕೊಳ್ಳಲು ಕುರ್ಚಿ ಸಿಕ್ಕಿದಷ್ಟೇ ನನ್ನ ಭಾಗ್ಯ ಅಂದುಕೊಂಡೆ.ಮತ್ತೆ ಗೊತ್ತಾಯಿತು,ಬೆಳಗ್ಗೆ ಗಂಟೆಗೆ ಇದ್ದ ೧೦ , ೨೦ ಜನರಲ್ಲಿ ಬಹು ಪಾಲು ಬ್ರೋಕರ್ ಗಳೇ ಇದ್ದವರು.ಅವರು ಒಬ್ಬೊಬ್ಬರು ಐದೈದು ಪಾರ್ಟಿಗೆ ಕ್ಯ್ಯು ನಿಂತಿದ್ದರು, ಸಮಯವಾಗುತ್ತಿದ್ದಂತೆಯೇ ತಮ್ಮ,ತಮ್ಮ ಪಾರ್ಟಿಗಳಿಗೆ ಕಾಲ್ ಮಾಡಿ ಬರಿಸುತ್ತಿದ್ದರು.ಹಾಗಾಗಿ ನಾನು ೧೯ ರಿಂದ ೩೯ ಕ್ಕೆ ಹೋದುದು ಮತ್ತು ಗಂಟೆಯ ಹೊತ್ತಿನಲ್ಲಿ ನನ್ನ ಸುತ್ತಲಿದ್ದವರ ಮೊಬೈಲ್ ಬಳಕೆ ಜಾಸ್ತಿ ಆದುದು.

ಎದುರಿದ್ದವರನ್ನು ಒಳಗೆ ಬಿಡಲು ಶುರು ಮಾಡಿದರು.ಆಗ ಅದೇ ಅಧಿಕಾರಿ,ನಿನ್ನೆ ಟೋಕನ್ ಬರೆದು ಕೊಡುತ್ತಿದ್ದವನು ಅಲ್ಲಿ ಬಂದು ನಿಂದ,ಅವನನ್ನೇ ಗಮನಿಸಿದೆ,ವಯಸ್ಸಾದವರನ್ನು ,ಸಣ್ಣ ಮಕ್ಕಳಿರುವವರನ್ನು ಆತ ನೋಡಿ ಸೀದಾ ಒಳಗೆ ಬಿಡುತ್ತಿದ್ದ.ಅವರು ಕ್ಯು ವಲ್ಲಿ ನಿಲ್ಲಬೇಕಾಗಿಲ್ಲ. ಏನೋ ತಲೆಯಲ್ಲಿ ಓಡಿದ ಹಾಗಾಯಿತು.ನಾನು ಕುಳಿತ ಕುರ್ಚಿಯಲ್ಲಿ ಟವೆಲ್ ಇತ್ತು ಪಕ್ಕದವರ ಹತ್ತಿರ ಈಗ ಬರ್ತೇನೆ ಎಂದು ಹೇಳಿ, ಸೀದಾ ಅಧಿಕಾರಿಯ ಹತ್ರ ಹೋದೆ,"ಸರ್ ನಾನು ನಿನ್ನೆ ಬಂದಿದ್ದೆ,ನೀವು ೨೯ ಕ್ಕೆ ಡೇಟ್ ಹಾಕಿ ಕೊಟ್ಟಿದ್ದೀರಿ,ನಾನು ಸೋಮವಾರ ಕಂಪೆನಿಯಲ್ಲಿ ಜೋಯಿನ್ ಆಗಬೇಕು,ಬೇರೆ ದಾರಿ ಇಲ್ಲ,ಅದಕ್ಕೆ ಇವತ್ತು ಬೆಳಗ್ಗೆ ಗಂಟೆಗೆ ಬಂದು ಕ್ಯು ನಿಂತಿದ್ದೇನೆ,ಆದರು ಕೊನೆಯಲ್ಲಿ ನೋಡಿ ೩೯ ನೆಯ ಸ್ತಾನಕ್ಕೆ ತಳ್ಳಿದರು ,ಏನಾದ್ರು ಮಾಡಿ ಇವತ್ತು ನನಗೆ ಕೆಲಸ ಆಗಬೇಕು " ಎಂದೆ. ನಿನ್ನೆ ನನ್ನ ಪಕ್ಕದಲ್ಲಿ ನಿಂತಿದ್ದ ಮಹಿಳೆ ಹೇಳಿದ ಹಾಗೆ ನಾನು ಸ್ವಲ್ಪ ಸೇರಿಸಿ ಹೇಳಿದೆ.ಅವನಿಗೆ ಏನು ಅನಿಸಿತೋ ಗೊತ್ತಿಲ್ಲ,ಸರಿ ಒಳಗೆ ಹೋಗಪ್ಪ,ಎಂದ.ಒಂದು ಕ್ಷಣ ನನಗೆ ನಂಬಲು ಸಾಧ್ಯವಾಗಲಿಲ್ಲ.ಕೂಡಲೇ ನನ್ನ ಟವೆಲ್ ಇಟ್ಟ ಜಾಗಕ್ಕೆ ಬಂದು ಟವೆಲ್ ತಗೊಂಡು,ಅವನ ಹತ್ರ ಇನ್ನು ಇವತ್ತು ಆಗಲ್ಲ,ನಾನು ಮನೆಗೆ ಹೋಗ್ತೇನೆ ಅಂತ ಹೇಳಿ,ಸೀದಾ ಒಳಗೆ ಹೋದೆ.

ಅಲ್ಲಿ ಕೌಂಟರ್ ಲ್ಲಿ ಒಮ್ಮೆ ನಮ್ಮ ಹೆಸರು,ಎಲ್ಲ ಎಂಟ್ರಿ ಮಾಡಿ,ನಾವು ಎಲ್ಲ ರೆಕಾರ್ಡ್ಸ್ ತಂದಿದ್ದೇವೆಯೋ ಎಂದು ಪರೀಕ್ಷಿಸಿ,ಒಂದು ರಶೀದಿ ಕೊಟ್ಟು ಅಲ್ಲಿಂದ ಮುಂದೆ ಬಿಡ್ತಾರೆ. ರಶೀದಿಯಲ್ಲಿ ಒಂದು ಟೋಕನ್ ನಂಬರ ಇರ್ತದೆ.ಮುಂದಿನ ರೂಮಲ್ಲಿ ನಾವು ನಮ್ಮ ರೆಕಾರ್ಡ್ಸ್,ಮತ್ತು ರಶೀದಿ ಹಿಡಕೊಂಡು ನಮ್ಮ ಟೋಕನ್ ನಂಬರ ಡಿಸ್ ಪ್ಲೇ ಬೋರ್ಡ್ ಲ್ಲಿ ಡಿಸ್ ಪ್ಲೇ ಆಗುವವರೆಗೆ ಕಾಯಬೇಕಾಗುತ್ತದೆ.ನಾನು ಅಲ್ಲಿ ಸುಮಾರು ಗಂಟೆ ಕಾಯಬೇಕಾಯಿತು. ೧೩ ಕೌಂಟರ್ (""ಇದರಲ್ಲಿ ಸುಮಾರು ೨೦ ಕೌಂಟರ್ ಗಳಿವೆ )ಗೆ ನನ್ನನ್ನು ಕಳಿಸಿದರು.ಅಲ್ಲಿ ಕಂಪ್ಯೂಟರ್, ಮತ್ತು ಎಂಟ್ರಿ ಮಾಡುವವ ಇರ್ತಾನೆ, ಮೋನಿಟಾರ್ ಒಂದು ಅವನಿಗೆ,ಒಂದು ನಮಗೆ ತೋರಿಸಲು.ನಾವು ಫಾರಂ ಲ್ಲಿ ಏನು ಫಿಲ್ ಮಾಡಿದ್ದೆವೆಯೋ ಅದನ್ನೆಲ್ಲ ಅಲ್ಲಿ ಎಂಟ್ರಿ ಮಾಡ್ತಾರೆ.ಅದೇ ಫಾರಂ ಕಂಪ್ಯೂಟರ್ ಲ್ಲಿ ಇರುತ್ತೆ.ಆಮೇಲೆ ರೆಕಾರ್ಡ್ಸ್(ವೋಟರ್ ಐಡಿ, ರೇಶನ್ ಕಾರ್ಡ್,ಬರ್ತ್ ಸರ್ಟಿಫಿಕೇಟ್,ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್) ಎಲ್ಲದರ ಒಂದು ಜೆರೊಕ್ಷ್ ಕಾಪಿಯನ್ನು ಸ್ಕ್ಯಾನ್ ಮಾಡಿ,ಅಪ್ಲೋಡ್ ಮಾಡ್ತಾರೆ.ಅಲ್ಲೇ ಇರುವ ಡಿಜಿಕ್ಯಾಮಲ್ಲಿ ಫೋಟೋ ತೆಗೆದು,ಅದನ್ನು ಕಂಪ್ಯೂಟರ್ ಗೆ ಫೀಡ್ ಮಾಡ್ತಾರೆ.ಇಲ್ಲಿ ನಾವು ಪಾಸ್ಪೋರ್ಟ್ ನಿ ಫೀಸ್ ೧೦೦೦ ರೂ ಕೊಡುವುದು.ಸುಮಾರು ಅರ್ಧ ಗಂಟೆ ಕೆಲಸ.ಆಮೇಲೆ ಎಲ್ಲ ಜೆರೊಕ್ಷ್,ಇಲ್ಲೂ ಒಂದು ರಶೀದಿ,ಎಲ್ಲ ಪಿನ್ ಮಾಡಿ ಕೊಡ್ತಾರೆ.ಅದನ್ನು ತೆಗೆದುಕೊಂಡು ಇನ್ನೊಂದು ಕಡೆ ಕಾಯಬೇಕು,ಮತ್ತೆ ನಮ್ಮ ನಂಬರ ಡಿಸ್ ಪ್ಲೇ ಆಗುವವರೆಗೆ.ಕಾದು ಕೊನೆಗೂ ನನ್ನ ನಂಬರ ಬಂತು.ಬಿ೪ ("ಬಿ" ಇಲ್ಲಿ ಒಟ್ಟು ಕೌಂಟರ್ ಗಳಿವೆ) ಕೌಂಟರ್ ಲ್ಲಿ ಡಾಕ್ಯುಮೆಂಟ್ ವೆರಿಫಿಕೆಶನ್ ನಡೆಯುತ್ತದೆ, ಅದು ಆದ ಮೇಲೆ ಮತ್ತೆ ಇನ್ನೊಂದು ಕೌಂಟರ್ ಗೆ ಹೋಗಲು ಕಾಯಬೇಕು.ಮತ್ತೆ ನಮ್ಮ ಟೋಕನ್ ನಂಬರ್ ಡಿಸ್ ಪ್ಲೇ ಅದಾಗ ನಾವು ಮುಂದಿನ "ಸಿ " ಕೌಂಟರ್ ಗೆ ಹೋಗಬೇಕು.ನನ್ನದು ಸಿ ("ಸಿ "ಯಲ್ಲಿ ಕೌಂಟರ್ ಇರುವುದು)ಅಲ್ಲಿ ಏನು ಮಾಡಿದರು ಎಂದು ನನಗು ಗೊತ್ತಾಗಲಿಲ್ಲ, ನಮ್ಮ ಫೈಲನ್ನು ತಗೊಂಡರು,ಹಿಂದಿನ ಕೌಂಟರ್ ನವರು ಡಾಟಾ ಅಪ್ಡೇಟ್ ಮಾಡಿದ ಕೂಡಲೇ ಇವರು,ಯಾಕೆ ಪಾಸ್ಪೋರ್ಟ್ ಬೇಕು ಎಂದರು.ನಾನು ಜಾಬ್, ಮುಂದೆ ,ಹೋಗಲು ಎಂದೆ.ಸರಿ ಎಂದು ಫೈಲನ್ನು ಅಲ್ಲಿ ಇಟ್ಟು ಆಯಿತು ಹೋಗಿ ಇನ್ನೊಂದು ೧೦ ದಿನದಲ್ಲಿ ಪೋಲಿಸ್ ತಪಾಸಣೆಗೆ ಬರುತ್ತದೆ ಎಂದು ಹೇಳಿದರು.ನಾನು ಅಲ್ಲಿಂದ ಕಡೆಗೆ ಬಂದೆ,ಅಲ್ಲಿ ನನ್ನ ಹೆಸರು,ರೆಫ್ರೆನ್ಸ್ ನಂಬರು ಎಲ್ಲ ಇರುವ ಒಂದು ರಶೀದಿಯನ್ನು ಕೊಟ್ಟರು.ಅದನ್ನು ತೆಗೆದುಕೊಂಡು ಹೊರಗೆ ಬರುವಷ್ಟರಲ್ಲಿ ೧೨ ಗಂಟೆ,ಸುಮಾರು ಗಂಟೆಗಳ ಕಾಲ ಪಾಸ್ಪೋರ್ಟ್ ಕಚೇರಿಯ ಒಳಗೆ ಇದ್ದೆ.ಸುಮಾರು ಗಂಟೆ ಅದರ ಮೊದಲು ಹೊರಗೆ ಕಾದಿದ್ದೆ.ಅಂತೂ ಕೆಲಸ ಆಯಿತಲ್ಲ ಅದೇ ದೊಡ್ಡ ಸಮಾಧಾನ.ಮತ್ತೊಮ್ಮೆ ಒಳಗೆ ಬಿಟ್ಟ ಅಧಿಕಾರಿಯನ್ನು ಮನಸಾರೆ ಕೊಂಡಾಡುತ್ತಾ ಬಂದೆ.

ದಿನ ಮಂಗಳೂರಲ್ಲೇ ಇದ್ದು ಮರುದಿನ ಮನೆಗೆ ಬಂದೆ. ಸೋಮವಾರ ವಿಟ್ಲದ ಪೋಲಿಸ್ ಸ್ಟೇಶನ್ ಗೆ ಹೋದೆ.ಅವರು ತಪಾಸಣೆಗೆ ಬಂದಾಗ ಏನೇನು ರೆಕಾರ್ಡ್ಸ್ ನಾವು ಕೊಡಬೇಕಾಗುತ್ತೆ ಎಂದು ಕೇಳಿದೆ."ವೋಟರ್ ಐಡಿ, ರೇಶನ್ ಕಾರ್ಡ್ ,ಬರ್ತ್ ಸರ್ಟಿಫಿಕೇಟ್ ,ಎಸ್ ,ಎಸ್,ಎಲ್ ,ಸಿ ಮಾರ್ಕ್ಸ್ ಕಾರ್ಡ್" ಜೊತೆಗೆ "ವಾಸಸ್ಥಳ ದೃಧೀಕರಣ ಪತ್ರ " ಬೇಕಾಗುತ್ತೆ ಎಂದರು. ಇಷ್ಟು ರೆಕಾರ್ಡ್ಸ್, ನಿಮ್ಮನ್ನು ಚೆನ್ನಾಗಿ ಗೊತ್ತಿರುವ ಇಬ್ಬರನ್ನು ಸಾಕ್ಷಿಗೆ ಕರೆದುಕೊಂಡು ಬನ್ನಿ ಎಂದರು.ಸರಿ ಸಾಮಾನ್ಯವಾಗಿ ಎಷ್ಟು ದಿನದಲ್ಲಿ ಪೋಲಿಸ್ ಸ್ಟೇಶನ್ ಗೆ ಫೈಲ್ ಬರ್ತದೆ ಎಂದು ಕೇಳಿದೆ, ಒಂದು ೧೫ , ೨೦ ದಿನ ಆಗುತ್ತದೆ, ನಿಮ್ಮ ಫೋನ್ ನಂಬರು ಎಲ್ಲ ಅದರಲ್ಲಿ ಇರುತ್ತದೆ ಬಂದ ಕೂಡಲೇ ನಿಮಗೆ ಫೋನ್ ಮಾಡಿ ಹೇಳ್ತೇವೆ,ಮೊದಲು "ವಾಸಸ್ಥಳ ದೃಧೀಕರಣ ಪತ್ರ" ಕ್ಕೆ ಅರ್ಜಿ ಹಾಕಿ ಅದು ಸಿಗಲು ಒಂದು ೧೦ ದಿನ ಬೇಕು,ಇಲ್ಲೇ "ನೆಮ್ಮದಿ ಕೇಂದ್ರದಲ್ಲಿ" ಅರ್ಜಿ ಕೊಡಿ ಎಂದು ವಿವರವಾಗಿ ಒಬ್ಬರು ಪೋಲಿಸ್ ಅಧಿಕಾರಿ ಹೇಳಿದರು.ನನಗೆ ಬಹಳ ಆಶ್ಚರ್ಯವಾಯಿತು.

ನೆಮ್ಮದಿ ಕೇಂದ್ರದಲ್ಲಿ ಅರ್ಜಿ ಕೊಡಲು ೧೫ ರೂ ಫೀ,"ವೋಟರ್ ಐಡಿ,ರೇಶನ್ ಕಾರ್ಡ್,ಎಸ್,ಎಸ್,ಎಲ್,ಸಿ ಮಾರ್ಕ್ಸ್ ಕಾರ್ಡ್
ಜೊತೆಗೆ ನೋಟರಿಯವರಿಂದ ಒಂದು "ಅಫಿದವತ್ "ಮಾಡಿಸಬೇಕಾಗುತ್ತದೆ, ಎಂದು ಗೊತ್ತಾಯಿತು.ನೋಟರಿ ಆಫೀಸ್ ಗೆ ಹೋದಾಗ,ಕೂಡಲೇ ಎಲ್ಲ ಕೆಲಸ ಮಾಡುವ ಎಂದು ಹೇಳಿದರು.ಎಲ್ಲ ರೆಕಾರ್ಡ್ಸ್ ಇದೆಯಾ ಎನ್ನಲು,ನನ್ನ ಬಳಿ ಏನು ಇರಲಿಲ್ಲ.ನನ್ನ ಗ್ರಹಚಾರ ಸಂಪೂರ್ಣ ಕೆಟ್ಟು ಹೋಗಿತ್ತು.ನೀವು ಎಲ್ಲ ತಗೊಂಡು ಬನ್ನಿ,ಕೂಡಲೇ ಮಾಡಿ ಕೊಡುವ ಎಂದರು.ಮತ್ತೆ ಸೀದಾ ಮನೆಗೆ ಬಂದು ಎಲ್ಲ ರೆಕಾರ್ಡ್ಸ್ ತೆಗೆದುಕೊಂಡು,ಅಲ್ಲಿಗೆ ಹೋದಾಗ ಎಲ್ಲ ರೆಡಿ ಮಾಡಿ ಇಟ್ಟಿದ್ದರು.ಇಬ್ಬರು ಸಾಕ್ಷಿ ಯಾ ಸಹಿಯನ್ನು ಅಲ್ಲೇ ಹೀಗೆ ನನ್ನ ಹಾಗೆ ಬೇರೆ ಕೆಲಸಕ್ಕೆ ಬಂದವರ ಕೈಯಲ್ಲಿ ಹಾಕಿಸಿ ಆಯಿತು.೧೨೦ ರು ಫಿ. ೨೦ ರು ಸ್ಟಾಂಪ್ ಪೇಪರ್,೧೦೦ ರು ಅವರ ಫಿ.ಆಫ್ಫಿದವತ್ , ಮೇಲೆ ಹೇಳಿದ ಎಲ್ಲ ರೆಕಾರ್ಡ್ಸ್ ಮತ್ತು ಅಪ್ಲಿಕೇಶನ್ ಫಾರಂ ಫಿಲ್ ಮಾಡಿ, ನೆಮ್ಮದಿ ಕೇಂದ್ರದಲ್ಲಿ ಕೊಟ್ಟು ಮನೆಗೆ ಬಂದೆ.ಇನ್ನು ಒಂದು ೧೦ ದಿನ ಬಿಟ್ಟು ಫೋನ್ ಮಾಡಿ,ಬಂದ ಕೂಡಲೇ ತಗೊಂಡು ಹೋಗಬಹುದು ಎಂದರು.

ಮತ್ತೆ ಒಂದು ದಿನ ಬಿಟ್ಟು ಇನ್ನೊಂದು ಸಾರಿ ಪೋಲಿಸ್ ಸ್ಟೇಷನ್ ಗೆ ಹೋದೆ.ಆದರೆ ಈಗ ಇದ್ದ ಅಧಿಕಾರಿಗಳು ಎಲ್ಲ ಬೇರೆ,ಸ್ವಲ್ಪವೂ ಮನುಷ್ಯತ್ವ ವೆ ಇಲ್ಲದವರಂತೆ ವರ್ತಿಸಿದರು."ಏನ್ರಿ ನಿಮ್ಮದು?,ಬಂದ್ರೆ ನಾವೇ ಫೋನ್ ಮಾಡಿ ತಿಳಿಸುತ್ತೇವೆ,ಅದು ಅಷ್ಟು ಬೇಗ ಎಲ್ಲ ಬರಲ್ಲ,ಒಂದು ೧೫ ದಿನ ಹೋಗುತ್ತೆ ,ಯಾರ್ರೀ ನಿಮ್ಮನ್ನು ಒಳಗೆ ಬಿಟ್ಟಿದ್ದು ಎಂದು ಜೋರು ಮಾಡಿದರು." ಇನ್ನು ಅವರಾಗಿ ಫೋನ್ ಮಾಡದೇ,ನಾನು ಇಲ್ಲಿಗೆ ಪುನಃ ಬರಲ್ಲ ಎಂದು ಮನಸ್ಸಲ್ಲೇ ನಿರ್ಧರಿಸಿ ಸೀದಾ ಮನೆಗೆ ಬಂದೆ.ತಂದೆಗೆ ಎಲ್ಲ ವಿಷಯ ತಿಳಿಸಿದೆ.ಕಾದೆ ,ಕಾದೆ ದಿನ ಹತ್ತಾಯಿತು,ಯಾವುದೇ ಫೋನ್ ಬರಲಿಲ್ಲ.ಮತ್ತೆ ಪೋಲಿಸ್ ಸ್ಟೇಷನ್ ಗೆ ಹೋಗಿ ಕೇಳುವ ಧೈರ್ಯ ನನಗೆ ಇರಲಿಲ್ಲ.ಇದು ಇನ್ನು ಹೇಗಾದರು ಪಕ್ಕ,ಪಕ್ಕ ಆಗುವುದಿಲ್ಲ,ಆಗಷ್ಟೇ ಜುಲೈ ೧೫ ರಿಂದ ಕಾಲೇಜಿನಲ್ಲಿ ಪ್ಲೇಸ್ಮೆಂಟ್ ಸುರುವಾಗಬಹುದು ಎಂದು ರೂಮರ್ ಹಬ್ಬಿತ್ತು.ಇನ್ನು ಕಾಯುವುದು ವ್ಯರ್ಥ ಎಂದು ನಿರ್ಧರಿಸಿ ಜುಲೈ ಕ್ಕೆ ಮೈಸೂರಿಗೆ ಬಂದೆ.

ಪ್ಲೇಸ್ಮೆಂಟ್ ಮುಂದೆ,ಮುಂದೆ ಹೋಗುತ್ತಾ ಇದೆ,ಇನ್ನು ಸುರುವಾಗಲಿಲ್ಲ. ಇತ್ತ ಮನೆಯಲ್ಲಿ ತಂದೆಗೆ ಯಾಕೋ ಅನುಮಾನ ಬರತೊಡಗಿತು,ದಿನ ೧೫ ಆಯಿತು,ಇನ್ನು ಏನು ಪೋಲಿಸ್ ಸ್ಟೇಷನ್ ಗೆ ಫೈಲೇ ಬಂದಿಲ್ವಾ ಅಥವಾ ನಾವೇ ಹೋಗಿ ಇನ್ನೊಮ್ಮೆ ಕೇಳಬೇಕ ? ತಂದೆ ಕೊನೆಗೆ ಪೋಲಿಸ್ ಸ್ಟೇಷನ್ ಗೆ ಹೋದರು.ಜುಲೈ ೨೧ ಕ್ಕೆ , ಅಲ್ಲಿ ಹೋಗಿ ಫೈಲ್ ನಂಬರ್ ಎಲ್ಲ ಹೇಳಿದಾಗ,ಇದು ಬಂದು ಆಗಲೇ ಒಂದು ವಾರ ಆಗಿದೆ,ಇನ್ನೊಂದು ವಾರ ಕಳೆದಿದ್ದರೆ ನಾವು ವಿದ್ಯಾರ್ಥಿ ಊರಲ್ಲಿ ಇಲ್ಲ ಎಂದು ರಿಪೋರ್ಟ್ ಬರೆದು ಫೈಲನ್ನು ಪುನಃ ಕಳಿಸುತ್ತಿದ್ದೆವು ಎಂದರು. ಆಗ ತಂದೆ ಅಲ್ಲ ಬಂದ ಕೂಡಲೇ ನೀವು ಕಾಲ್ ಮಾಡ್ತೀರ ಅಂತ ಹುಡುಗ ಹೇಳಿದ್ದ ಎಂದಾಗ,ಕೆಲಸ ಆಗಬೇಕಾದ್ದು ನಮಗಾ,ನಿಮಗ ನೀವು ಬಂದು ಕೇಳಬೇಕು,ನಾವು ಕಾಲ್ ಮಾಡಿ ಹೇಳುವ ಕ್ರಮ ಇಲ್ಲ ಎಂದರು.ತಂದೆ ಅವರನ್ನು "ಸಮಾಧಾನ" ಮಾಡಿ, ಸರಿ ನಾಡಿದ್ದು ೨೪ ಕ್ಕೆ ಹುಡುಗ ಬರ್ತಾನೆ, ದಿನ ಎಲ್ಲ ಕೆಲಸ ಮುಗಿಸಿ ಬಿಡುವ ಎಂದು ಮಾತಾಡಿದರು.ಆಮೇಲೆ ನನಗೆ ಫೋನ್ ಮಾಡಿ, ನಾಳೆ ಹೊರಟು ಬಾ ಎಂದರು.

ನಾನು ಶುಕ್ರವಾರ (೨೩ ಜುಲೈ ) ರಾತ್ರಿ ಊರಿಗೆ ಹೊರಟೆ.ಮರುದಿನ ಬೆಳಗ್ಗೆ ಜನ ಸಾಕ್ಷಿ ಜೊತೆಗೆ ಪೋಲಿಸ್ ಸ್ಟೇಷನ್ ಗೆ ಹೋಗಿ ಎಲ್ಲ ಕೆಲಸ ಮುಗಿಸಿ ಆಯಿತು ಆಗ ಗಂಟೆ ಮಧ್ಯಾನ್ನ ೧೨,ಇನ್ನು ಬಾಕಿ ಇರುವುದು "ಎಸ್ " ಭೇಟಿ ಮಾತ್ರ.ಅವರು ಅಂತಿಮ ಸಹಿ ಹಾಕುವವರು ,"ರೆಕಮ0ಡೆಡ್ದು" ಎಂಬ ಸೀಲಿನ ಮೇಲೆ ಅಂತಿಮ ಮುದ್ರೆ ಒತ್ತುವವರು,ಕಾದು ಕಾದು ರಾತ್ರಿ
೩೦ ಗೆ ದರ್ಶನ ಭಾಗ್ಯ ಸಿಕ್ಕಿತು. ಏನು ಮಾಡುವುದು? ಕ್ರಿಮಿನಲ್ ಮೊಕದ್ದಮೆ ಇದೆಯಾ? ಮುಂತಾದ ಪ್ರಶ್ನೆಗಳನ್ನು ಅವರ ರೀತಿಯಲ್ಲಿ ಕೇಳಿದರು. ಎಲ್ಲಕ್ಕೂ ಉತ್ತರಿಸಿದ ಮೇಲೆ ಸರಿ ಹೋಗಪ್ಪ ಸಹಿ ಹಾಕ್ತೇನೆ ಎಂದರು.

ಹೀಗೆ ಎಲ್ಲ ಕೆಲಸ ಮುಗಿಸುವಷ್ಟರಲಿಲ್ಲ ನನಗೆ ಸಾಕು,ಸಾಕು ಆಗಿತ್ತು. ಯಾವುದೇ ಕೆಲಸಕ್ಕೆ ಹೊರಡುವ ಮೊದಲು ಸರಿಯಾಗಿ ತಿಳಿದುಕೊಂಡು ಒಳ್ಳೆಯ ಯೋಜನೆ ಹಾಕಿ ಮಾಡಿ,ಇಲ್ಲವಾದರೆ ನನ್ನ ಹಾಗೆ ಒಂದೊಂದು ಕೆಲಸಕ್ಕೂ ಎರಡೆರಡು ಸಲ ಓಡಾದಬೇಕಾಗುತ್ತೆ.ಇನ್ನು ಕಾಯುತ್ತ ಇದ್ದೇನೆ,ಇವತ್ತಿಗೆ ಅಗಸ್ತು ೨೮,ಇನ್ನು ಪಾಸುಪೋರ್ಟ್ ಬಂದಿಲ್ಲ.ಶೀಘ್ರದಲ್ಲಿ ಬರಬಹುಹುದು,ನಾನು ಅದೇ ಯೋಚನೆಯಲ್ಲಿ ಇದ್ದೇನೆ..... ಎಂಬಲ್ಲಿಗೆ ಪುರಾಣ ಮುಗಿಯಿತು.

2 comments: